15-09-2023

ಭಾರತ-ಶ್ರೀಲಂಕಾ ಏಷ್ಯಾಕಪ್ ಫೈನಲ್ ಪಂದ್ಯ ಯಾವಾಗ?

ಇಂಡೋ-ಲಂಕಾ

ಏಷ್ಯಾಕಪ್ 2023 ಫೈನಲ್​ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿ ಆಗಲಿದೆ.

ಫೈನಲ್ ಯಾವಾಗ?

ಭಾರತ ಹಾಗೂ ಶ್ರೀಲಂಕಾ ನಡುವಣ ಬಹುನಿರೀಕ್ಷಿತ ಏಷ್ಯಾಕಪ್ ಫೈನಲ್ ಪಂದ್ಯ ಸೆಪ್ಟೆಂಬರ್ 17 ಭಾನುವಾರದಂದು ನಡೆಯಲಿದೆ.

ಪಂದ್ಯ ಎಲ್ಲಿ?

ಭಾರತ ಹಾಗೂ ಶ್ರೀಲಂಕಾ ಏಷ್ಯಾಕಪ್ ಫೈನಲ್ ಪಂದ್ಯ ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ.

ಎಷ್ಟು ಗಂಟೆಗೆ?

ಭಾರತ-ಶ್ರೀಲಂಕಾ ಏಷ್ಯಾಕಪ್ ಫೈನಲ್ ಪಂದ್ಯ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ಇದಕ್ಕೂ ಮುನ್ನ 2:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.

11ನೇ ಫೈನಲ್

ಭಾರತ ಕ್ರಿಕೆಟ್ ತಂಡ ಏಷ್ಯಾಕಪ್ ಇತಿಹಾಸದಲ್ಲಿ ಹನ್ನೊಂದನೇ ಬಾರಿಗೆ ಫೈನಲ್ ತಲುಪಿದ ಸಾಧನೆ ಮಾಡಿದೆ.

12ನೇ ಫೈನಲ್

ಶ್ರೀಲಂಕಾ ತಂಡ ಅಗ್ರಸ್ಥಾನದಲ್ಲಿದ್ದು, ಏಷ್ಯಾಕಪ್ ಇತಿಹಾಸದಲ್ಲಿ ಹನ್ನೆರಡು ಬಾರಿ ಫೈನಲ್ ಗೇರಿದ ದಾಖಲೆ ಹೊಂದಿದೆ.

ಭಾರತ-ಬಾಂಗ್ಲಾ

ಇಂದು ಏಷ್ಯಾಕಪ್ 2023 ಸೂಪರ್-4 ನ ಕೊನೆಯ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ಮುಖಾಮುಖಿ ಆಗಲಿದೆ. ಭಾರತಕ್ಕಿಂದು ಔಪಚಾರಿಕ ಪಂದ್ಯವಷ್ಟೆ.

ಭಾರತ-ಬಾಂಗ್ಲಾ ಪಂದ್ಯಕ್ಕೆ ಮಳೆ?: ಇಲ್ಲಿದೆ ಹವಾಮಾನ ವರದಿ