ಭಾರತ-ಬಾಂಗ್ಲಾ ಪಂದ್ಯಕ್ಕೆ ಮಳೆ?: ಇಲ್ಲಿದೆ ಹವಾಮಾನ ವರದಿ
15-09-2023
ಇಂದು ಏಷ್ಯಾಕಪ್ 2023ರ ಸೂಪರ್-4 ನ ಕೊನೆಯ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡ ಮುಖಾಮುಖಿ ಆಗುತ್ತಿದೆ.
ಭಾರತ-ಬಾಂಗ್ಲಾ
ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಇಂಡೋ-ಬಾಂಗ್ಲಾ ಪಂದ್ಯಕ್ಕೆ ಕೂಡ ಮಳೆ ಅಡ್ಡಿಪಡಿಸಲಿದೆ.
ಮಳೆ ಅಡ್ಡಿ?
ಅಕ್ಯುವೆದರ್ ಪ್ರಕಾರ, ಭಾರತ-ಬಾಂಗ್ಲಾದೇಶ ಪಂದ್ಯದ ದಿನದಂದು ಕೊಲಂಬೊದಲ್ಲಿ 65 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಶೇ. 65 ರಷ್ಟು ಮಳೆ
ಬೆಳಗ್ಗೆ 7 ರಿಂದ 9 ರವರೆಗೆ ಮತ್ತು ಸಂಜೆ 5, 8 ಗಂಟೆಗೆ ಮತ್ತು ರಾತ್ರಿ 9 ಗಂಟೆಗೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. 90 ಪ್ರತಿಶತ ಮೋಡ ಕವಿದ ವಾತಾವರಣ ಇರಲಿದೆ.
ಗುಡುಗು ಸಹಿತ ಮಳೆ
ಭಾರತ-ಬಾಂಗ್ಲಾದೇಶ ಪಂದ್ಯದ ಆರಂಭಕ್ಕೆ ಮಳೆ ಅಡ್ಡಿ ಪಡಿಸುವ ಸೂಚನೆ ಇಲ್ಲ. ಆದರೆ, ಸಂಜೆ ವೇಳೆಗೆ ಜೋರಾಗಿ ಮಳೆ ಸುರಿಯಬಹುದು.
ಸಂಜೆ ಜೋರು ಮಳೆ
ಭಾರತ-ಬಾಂಗ್ಲಾದೇಶ ನಡುವಣ ಪಂದ್ಯ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. 2:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.
ಎಷ್ಟು ಗಂಟೆಗೆ?
ಈ ಪಂದ್ಯದಿಂದ ಭಾರತ ಪರ ಬುಮ್ರಾ, ಸಿರಾಜ್, ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲಾಗುತ್ತೆ ಎಂದು ತಿಳಿಬಂದಿದೆ. ಶಮಿ, ಥಾಕೂರ್, ಪ್ರಸಿದ್ಧ್ ಆಡಲಿದ್ದಾರಂತೆ.
ಬದಲಾವಣೆ
ಏಷ್ಯಾಕಪ್ನಲ್ಲಿಂದು ಭಾರತ-ಬಾಂಗ್ಲಾದೇಶ ಮುಖಾಮುಖಿ
ಇನ್ನಷ್ಟು ಓದಿ