15-09-2023
ಏಷ್ಯಾಕಪ್ನಲ್ಲಿಂದು ಭಾರತ-ಬಾಂಗ್ಲಾದೇಶ ಮುಖಾಮುಖಿ
ಔಪಚಾರಿಕ ಪಂದ್ಯ
ಏಷ್ಯಾಕಪ್'ನಲ್ಲಿಂದು ಭಾರತ-ಬಾಂಗ್ಲಾದೇಶ ಮುಖಾಮುಖಿ ಆಗಲಿದೆ. ಫೈನಲ್'ಗೇರಿರುವ ಭಾರತಕ್ಕೆ ಇದೊಂದು ಕೇವಲ ಔಪಚಾರಿಕ ಪಂದ್ಯವಷ್ಟೆ.
ಪಂದ್ಯ ಎಲ್ಲಿ?
ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತ ಹಾಗೂ ಬಾಂಗ್ಲಾದೇಶ ನಡುವಣ ಸೂಪರ್-4ನ ಕೊನೆಯ ಪಂದ್ಯ ನಡೆಯಲಿದೆ.
ಎಷ್ಟು ಗಂಟೆಗೆ?
ಭಾರತ ಹಾಗೂ ಬಾಂಗ್ಲಾದೇಶ ನಡುವಣ ಇಂದಿನ ಪಂದ್ಯ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. 2:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.
ಭಾರತದಲ್ಲಿ ಬದಲಾವಣೆ
ಭಾರತಕ್ಕೆ ಇಂದಿನ ಪಂದ್ಯ ಲೆಕ್ಕಕ್ಕಿಲ್ಲದ ಕಾರಣ ಪ್ಲೇಯಿಂಗ್ ಇಲೆವೆನ್ನಲ್ಲಿ ಪ್ರಮುಖ ಬದಲಾವಣೆ ನಿರೀಕ್ಷಿಸಲಾಗಿದೆ. ಹಿರಿಯ ಆಟಗಾರರು ವಿಶ್ರಾಂತಿ ತೆಗೆದುಕೊಳ್ಳಬಹುದು.
ರೋಹಿತ್-ಕೊಹ್ಲಿ ಔಟ್
ರೋಹಿತ್ ಶರ್ಮಾ, ಕೊಹ್ಲಿ, ಜಡೇಜಾ ಮತ್ತು ಕುಲ್ದೀಪ್ ವಿಶ್ರಾಂತಿ ಪಡೆದುಕೊಳ್ಳುವ ಸಾಧ್ಯತೆ ಇದೆ. ಸೂರ್ಯ, ತಿಲಕ್, ಶಮಿ, ಪ್ರಸಿದ್ಧ್ ಕಣಕ್ಕಿಳಿಯಬಹುದು.
ಭಾರತ ದಾಖಲೆ
ಪ್ರೇಮದಾಸ ಮೈದಾನದಲ್ಲಿ ಟೀಮ್ ಇಂಡಿಯಾ ಉತ್ತಮ ದಾಖಲೆಯನ್ನು ಹೊಂದಿದೆ, ತನ್ನ ಕೊನೆಯ 10 ಪಂದ್ಯಗಳಲ್ಲಿ 9 ಪಂದ್ಯಗಳನ್ನು ಗೆದ್ದು ಬೀಗಿದೆ.
ಫೈನಲ್ ಯಾವಾಗ?
ಏಷ್ಯಾಕಪ್ 2023 ಫೈನಲ್ ಪಂದ್ಯ ಸೆ. 17 ರಂದು ನಡೆಯಲಿದೆ. ಪ್ರಶಸ್ತಿಗಾಗಿ ಭಾರತ ಹಾಗೂ ಶ್ರೀಲಂಕಾ ಸೆಣೆಸಾಟ ನಡೆಸಲಿದೆ.
ಏಷ್ಯಾಕಪ್'ನಲ್ಲಿ ಭಾರತೀಯ ಕ್ರಿಕೆಟ್ ಆಟಗಾರರಿಗೆ ಸಿಗುವ ಸಂಭಾವಣೆ ಎಷ್ಟು?
ಇನ್ನಷ್ಟು ಓದಿ