ಕಾರಿನೊಳಗೆ ಈ ಕೆಲವು ವಸ್ತುಗಳನ್ನು ಇಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ!
11 December 2024
Pic credit - Pintrest
Malashree Anchan
ಏರ್‌ಬ್ಯಾಗ್ ಟ್ಯಾಗ್ ಅನ್ನು ಸ್ಕಿಡ್ ಮ್ಯಾಟ್ ಅಥವಾ ಸೀಟ್ ಕವರ್‌ನಿಂದ ಮುಚ್ಚಬೇಡಿ, ಏಕೆಂದರೆ ಇದು ಅಗತ್ಯಬಿದ್ದಾಗ ಕಾರ್ಯನಿರ್ವಹಿಸದೆ ಇರುವಂತಹ ಸಾಧ್ಯತೆ ಇರುತ್ತದೆ.
Pic credit - Pintrest
ಕಾರಿನಲ್ಲಿರುವ ಕನ್ನಡಿಯ ಮೇಲೆ ಪೆಂಡೆಂಟ್ ಅಥವಾ ಸರವನ್ನು ನೇತುಹಾಕಬೇಡಿ, ಏಕೆಂದರೆ ಇದು ಚಾಲನೆ ಮಾಡುವಾಗ ನಿಮ್ಮ ಗಮನವನ್ನು ಬೇರೆಡೆ ಸೆಳೆಯುವ ಸಾಧ್ಯತೆ ಇರುತ್ತದೆ.
Pic credit - Pintrest
ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಕನ್ನಡಕಗಳನ್ನು ಇಡಬಾರದು. ಏಕೆಂದರೆ ಸೂರ್ಯನ ಬೆಳಕು ನೇರ ಕನ್ನಡಕದ ಮೇಲೆ ಬಿದ್ದು, ಇದರಿಂದ ಬೆಂಕಿ ಹತ್ತಿಕೊಳ್ಳುವಂತಹ ಸಾಧ್ಯತೆ ಇರುತ್ತದೆ.
Pic credit - Pintrest
ನಿಮ್ಮ ಕಾರಿನಲ್ಲಿ ಪವರ್‌ಬ್ಯಾಂಕ್‌ಗಳು, ಪಾನೀಯ, ಸ್ಪ್ರೇ, ಲೈಟರ್‌ಗಳು, ಸುಗಂಧ ದ್ರವ್ಯಗಳಂತಹ ವಸ್ತುಗಳನ್ನು ಕೊಂಡೊಯ್ಯಬೇಡಿ, ಏಕೆಂದರೆ ಇವೆಲ್ಲವೂ ಸುಡುವ ಮತ್ತು ತಕ್ಷಣವೇ ಬೆಂಕಿ ಹತ್ತಿಕೊಳ್ಳುವಂತಹ ವಸ್ತುಗಳಾಗಿವೆ.
Pic credit - Pintrest
ಅಪ್ಪಿತಪ್ಪಿಯೂ ಪ್ಲಾಸ್ಟಿಕ್ ಬಾಟಲಿಗಳನ್ನು ಇಡಬೇಡಿ, ಇದು ಬೆಂಕಿಯ ಅಪಾಯವನ್ನು ಉಂಟು ಮಾಡುವುದಲ್ಲದೆ, ಇದು ಬ್ರೇಕ್ ಪೆಡಲ್ ಅಡಿಯಲ್ಲಿ ಸಿಲುಕಿ ಅಪಘಾತಕ್ಕೂ ಕಾರಣವಾಗಬಹುದು.
Pic credit - Pintrest
ಫುಲ್ ಫ್ಲೋರ್ ಮ್ಯಾಟ್‌ಗಳನ್ನು ಬಳಸುವುದು ಸಹ ಅಪಾಯಕಾರಿ, ಏಕೆಂದರೆ ಇದು ಪೆಡಲ್‌ನೊಂದಿಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ.
Pic credit - Pintrest
ಕೈಗಳು ವಿಪರೀತವಾಗಿ ಬೆವರಿದಾಗ ಕೈ ಸ್ಟೀರಿಂಗ್ ವೀಲ್‌ನಿಂದ ಜಾರಿಕೊಳ್ಳಬಹುದು ಆದ್ದರಿಂದ ಮೃದುವಾದ ಸ್ಟೀರಿಂಗ್ ವೀಲ್ ಕವರ್ ಕೂಡಾ ಬಳಸುವುದು ಸೂಕ್ತವಲ್ಲ.