ಅಂಗನವಾಡಿ ಕೇಂದ್ರಕ್ಕೆ ಬಂದ ಹಾವು, ಬೆಚ್ಚಿಬಿದ್ದ ಮಕ್ಕಳು

12-12-2023

Author: Ayesha

ಅಂನವಾಡಿ ಕೇಂದ್ರದಲ್ಲಿ ಆಟ ಆಡುತ್ತ ಪಾಠ ಕೇಳುತ್ತ ಕುಳಿತಿದ್ದ ಪುಟ್ಟ ಪುಟ್ಟ ಮಕ್ಕಳು ಹಾವಿನ ಮರಿಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಸೈದಾಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹಾವಿನ ಮರಿಯೊಂದು ಕಾಣಿಸಿಕೊಂಡಿದೆ.

ಸದ್ಯ ಅಂಗನವಾಡಿ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಆದರೂ ಮಕ್ಕಳಿರುವ ಜಾಗಕ್ಕೆ ಹಾವು ನುಗ್ಗಿದ ಬಗ್ಗೆ ಗ್ರಾಮಸ್ಥರು ಆತಂಕ ಹೊರ ಹಾಕಿದ್ದಾರೆ.

ಉರಗ ರಕ್ಷಕ ಹಾವಿನ ಮರಿಯನ್ನು ಹಿಡಿದು ಅಂಗನವಾಡಿಯಿಂದ ದೂರು ಹಾಕಿದ್ದಾರೆ. ಹಾವಿನ ಮರಿಯಿಂದಾಗಿ ಅಂಗನವಾಡಿ ಸಿಬ್ಬಂದಿ ಕೂಡ ವಿಚಲಿತರಾಗಿದ್ದರು.  

ಹಾವಿನ ಮರಿಯನ್ನು ಕಂಡ ಪುಟ್ಟ ಪುಟ್ಟ ಮಕ್ಕಳು ಆತಂಕದಲ್ಲೇ ಅಂಗನವಾಡಿಗೆ ಬಂದು ಪಾಠ ಕೇಳುವಂತಾಗಿದೆ.

ಈಗಾಗಲೇ ಎರಡು ಮೂರು ಬಾರಿ ಅಂಗನವಾಡಿ ಕೇಂದ್ರದಲ್ಲಿ ಹಾವು ಕಾಣಿಸಿಕೊಂಡಿದ್ದರೂ ಗ್ರಾ. ಪಂ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಿಲ್ಲ. ದಿವ್ಯ ನಿರ್ಲಕ್ಷ್ಯವಹಿಸಿದ್ದಾರೆ.

ಅಂಗನವಾಡಿ ಕೇಂದ್ರ ಚರಂಡಿಗೆ ಹೊಂದಿಕೊಂಡಿದೆ. ಅಂಗನವಾಡಿ ಸುತ್ತಮುತ್ತ ಸ್ವಚ್ಛತೆ ಮಾಯವಾಗಿದೆ. ಹೀಗಾಗಿ ಮಕ್ಕಳಿಗೆ  ರೋಗಗಳು ಬರಬಹುದು ಎಂಬ ಭಯದಲ್ಲಿ ಪೋಷಕರಿದ್ದಾರೆ.

ಅಂಗನವಾಡಿ ಕೇಂದ್ರ ಚರಂಡಿಗೆ ಹೊಂದಿಕೊಂಡಿದ್ದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪೋಷಕರು, ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.