ಬಾಂಗ್ಲಾ ಕ್ರಿಕೆಟಿಗ ಮಶ್ರಫೆ ಮೊರ್ತಜಾ ಮನೆ ಬೆಂಕಿಗಾಹುತಿ

07  August 2024

Pic credit: Google

ಪೃಥ್ವಿ ಶಂಕರ

Pic credit: Google

ಬಾಂಗ್ಲಾದೇಶದಲ್ಲಿ ಪ್ರಸ್ತುತ ಹಿಂಸಾಚಾರ ಮಿತಿ ಮೀರಿದ್ದು, ಮೀಸಲಾತಿ ಕಾಯಿದೆಯಿಂದಾಗಿ ನಡೆಯುತ್ತಿರುವ ಹಿಂಸಾಚಾರದಲ್ಲಿ 400ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Pic credit: Google

ಈಗಾಗಲೇ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ್ದಾರೆ.

Pic credit: Google

ರಾಜಧಾನಿ ಢಾಕಾ ಒಂದರಲ್ಲೇ 4 ಲಕ್ಷ ಜನ ಬೀದಿಗಿಳಿದಿದ್ದಾರೆ. ಇದೆಲ್ಲದರ ನಡುವೆ ಬಾಂಗ್ಲಾ ಕ್ರಿಕೆಟ್ ತಂಡದ ಮಾಜಿ ನಾಯಕ ಮಶ್ರಫೆ ಮೊರ್ತಜಾ ಅವರ ಮನೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.

Pic credit: Google

ವಾಸ್ತವವಾಗಿ ಮಶ್ರಫೆ ಮೊರ್ತಜಾ ಅವರು ಶೇಖ್ ಹಸೀನಾ ಅವರ ಬಾಂಗ್ಲಾದೇಶ ಅವಾಮಿ ಲೀಗ್ ಪಕ್ಷದ ಸಂಸದರಾಗಿದ್ದು, ಉದ್ರಿಕ್ತರ ಗುಂಪು ಅವರ ಮನೆ ಮೇಲೆ ದಾಳಿ ಮಾಡಿದೆ.

Pic credit: Google

ದಾಳಿಕೋರರು ಮೊರ್ತಜಾ ಅವರ ಮನೆಯ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ್ದಾರೆ ಎಂದು ಬಾಂಗ್ಲಾದೇಶದ ಮಾಧ್ಯಮ, ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ. ದಾಳಿ ನಡೆದಾಗ ಮೊರ್ತಜಾ ಮನೆಯಲ್ಲಿ ಇರಲಿಲ್ಲ ಎಂದು ವರದಿಯಾಗಿದೆ.

Pic credit: Google

ಮೊರ್ತಜಾ ತಮ್ಮ ಸುದೀರ್ಘ ಕ್ರಿಕೆಟ್ ವೃತ್ತಿಜೀವನದಲ್ಲಿ, 390 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದಿದ್ದಾರೆ ಮತ್ತು 36 ಟೆಸ್ಟ್‌, 220 ಏಕದಿನ ಮತ್ತು 54 ಟಿ20 ಪಂದ್ಯಗಳಲ್ಲಿ 2955 ರನ್ ಸಹ ಬಾರಿಸಿದ್ದಾರೆ.

Pic credit: Google

ಕ್ರಿಕೆಟ್​ನಿಂದ ನಿವೃತ್ತಿ ಪಡೆದ ನಂತರ ಮೊರ್ತಜಾ ಅವರು 2018 ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ್ದರು. ಅವರು ಹಸೀನಾ ನೇತೃತ್ವದಲ್ಲಿ ಅವಾಮಿ ಲೀಗ್‌ಗೆ ಸೇರಿ, ನರೆಲ್ -2 ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.