ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂಜಿನಿಯರ್ ಆಗುವುದು ಹೇಗೆ?

08 September 2023

Pic Credit: Google

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂಬುದು ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ. ಮನುಷ್ಯನ ಮಿದುಳಿನ ರೀತಿಯಲ್ಲಿ ಸ್ವಂತವಾಗಿ ಸಂಕೀರ್ಣ ಕ್ರಿಯೆಗಳನ್ನು ಮಾಡುವ ಪ್ರಯತ್ನ.

ಎಐ ತಂತ್ರಜ್ಞಾನ

Pic Credit: Google

ಎಐ ಈಗ ಜಾಗತಿಕವಾಗಿ ಬಹಳ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನ. ಬಹುತೇಕ ಎಲ್ಲಾ ಕ್ಷೇತ್ರಗಳಿಗೂ ಇದರ ಅಗತ್ಯತೆ ಇದೆ. ಹೀಗಾಗಿ ಉದ್ಯೋಗಾವಕಾಶ ಹೆಚ್ಚು.

ಉದ್ಯೋಗಾವಕಾಶ ಹೆಚ್ಚು

Pic Credit: Google

ಕಂಪ್ಯೂಟರ್ ವಿಜ್ಞಾನ ವಿಷಯದ ಒಂದು ಮುಖ್ಯಭಾಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್. ಇದರಲ್ಲಿ ಸ್ಪೆಷಲೈಸ್ ಆದರೆ ಸಾಕಷ್ಟು ಉದ್ಯೋಗಾವಕಾಶ ಇರುತ್ತದೆ.

ಎಐ ಎಂಜಿನಿಯರ್

Pic Credit: Google

ನಿಮಗೆ ಲೆಕ್ಕಬಿಡಿಸುವ, ಸಮಸ್ಯೆ ಬಗೆಹರಿಸುವ ಇಚ್ಛೆ, ಚಾಕಚಕ್ಯತೆ ಇದ್ದರೆ ಆರ್ಟಿಫಿಶಿಯಲ್ ಎಂಜಿನಿಯರ್ ಆಗಬಹುದು. ಅದಕ್ಕೆ ಬೇಕಾಗುವ ಕೌಶಲ್ಯಗಳ ವಿವರ ಮುಂದಿನ ಸ್ಲೈಡ್​ಗಳಲ್ಲಿ ನೋಡಿ.

ಪೂರಕ ಗುಣಸ್ವಭಾವ

Pic Credit: Google

ಎಐ ಎಂಜಿನಿಯರ್ ಆಗಬೇಕೆಂದರೆ ನಿಮಗೆ ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನ ಕಲಿಯುವುದು ಸುಲಭವಿರಬೇಕು. ಸ್ಟಾಟಿಸ್ಟಿಕ್ಸ್, ಪ್ರೊಬಾಬಿಲಿಟಿ ಜ್ಞಾನ ಬಲವಾಗಿರಬೇಕು.

ಕೌಶಲ್ಯಗಳೇನು ಬೇಕು?

Pic Credit: Google

ಯಾವುದೇ ಕ್ರಮಾವಳಿ (algorithm) ರಚಿಸಬಲ್ಲಂತಹ ಪೈತಾನ್, ಸಿ, ಸಿ++ ಇತ್ಯಾದಿ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್, ಡಾಟಾ ಸ್ಟ್ರಕ್ಚರ್ ಬಗ್ಗೆ ಬಲವಾದ ಜ್ಞಾನ ಇರಬೇಕು.

ಕೌಶಲ್ಯಗಳೇನು ಬೇಕು?

Pic Credit: Google

ಮೆಷಿನ್ ಕಲಿಕೆಯ ಮೂಲ ಅಂಶಗಳು ತಿಳಿದಿರಬೇಕು. ಅಲ್ಗಾರಿದಂ ಆಧಾರಿತ ಮಾದರಿಗಳನ್ನು ಟ್ರೈನ್ ಮಾಡಲು ಪವರ್ ಬಿಐ, ಡಾಟಾ ಕ್ಲೀನಿಂಗ್ ಸ್ಕಿಲ್ ಇವೆಲ್ಲವೂ ಬೇಕಾಗುತ್ತವೆ.

ಕೌಶಲ್ಯಗಳೇನು ಬೇಕು?

Pic Credit: Google

ನ್ಯೂರಲ್ ನೆಟ್ವರ್ಕ್, ಡೀಪ್ ಲರ್ನಿಂಗ್ ಇತ್ಯಾದಿ ಕೌಶಲ್ಯಗಳ ಜೊತೆಗೆ ವಿವಿಧ ಕ್ಲೌಡ್ ಪ್ಲಾಟ್​ಫಾರ್ಮ್​ಗಳನ್ನು ಬಳಸುವ ವಿಧಾನಗಳನ್ನು ತಿಳಿದಿರಬೇಕು.

ಕೌಶಲ್ಯಗಳೇನು ಬೇಕು?

Pic Credit: Google

ಒಟ್ಟಾರೆ ನಿಮಗೆ ಗಣಿತ, ವಿಜ್ಞಾನ ಮತ್ತು ಕಂಪ್ಯೂಟರ್ ತಂತ್ರಜ್ಞಾನದಲ್ಲಿ ಆಸಕ್ತಿ ಮತ್ತು ಚಾತುರ್ಯತೆ ಇದ್ದರೆ ಎಐ ಎಂಜಿನಿಯರ್ ಆಗಿ ಹೇರಳ ಹಣ ಸಂಪಾದನೆ ಮಾಡಬಹುದು.

Pic Credit: Google

Next Story: ಜಿ20 ಬಗ್ಗೆ ತಿಳಿಯಬೇಕಾದ ಅಗತ್ಯ ಸಂಗತಿಗಳು