ಬೆಂಗಳೂರು ಕರಗ: ಈ ಬಾರಿಯ ವಿಶೇಷವೇನು?

28 January 2025

Author: Ganapathi Sharma

ವಿಶ್ವವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ.

ಏಪ್ರಿಲ್ 12 ರ ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದೆ.

ಈ ಬಾರಿಯೂ ಪೂಜಾರಿ ಎ.ಜ್ಞಾನೇಂದ್ರ ಕರಗ ಹೊರಲಿದ್ದಾರೆ. ಇದೇ ಕೊನೆಯ ಬಾರಿ ಅವರು ಕರಗ ಹೊರಲಿದ್ದಾರೆ.

ಈಗಾಗಲೇ ಎ.ಜ್ಞಾನೇಂದ್ರ 14 ವರ್ಷಗಳಿಂದ ಬೆಂಗಳೂರು ಕರಗ ಹೊರುತ್ತಿದ್ದಾರೆ.

ಒಟ್ಟಾರೆಯಾಗಿ ಹನ್ನೊಂದು ದಿನಗಳ ಕಾಲ ಕರಗ ಶಕ್ತ್ಯೋತ್ಸವ ನಡೆಯಲಿದೆ.

ಮುಜರಾಯಿ ಇಲಾಖೆಯ ಕಾರ್ಯನಿರ್ವಾಹಣಾಧಿಕಾರಿ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ದಿನಾಂಕ ನಿಗದಿ ಮಾಡಲಾಯಿತು.

ಬೆಂಗಳೂರು ಕರಗ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಈ ಪೈಕಿ ದ್ರೌಪದಿಯ ಕಥೆ ಹಾಗೂ ಹಿನ್ನೆಲೆ ಹೆಚ್ಚು ಪ್ರಚಲಿತದಲ್ಲಿದೆ.

ಕರ್ನಾಟಕದ ವಿವಿಧ ಕಡೆಗಳಲ್ಲಿ ಕರಗ ಶಕ್ತ್ಯೋತ್ಸವ ನಡೆಯುತ್ತದೆಯಾದರೂ ಬೆಂಗಳೂರಿನ ಕರಗ ಐತಿಹಾಸಿಕವಾಗಿದೆ.

NEXT - ಕಳೆದ 1 ವರ್ಷದಲ್ಲಿ 19 ಲಕ್ಷ ಹೊಸ ವಾಹನಗಳ ನೋಂದಣಿ