ಒಂದು ದಿನದ ಪ್ರವಾಸಕ್ಕೆ ಬೆಂಗಳೂರಿನ ಆಸುಪಾಸಿನಲ್ಲೇ ಇವೆ ಈ 5 ತಾಣಗಳು
30 jUNE 2024
Pic credit - google
Gangadhar Saboji
ಸುಂದರ ತಾಣಗಳು
ಸಿಲಿಕಾನ್ ಸಿಟಿ ಹಲವಾರು ವಿಚಾರಗಳಿಗೆ ಹೆಸರುವಾಸಿಯಾಗಿದೆ. ಬೆಂಗಳೂರಿನ ಸುತ್ತಮುತ್ತ ನಮಗೆ ಸಾಕಷ್ಟು ಸುಂದರ ತಾಣಗಳು ನೋಡಲು ಸಿಗುತ್ತವೆ.
ಐದು ಸ್ಥಳಗಳಿಗೆ ಭೇಟಿ ನೀಡಿ
ಸದ್ಯ ನೀವು ಕೂಡ ಒಂದು ದಿನದ ಮಟ್ಟಿಗೆ ಬೆಂಗಳೂರಿನ ಬಳಿ ಪ್ರವಾಸಿ ತಾಣಗಳನ್ನು ಹುಡುತ್ತಿದ್ದರೆ ಈ ಐದು ಸ್ಥಳಗಳಿಗೆ ತಪ್ಪದೆ ಭೇಟಿ ನೀಡಿ.
ನಂದಿ ಬೆಟ್ಟ
ಬೆಂಗಳೂರಿನಿಂದ 60 ಕಿ,ಮೀ ದೂರದಲ್ಲಿರುವ ನಂದಿ ಬೆಟ್ಟ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದು. ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಬೈಕ್
ನಲ್ಲಿ ಹೋಗುತ್ತಾರೆ.
ಮೈಸೂರು
ತನ್ನ ಶ್ರೀಮಂತ ಪರಂಪರೆ ಮತ್ತು ರಾಜ ವೈಭವಕ್ಕೆ ಹೆಸರುವಾಸಿಯಾದ ಮೈಸೂರು, ಬೆಂಗಳೂರಿನಿಂದ ಸುಮಾರು 150 ಕಿ,ಮೀ ದೂರದಲ್ಲಿದೆ. ಮೈಸೂರಿನಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ.
ಶಿವನಸಮುದ್ರ ಫಾಲ್ಸ್
ಪ್ರಕೃತಿ ಪ್ರಿಯರಿಗೆ ಮತ್ತು ಫೋಟೋ ಕ್ರೇಜ್ ಇರುವವರಿಗೆ ಈ ಸ್ಥಳ ಬೆಸ್ಟ್. ಶಿವನಸಮುದ್ರ ಫಾಲ್ಸ್ ಬೆಂಗಳೂರಿನಿಂದ 130 ಕಿ.ಮೀ ದೂರದಲ್ಲಿದೆ.
ನೃತ್ಯಗ್ರಾಮ
ಬೆಂಗಳೂರಿನಿಂದ 35 ಕಿ. ಮೀ. ದೂರದಲ್ಲಿರುವ ನೃತ್ಯಗ್ರಾಮವು ಡ್ಯಾನ್ಸ್ ವಿಲೇಜ್ ಎಂದು ಪ್ರಸಿದ್ಧಿ. ಶಾಸ್ತ್ರೀಯ ಭಾರತೀಯ ನೃತ್ಯ ಪ್ರಕಾರಗಳಿಗೆ ಮೀಸಲಾಗಿರುವ ಒಂದು ವಿಶಿಷ್ಟ ತಾಣವಾಗಿದೆ.
ಭೀಮೇಶ್ವರಿ
ಬೆಂಗಳೂರಿನಿಂದ 100 ಕಿ.ಮೀ ದೂರದಲ್ಲಿರುವ ಭೀಮೇಶ್ವರಿ ಸಮೃದ್ಧ ಕಾಡು ಮತ್ತು ಕಾವೇರಿ ನದಿಯ ಮಧ್ಯೆ ನೆಲೆಸಿರುವ ಪ್ರಶಾಂತವಾದ ತಾಣವಾಗಿದೆ.