ಕರ್ನಾಟದಲ್ಲಿದೆ ಒಂದೇ ರಾತ್ರಿಯಲ್ಲಿ ದೆವ್ವಗಳಿಂದ ನಿರ್ಮಾಣವಾದ ದೇವಸ್ಥಾನ
Pic Credit -Pintrest
Author : Sayinanda
ಭಾರತದಂತಹ ದೇಶದಲ್ಲಿ ಇತಿಹಾಸ ಪ್ರಸಿದ್ಧ ರಾಜರುಗಳು ಆಳ್ವಿಕೆಯಲ್ಲಿ ನಿರ್ಮಾಣವಾದ ದೇವಾಲಯಗಳಿವೆ.
ಕರ್ನಾಟದಲ್ಲಿರುವ ಶ್ರೀ ಸುಂದರೇಶ್ವರ ಸ್ವಾಮಿ ದೇವಸ್ಥಾನವನ್ನು ನಿರ್ಮಾಣ ಮಾಡಿರುವುದು ದೆವ್ವಗಳಂತೆ, ಅಚ್ಚರಿಯೆನಿಸಿದರೂ ಈ ಇದು ಸತ್ಯ.
ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ಮಾರ್ಗದಲ್ಲಿನ ಬೊಮ್ಮವರ ಎಂಬ ಊರಿನಲ್ಲಿದೆ.
ಈ ದೇವಾಲಯದ ಮೇಲೆ ಭೂತಗಳ ವಿನ್ಯಾಸಗಳನ್ನು ಕಾಣಬಹುದು. ಪ್ರಾರಂಭದಲ್ಲಿ ಇಲ್ಲಿ ವಿಗ್ರಹಗಳೇ ಇರಲಿಲ್ಲ. ಇದೀಗ ಇಲ್ಲಿ ಮಹಾ ಶಿವನು ಸುಂದರೇಶ್ವರನಾಗಿ ನೆಲೆಸಿದ್ದಾನೆ.
ಸ್ಥಳೀಯರು ಹೇಳುವಂತೆ 600 ವರ್ಷಗಳ ಹಿಂದೆ ಈ ಊರಿನ ಜನರಿಗೆ ದೆವ್ವಗಳು ಕಾಟ ಕೊಡುತ್ತಿದ್ದವು.
ಬುಚ್ಚಯ್ಯ ಎಂಬ ಮಾಂತ್ರಿಕನು, ಅಲ್ಲಿನ ಜನರನ್ನು ದೆವ್ವಗಳಿಂದ ರಕ್ಷಿಸಲು ದೇವಸ್ಥಾನವೊಂದನ್ನು ನಿರ್ಮಿಸಿದ್ದನು. ಆದರೆ ದೆವ್ವಗಳು ಒಂದೇ ರಾತ್ರಿ ಆ ದೇವಸ್ಥಾನವನ್ನು ನಾಶ ಪಡಿಸಿತು ಎನ್ನಲಾಗಿದೆ.
ಸಿಟ್ಟಿನಲ್ಲಿ ಮಾಂತ್ರಿಕನು ದೆವ್ವಗಳನ್ನೇ ವಶಪಡಿಸಿಕೊಂಡನು. ದುಷ್ಟಶಕ್ತಿಗಳು ತಮ್ಮನ್ನು ಈ ಬಂಧನದಿಂದ ವಿಮುಕ್ತಿ ನೀಡು ಎಂದು ಕೇಳಿಕೊಂಡವು.
ಕೊನೆಗೆ ನೀವು ಕೆಡವಿ ಹಾಕಿದ ದೇವಸ್ಥಾನವನ್ನು ಮತ್ತೆ ಕಟ್ಟಿದರೆ ಮಾತ್ರ ವಿಮುಕ್ತಿ ಸಾಧ್ಯ ಎಂದನಂತೆ. ಹೀಗಾಗಿ ದೆವ್ವಗಳು ಒಂದೇ ರಾತ್ರಿಯಲ್ಲಿ ಆ ದೇವಸ್ಥಾನವನ್ನು ನಿರ್ಮಿಸಿತ್ತಂತೆ.
50 ವರ್ಷಗಳ ಹಿಂದೆ ಕುಡಿಯುವ ನೀರಿಗಾಗಿ ಭೂಮಿಯನ್ನು ಅಗಿಯುವಾಗಿ ಎಂಟು ಅಡಿ ಎತ್ತರದ ಶಿವಲಿಂಗ ಸಿಕ್ಕಿದ್ದು,