ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ಆರಂಭವಾಗಿದ್ದು, ಕಾಡುಮಲ್ಲೆಶ್ವರ ದೇವಸ್ಥಾನದ ಸುತ್ತ - ಮುತ್ತಾ ಜಾತ್ರೆಯ ವಾತಾವರಣ ನಿರ್ಮಾಣವಾಗಿದೆ.
ಪ್ರತಿ ಕಾರ್ತಿಕ ಮಾಸದ ಸಂದರ್ಭದಲ್ಲಿ ಆಯೋಜಿಸುವ ಕಡಲೆಕಾಯಿ ಪರಿಷೆ, ಈ ಬಾರಿ 7 ನೇ ವರ್ಷಕ್ಕೆ ಕಾಲಿಟ್ಟಿದ್ದು, ಡಿ.2ರಿಂದ ಡಿ.4ರ ವರೆಗೆ ನಡೆಯಲಿದೆ. ಈ ಪರಿಷೆ ಕಾಡು ಮಲ್ಲೇಶ್ವರ ಗೆಳಯರ ಬಳಗ ಮತ್ತು ಮುಜಾರಾಯಿ ಇಲಾಖೆ ಸಹಕಾರದಲ್ಲಿ ನಡೆಯುತ್ತಿದೆ.
ಮಲ್ಲೇಶ್ವರಂನಾ ಸುತ್ತ - ಮುತ್ತ ಹಬ್ಬದ ವಾತಾವರಣ ಕಂಡುಬರುತ್ತಿದೆ. ಈ ವರ್ಷದ ಕಡಲೆಕಾಯಿ ಪರಿಷೆಯಲ್ಲಿ 800 ಕೆಜಿ ಕಡಲೆ ಕಾಯಿಗಳಿಂದ ಶೃಂಗರಿಸಿದ ಇಪ್ಪತ್ತು ಅಡಿ ಉದ್ದ ಹಾಗೂ ಇಪತ್ತು ಅಡಿ ಎತ್ತರದ ಬಸವ ಮೂರ್ತಿ ಲೋಕಾರ್ಪಣೆ ಮಾಡಲಾಗಿದೆ.
ಕಾಡಿ ಮಲ್ಲೇಶ್ವರ ದೇವಸ್ಥಾನ ಹಾಗೂ ಗಂಗಾಭಿಕೆ ದೇವಸ್ಥಾನದಲ್ಲಿ ಕಡಲೆಕಾಯಿಯಿಂಲೇ ಅಲಂಕಾರ ಮಾಡಲಾಗಿದೆ. ಕಡಲೆಕಾಯಿ ಪರಿಷೆಗೆ 200 ಕ್ಕು ಹೆಚ್ಚು ಕಡೆಯಿಂದ ವ್ಯಾಪಾರಸ್ಥರು ಬಂದಿದ್ದಾರೆ.
ಆಂಧ್ರ, ತುಮಕೂರು, ತಮಿಳುನಾಡು, ಬೆಳಗಾವಿ, ದೊಡ್ಡ ಬಳ್ಳಾಪುರ, ಚಿಕ್ಕಬಳ್ಳಾಪು ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೈತರು ಬಂದಿದ್ದಾರೆ.
ಈ ಬಾರಿ ಕಡಿಲೆಕಾಯಿಗಳ ಬೆಲೆ ತುಸು ಜಾಸ್ತಿಯಾಗಿದ್ದು, ವ್ಯಾಪಾರಸ್ಥರು ಈ ಬಾರಿ ಹೆಚ್ಚಿನ ವ್ಯಾಪರದ ನಿರೀಕ್ಷೆಯಲ್ಲಿದ್ದಾರೆ. ಈ ಬಾರಿ 15 ಕ್ಕು ಹೆಚ್ಚು ಬಗೆಯ ಕಡಲೆ ಕಾಯಿಗಳನ್ನ ಪರಿಷೆಯಲ್ಲಿ ಕಾಣಬಹುದು.
ಡಿಸೆಂಬರ್ 4 ಬೆಳಗ್ಗೆ ಶ್ರೀ ಕಾಡುಮಲ್ಲಿಕಾರ್ಜುನ ಸ್ವಾಮಿಗೆ ಕಡಲೆಕಾಯಿ ಅಭಿಷೇಕ ಹಾಗೂ ಪ್ರಸಾದ ವಿನಿಯೋಗ ಇರಲಿದ್ದು, ಸಂಜೆ 6-30ಕ್ಕೆ ಭವಾನಿ ಗಾನ ವೃಂದದವರಿಂದ ವಿದೂಷಿ ಶೈಲಜ ಶ್ರೀನಾಥ್, ತಂಡದವರಿಂದ ಶಿವ ವೀಣಾ ಗಾನ ಸಂಗಮ ಇರಲಿದೆ.