ಹೊಸವರ್ಷ ದಿನದಂದು ನಮ್ಮ ಮೆಟ್ರೋಗೆ ಭರ್ಜರಿ ಆದಾಯ ಬಂದಿದೆ. 

01  Jan 2024

Author: Vivek Biradar

ಹೊಸವರ್ಷ ದಿನದಂದು ನಮ್ಮ ಮೆಟ್ರೋ ಸಂಚಾರವನ್ನು ತಡರಾತ್ರಿ 2 ಗಂಟೆವರೆಗೂ ವಿಸ್ತರಿಸಲಾಗಿತ್ತು. 

2023 ವರ್ಷ ಕೊನೆಯ ದಿನ ಹೆಚ್ಚಿನ ಸಂಖ್ಯೆಯಲ್ಲಿ ಜನರು ನಮ್ಮ ಮೆಟ್ರೋದಲ್ಲಿ ಸಂಚರಿಸಿದ್ದಾರೆ.

ಇದರಿಂದಾಗಿ ರವಿವಾರ ಡಿಸೆಂಬರ್​ 31 ರಂದು ಒಂದೇ ದಿನ ಮೆಟ್ರೋಗೆ 1.64 ಕೋಟಿಗೂ ಹೆಚ್ಚು ಆದಾಯ ಬಂದಿದೆ.

ಮೆಟ್ರೋಗೆ ಬರೋಬ್ಬರಿ 1 ಕೋಟಿ 64 ಲಕ್ಷ 74 ಸಾವಿರದ 918 ರೂ. ಆದಾಯವಾಗಿದೆ. 

ಭಾನುವಾರ ಮೆಟ್ರೋದಲ್ಲಿ 6 ಲಕ್ಷ 26 ಸಾವಿರದ 202 ಜನರ ಸಂಚಾರ ಮಾಡಿದ್ದಾರೆ.

ಸಾಮಾನ್ಯವಾಗಿ ಭಾನುವಾರ ಪ್ರಯಾಣಿಕರ ಸಂಖ್ಯೆ 5 ಲಕ್ಷ ದಾಟುವುದು ಅನುಮಾನ. 

ಆದರೆ ಭಾನುವಾರ ಹೊಸ ವರ್ಷಾಚರಣೆ ಇದ್ದ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ.

ಮತ್ತೆ ಅಗ್ರೆಸ್ ಆಟ ಶುರು ಮಾಡಿದ ವಿನಯ್ ಗೌಡ