ಬೆಂಗಳೂರಿನಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್

11 January 2025

Author: Ganapathi Sharma

ಬೆಂಗಳೂರಿಗೆ ಆಗಮಿಸಿದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಸಿಎಂ ಸಿದ್ದರಾಮಯ್ಯ ಸ್ವಾಗತಿಸಿದರು.

ಹೆಚ್​ಎಎಲ್​ ಏರ್​ಪೋರ್ಟ್​​​ನಲ್ಲಿ ಉಪರಾಷ್ಟ್ರಪತಿಗಳನ್ನು ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್ ಸ್ವಾಗತಿಸಿದರು.

ಸಚಿವ ಡಾ. ಎಂಸಿಸುಧಾಕರ್, ಸಿಎಸ್ ಶಾಲಿನಿ ರಜನೀಶ್​ಕೂಡ ಹಾಜರಿದ್ದರು.

ರಾಜ್ಯ ಲೋಕಸೇವಾ ಆಯೋಗಗಳ ಅಧ್ಯಕ್ಷರ 25ನೇ ರಾಜ್ಯ ಸಮ್ಮೇಳನದಲ್ಲಿ ಉಪರಾಷ್ಟ್ರಪತಿಗಳು ಭಾಗವಹಿಸಿದರು.

ರಾಜ್ಯ ಸಮ್ಮೇಳನವನ್ನು ಉಪರಾಷ್ಟ್ರಪತಿ ಜಗದೀಪ್ ಧನಕರ್ ಉದ್ಘಾಟಿಸಿದರು.

ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ರಾಜ್ಯ ಲೋಕಸೇವಾ ಆಯೋಗಗಳ ಅಧ್ಯಕ್ಷರ 25ನೇ ರಾಜ್ಯ ಸಮ್ಮೇಳನ ನಡೆಯಿತು.

ಬಿಇಎಲ್​ ವಿಜ್ಞಾನಿಗಳು, ಸಂಶೋಧಕರ ಜತೆ ಉಪರಾಷ್ಟ್ರಪತಿ ಸಂವಾದ ನಡೆಸಿದರು.

ರಾಜ್ಯಪಾಲ ಗೆಹ್ಲೋಟ್, ಕೇಂದ್ರ ಸಚಿವ ಹೆಚ್​​​ಡಿ ಕುಮಾರಸ್ವಾಮಿ ಕೂಡ ಉಪಸ್ಥಿತರಿದ್ದರು.

NEXT - ರೈಲಿನಲ್ಲಿ ಎಷ್ಟು ಲೀಟರ್ ಮದ್ಯ ಸಾಗಿಸಬಹುದು ಗೊತ್ತೇ?