Liquor
TV9 Kannada Logo For Webstory First Slide

ರೈಲಿನಲ್ಲಿ ಎಷ್ಟು ಲೀಟರ್ ಮದ್ಯ ಸಾಗಿಸಬಹುದು ಗೊತ್ತೇ?

11 January 2025

Author: Ganapathi Sharma

Liquor (1)

ರೈಲಿನಲ್ಲಿ ಮದ್ಯ ಸಾಗಾಟ ಮಾಡಬಹುದೇ? ಮಾಡಬಹುದಾದರೆ ಎಷ್ಟು ಲೀಟರ್ ಮಾಡಬಹುದು ಎಂಬ ಪ್ರಶ್ನೆ ಬಹುತೇಕರಲ್ಲಿದೆ.

Liquor

ರೈಲಿನಲ್ಲಿ ಮದ್ಯಪಾನ ನಿಷೇಧಿಸಲಾಗಿದೆ.ಆದಾಗ್ಯೂ, ಮದ್ಯ ಸಾಗಾಟಕ್ಕೆ ಅನುಮತಿ ಇದೆ. ಆದರೆ ಮಿತಿ ಇದೆ.

Liquor (1)

ರೈಲಿನಲ್ಲಿ ಮದ್ಯದ ಬಾಟ್ಲಿ ಕೊಂಡೊಯ್ಯಬೇಕಾದರೆ ಕೆಲವೊಂದು ನಿಯಮಗಳನ್ನು ತಿಳಿದಿರಬೇಕಾದ್ದು ಅಗತ್ಯ.

ರೈಲ್ವೆ ಕಾಯ್ದೆ 1989ರ ಪ್ರಕಾರ, ರೈಲು ನಿಲ್ದಾಣದಲ್ಲಿ, ಪ್ಲಾಟ್​ಫಾರ್ಮ್​ನಲ್ಲಿ ಹಾಗೂ ರೈಲಿನೊಳಗೆ ಮದ್ಯ ಸೇವನೆ ಮಾಡುವಂತಿಲ್ಲ.

ರೈಲಿನಲ್ಲಿ ಮದ್ಯ ಕೊಂಡೊಯ್ಯಲು ಅವಕಾಶವಿದೆ. ಆದರೆ, ಗರಿಷ್ಠ 2 ಲೀಟರ್ ಮದ್ಯ ಮಾತ್ರ ಸಾಗಾಟ ಮಾಡಬಹುದು. ಹೆಚ್ಚು ಕೊಂಡೊಯ್ದರೆ ಕಾನೂನುಬಾಹಿರವಾಗುತ್ತದೆ.

ರೈಲಿನಲ್ಲಿ ಕೊಂಡೊಯ್ಯುವ ಮದ್ಯದ ಬಾಟಲ್ ಸೀಲ್ಡ್ ಆಗಿರಬೇಕು. ಬಿಹಾರ, ಗುಜರಾತ್, ಲಕ್ಷದ್ವೀಪ, ನಾಗಾಲ್ಯಾಂಡ್​ಗಳಲ್ಲಿ ಮಾತ್ರ ಮದ್ಯ ಸಾಗಾಟಕ್ಕೆ ಅನುಮತಿ ಇಲ್ಲ.

ಮದ್ಯ ಸಾಗಾಟ ಸಂಬಂಧ ರೈಲಿನಲ್ಲಿ ನಿಯಮ ಉಲ್ಲಂಘಿಸಿದರೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.

ತಪ್ಪಿತಸ್ಥರಿಗೆ 500 ರೂ.ಗಳ ವರೆಗೆ ದಂಡ ಮತ್ತು 6 ತಿಂಗಳ ವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

ಆಲ್ಕೋಹಾಲ್ ಬೇಗನೆ ಉರಿಯುವ ವಸ್ತು ಆಗಿರುವುದರಿಂದ ರೈಲಿನಲ್ಲಿ ಹೆಚ್ಚು ಕೊಂಡೊಯ್ಯಲು ಅವಕಾಶ ನೀಡುವುದಿಲ್ಲ ಎಂಬುದು ಗಮನಾರ್ಹ.

NEXT - ಬೀದರ್​​ನ ಗುರುದ್ವಾರ ಸಿಖ್ಖರ ಪವಿತ್ರ ಯಾತ್ರಾ ಸ್ಥಳ