ತಾಳಿ ಕಟ್ಟಿಸಿಕೊಂಡು ನೇರವಾಗಿ ಪರೀಕ್ಷೆ ಹಾಲ್​ಗೆ ಬಂದ ವಧು

10 September 2023

ಮದುವೆ ದಿನವೇ ಮದುಮಗಳು ಪರೀಕ್ಷೆಗೆ ಹಾಜರಾಗುವ ಮೂಲಕ  ಎಲ್ಲರ ಗಮನ ಸೆಳೆದಿದ್ದಾರೆ.

ಮದ್ವೆಯಿಂದ ಪರೀಕ್ಷೆಗೆ

1 ವರ್ಷ ವ್ಯರ್ಥವಾಗಬಾರದು ಎನ್ನುವ ಕಾರಣಕ್ಕೆ, ಹಸೆಮಣೆ ಏರಿದ ಕೆಲವೇ ಹೊತ್ತಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದಾರೆ.

ಮದ್ವೆ ಡ್ರೆಸ್​ನಲ್ಲೇ ಎಕ್ಸಾಂಗೆ

ಶಿವಮೊಗ್ಗದ ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿ ಸತ್ಯವತಿ ತಾಳಿ ಕಟ್ಟಿಸಿಕೊಂಡು ನೇರವಾಗಿ ಪರೀಕ್ಷೆ ನಡೆಯುವ ಹಾಲ್​ಗೆ ಆಗಮಿಸಿದ್ದಾರೆ.

 ಶಿವಮೊಗ್ಗದ ಸತ್ಯವತಿ

ಮದುವೆ ಮಂಟಪದಿಂದ ನೇರವಾಗಿ ಬಿಎ ಅಂತಿಮ ವರ್ಷದ ಎಕನಾಮಿಕ್ಸ್ ಪರೀಕ್ಷೆ ನಡೆಯುವ ಶಿವಮೊಗ್ಗದ ನಗರದ ಕಮಲಾ ನೆಹರು ಕಾಲೇಜಿಗೆ ಆಗಮಿಸಿದ್ದಾರೆ. 

ಮಂಟಪದಿಂದ ಪರೀಕ್ಷೆಗೆ

 ಪರೀಕ್ಷೆ ಮುಗಿದ ನಂತರ ಮುಂದಿನ ಮದುವೆ ಧಾರ್ಮಿಕ ವಿಧಿ ವಿಧಾನ ನೆರವೇರಿಸಲು ಎರಡು ಕಡೆ ಕುಟುಂಬಸ್ಥರು ತೀರ್ಮಾನಿಸಿದ್ದಾರೆ,

ಪರೀಕ್ಷೆ ಬಳಿಕ ಕಾರ್ಯ

ಶಿವಮೊಗ್ಗದ ಭರ್ಮಪ್ಪ ನಗರದ ನಿವಾಸಿ ಸತ್ಯವತಿ- ಚೆನ್ನೈ ಮೂಲದ ಫ್ರಾನ್ಸಿಸ್ ನೊಂದಿಗೆ ಮದುವೆ

 ಶಿವಮೊಗ್ಗದ ಭರ್ಮಪ್ಪ ನಗರದ ಸತ್ಯವತಿ

ಇಂದು (ಸೆಪ್ಟೆಂಬರ್ 10) ಬೆಳಗ್ಗೆ ತಾಳಿ ಕಟ್ಟಿಸಿಕೊಂಡು ಬಳಿಕ ಗಂಡನ ಜೊತೆ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಾರೆ.

ಗಂಡನ ಜತೆ ಪರೀಕ್ಷೆ ಕೇಂದ್ರಕ್ಕೆ

ಸೋಷಿಯಲ್ ಮೀಡಿಯಾ ಮೂಲಕ ಪರಿಚಯವಾಗಿದ್ದ ಫ್ರಾನ್ಸಿಸ್, ಚಾಟಿಂಗ್ ಮಾಡುತ್ತ ಇಬ್ಬರಲ್ಲೂ ಪ್ರೇಮಾಂಕುರವಾಗಿದೆ.

ಪ್ರೇಮಾಂಕುರ

ಬಳಿಕ ಎರಡು ಕಡೆ ಕುಟುಂಬಸ್ಥರನ್ನು ಒಪ್ಪಿಸಿ ಸರಳವಾಗಿ ಶಿವಮೊಗ್ಗದ ಮನೆಯಲ್ಲಿ ಸಪ್ತಪದಿ ತುಳಿದಿದ್ದಾರೆ.

ಪ್ರೀತಿಸಿ ಮದ್ವೆ

ತೆಂಗಿನ ಎಣ್ಣೆಯ  ಅದ್ಭುತ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ