54ನೇ ಜಿಎಸ್​ಟಿ ಕೌನ್ಸಿಲ್ ಸಭೆ: ಪ್ರಮುಖ ತೆರಿಗೆ ಬದಲಾವಣೆ

10 Sep 2024

Pic credit: Getty im

Vijayasarathy SN

ಕುರುಕಲು ತಿಂಡಿಗಳಿಗೆ ಜಿಎಸ್​ಟಿ ಶೇ. 18ರಿಂದ ಶೇ. 12ಕ್ಕೆ ಇಳಿಕೆ; ಫ್ರೈ ಮಾಡದ ಮತ್ತು ಬೇಯಿಸದ ಸ್ನ್ಯಾಕ್ಸ್​ಗಳಿಗೆ ಜಿಎಸ್​ಟಿ ಶೇ. 5 ರಷ್ಟಿದೆ.

Pic credit: Getty

ಕ್ಯಾನ್ಸರ್ ಔಷಧಗಳಾದ Trastuzumab Deruxtecan, Osimertinib ಮತ್ತು Durvalumabಗಳಿಗೆ ಜಿಎಸ್​ಟಿ ಶೇ. 12ರಿಂದ ಶೇ. 5ಕ್ಕೆ ಇಳಿಕೆ.

Pic credit: Getty

ರೈಲ್ವೆ ಆರ್​ಎಂಪಿಯು ಎಸಿ ಮೆಷೀನ್​ಗಳಿಗೆ ಶೇ. 28, ಕಾರಿನ ಸೀಟುಗಳಿಗೆ ಜಿಎಸ್​ಟಿ ದರ ಶೇ. 28, ಹೆಲಿಕಾಪ್ಟರ್ ಚಾರ್ಟರ್​ಗೆ ಶೇ. 18ರಷ್ಟು ಜಿಎಸ್​ಟಿ ಹಾಕಬಹುದು.

Pic credit: Getty

ಡಿಜಿಸಿಎ ಅನುಮೋದಿತ ಫ್ಲೈಯಿಂಗ್ ತರಬೇತಿ ಸಂಸ್ಥೆಗಳಿಂದ ನಡೆಸಲಾಗುವ ತರಬೇತಿಗಳಿಗೆ ಜಿಎಸ್​ಟಿಯಿಂದ ವಿನಾಯಿತಿ ನೀಡಲಾಗಬಹುದು.

Pic credit: Getty

ಸರ್ಕಾರದ ಶಿಕ್ಷಣ ಮಂಡಳಿ, ಎಜುಕೇಶನಲ್ ಕೌನ್ಸಿಲ್ ಮೊದಲಾದ ಸಂಸ್ಥೆಗಳ ಅಫಿಲಿಯೇಶನ್ ಸರ್ವಿಸ್​ಗೆ ಜಿಎಸ್​ಟಿ ಇರಲ್ಲ. ಸಿಬಿಎಸ್​ಇ ಇತ್ಯಾದಿ ಬೋರ್ಡ್​ಗಳ ಅಫಿಲಿಯೇಶನ್ ಸರ್ವಿಸ್​ಗೆ ಜಿಎಸ್​ಟಿ ಇರುತ್ತೆ.

Pic credit: Getty

ನೊಂದಾಯಿತರಾಗದ ವ್ಯಕ್ತಿ ತನ್ನ ಕಮರ್ಷಿಯಲ್ ಪ್ರಾಪರ್ಟಿಯನ್ನು ನೊಂದಾಯಿತ ವ್ಯಕ್ತಿಗೆ ಬಾಡಿಗೆಗೆ ಕೊಟ್ಟಾಗ, ರಿವರ್ಸ್ ಚಾರ್ಜ್ ಮೆಕ್ಯಾನಿಸಂ ಪ್ರಕಾರ ನೊಂದಾಯಿತ ವ್ಯಕ್ತಿಯೇ ತೆರಿಗೆ ಪಾವತಿಸಬೇಕು.

Pic credit: Getty

ಎಲೆಕ್ಟ್ರಿಸಿಟಿ ಕನೆಕ್ಷನ್ ಅರ್ಜಿ ಶುಲ್ಕ, ವಿದ್ಯುತ್ ಮೀಟರ್​ನ ಬಾಡಿಗೆ ಶುಲ್ಕ, ಕೆಪಾಸಿಟರ್ಸ್​ಗಳ ಟೆಸ್ಟಿಂಗ್ ಶುಲ್ಕ, ಮೀಟರ್ಸ್ ಟೆಸ್ಟಿಂಗ್ ಶುಲ್ಕ ಇತ್ಯಾದಿಗೆ ಜಿಎಸ್​ಟಿ ಇರಲ್ಲ.

Pic credit: Getty