08 Sep 2024
Pic credit: Google
Vijayasarathy SN
Pic credit: Google
ಬಿಸಿನೆಸ್ಗೆ ಲಕ್ಷಗಟ್ಟಲೆ ಬಂಡವಾಳ ಬೇಕಾಗುತ್ತದೆ. ಹೀಗಾಗಿ, ಬಹಳ ಜನರು ಬಿಸಿನೆಸ್ಗೆ ಕೈಹಾಕೋದಿಲ್ಲ. ಆದರೆ, ಬಂಡವಾಳ ಇಲ್ಲದೇ ಮಾಡಬಹುದಾದ ಕೆಲ ಬಿಸಿನೆಸ್ಗಳಿವೆ. ಪ್ರಮುಖವಾದ ಮೂರು ಇಲ್ಲಿವೆ...
Pic credit: Google
ಯೂಟ್ಯೂಬ್, ಫೇಸ್ಬುಕ್, ಇನ್ಸ್ಟಾಗ್ರಾಮ್ನಲ್ಲಿ ನೀವು ರೀಲ್ಸ್, ವಿಡಿಯೋ ಇತ್ಯಾದಿ ಕಂಟೆಂಟ್ ಅಪ್ಲೋಡ್ ಮಾಡುತ್ತಿರಿ. ಫಾಲೋಯರ್ಸ್, ಸಬ್ಸ್ಕ್ರೈಬರ್ಸ್ ಹೆಚ್ಚಾದರೆ ಆದಾಯ ಗಳಿಸಬಹುದು.
Pic credit: Google
ಯೂಟ್ಯೂಬ್ ಅಕೌಂಟ್ ಅನ್ನು ಮಾನಿಟೈಸ್ ಮಾಡಿದರೆ, ನಿಮ್ಮ ಚಾನಲ್ ಜನಪ್ರಿಯತೆ ಹೆಚ್ಚಿದಂತೆಲ್ಲಾ ಹೆಚ್ಚು ಆದಾಯ ಬರುತ್ತದೆ. ವರ್ಷಕ್ಕೆ ಹಲವು ಕೋಟಿ ರೂ ಗಳಿಸುವ ಅವಕಾಶ ಇರುತ್ತದೆ.
Pic credit: Google
ಗೂಗಲ್ ಆ್ಯಡ್ ನೋಡಿರಬಹುದು. ಯಾರಾದರೂ ಆ ಆ್ಯಡ್ ಲಿಂಕ್ ಕ್ಲಿಕ್ ಮಾಡಿದರೆ ಇಂತಿಷ್ಟು ಹಣವನ್ನು ಕಂಪನಿ ವತಿಯಿಂದ ಗೂಗಲ್ಗೆ ಹೋಗತ್ತದೆ. ಗೂಗಲ್ ಆ ಆದಾಯವನ್ನು ಹಂಚಿಕೊಳ್ಳುತ್ತದೆ.
Pic credit: Google
ನೀವೂ ಕೂಡ ಯಾವುದಾದರೂ ಕಂಪನಿಯ ಉತ್ಪನ್ನಗಳನ್ನು ನಿಮ್ಮ ಬ್ಲಾಗ್, ಯೂಟ್ಯೂಬ್ ಇತ್ಯಾದಿಯಲ್ಲಿ ಪ್ರಚಾರ ಮಾಡಬಹುದು. ನಿರ್ದಿಷ್ಟ ಲಿಂಕ್ ಅನ್ನು ಯಾರಾದರೂ ಕ್ಲಿಕ್ ಮಾಡಿದರೆ ನಿಮಗೆ ಹಣ ಸಿಗುತ್ತದೆ.
Pic credit: Google
ಪಾಠ ಮಾಡುವ ಕಲೆ ನಿಮಗೆ ತಿಳಿದಿದ್ದರೆ ಹೋಮ್ ಟ್ಯೂಷನ್ ಮಾಡಬಹುದು. ಯಾವುದಾದರೂ ಟ್ಯೂಷನ್ ಸೆಂಟರ್ನಲ್ಲಿ ಪಾರ್ಟ್ ಟೈಮ್ ಆಗಿಯೂ ಪಾಠ ಮಾಡಬಹುದು.
Pic credit: Google
ಹೈಸ್ಕೂಲ್ ಹಂತದಿಂದ ಮಕ್ಕಳಿಗೆ ಟ್ಯೂಷನ್ಗೆ ಬಹಳ ಬೇಡಿಕೆ ಇದೆ. ಈಗಂತೂ ಪ್ರೀಸ್ಕೂಲ್ನಿಂದಲೇ ಮಕ್ಕಳನ್ನು ಮನೆಪಾಠಕ್ಕೆ ಹಾಕುತ್ತಾರೆ. ನಿಮ್ಮ ಜ್ಞಾನ, ಪ್ರತಿಭೆಗೆ ತಕ್ಕಂತೆ ಅವಕಾಶ ಇದೆ.