04 Sep 2024
Pic credit: PTI
Vijayasarathy SN
ಬೆಂಗಳೂರಿನ ಬ್ಯಾಟರಾಯನಪುರದ ಮೌಂಟ್ ಎವರೆಸ್ಟ್ ಶಾಲೆಯ 7 ಮತ್ತು 8ನೇ ತರಗತಿಯ ಮಕ್ಕಳೊಂದಿಗೆ ಇನ್ಫೋಸಿಸ್ ಎನ್.ಆರ್. ನಾರಾಯಣಮೂರ್ತಿ ಸಂವಾದ ನಡೆಸಿದರು.
Pic credit: PTI
ನಿಮ್ಮಂತಾಗಲು ಏನು ಮಾಡಬೇಕು ಎಂದು ಮಕ್ಕಳು ಕೇಳಿದಾಗ, ನಾರಾಯಣಮೂರ್ತಿ ಅವರು, ‘ನೀವು ನನ್ನಂತಾಗಬಾರದು. ನನ್ನನ್ನು ಮೀರಿಸಿ ಬೆಳೆಯಬೇಕು’ ಎಂದರು.
Pic credit: PTI
‘ನಾನು ಸರ್ಕಾರಿ ಶಾಲೆಯಲ್ಲಿ ಓದಿದ್ದು. ಭೂಗೋಳ, ಇತಿಹಾಸ ಸೇರುತ್ತಿರಲಿಲ್ಲ. ಆದರೆ, ಅಪ್ಪನಿಂದ ಶಿಸ್ತು ಮತ್ತು ಸಮಯ ನಿರ್ವಹಣೆ ಕಲಿತೆ. ಎಸ್ಸೆಸ್ಸೆಲ್ಸಿಯಲ್ಲಿ 4ನೇ ರ‍್ಯಾಂಕ್ ಬರಲು ಸಾಧ್ಯವಾಯಿತು.’
Pic credit: PTI
‘ಎಸ್ಸೆಸ್ಸೆಲ್ಸಿಯಲ್ಲಿ ರ‍್ಯಾಂಕ್ ಬಂದದ್ದಕ್ಕೆ ಸಿಕ್ಕ 900 ರೂ ಅನ್ನು ಅಮ್ಮನಿಗೆ ಕೊಟ್ಟಿ. ಹೊಸ ಬಟ್ಟೆ ಖರೀದಿಸಲು 50 ರೂ ಕೇಳಿದೆ. ಸಹೋದರನಿಗೆ ಈ ಹಣ ಕೊಡು ಎಂದು ಮಾರನೆ ದಿನ ಅಮ್ಮ ಹೇಳಿದಾಗ ಬೇಸರವಾಯಿತು..’
Pic credit: PTI
‘ಮಹಾಭಾರತದ ಕರ್ಣನ ಪಾತ್ರದಿಂದ ಸ್ಫೂರ್ತಿ ಹೊಂದಿ ಹೊಸ ಬಟ್ಟೆಯನ್ನು ನನ್ನ ತಮ್ಮನಿಗೆ ಕೊಟ್ಟೆ. ಅವರು ಈಗಲೂ ಅದನ್ನು ಸ್ಮರಿಸುತ್ತಾರೆ. ಇನ್ನೊಬ್ಬರಿಗೆ ಹಂಚಿಕೊಳ್ಳುವುದರಿಂದ ಸಿಗುವ ಆನಂದವೇ ಬೇರೆ.’
Pic credit: PTI
ಶಾಲೆಯಲ್ಲಿ ಕೆಮಿಸ್ಟ್ರಿ ಲ್ಯಾಬ್ನಲ್ಲಿ ಉಪ್ಪನ್ನು ವ್ಯರ್ಥವೆಚ್ಚ ಮಾಡಿದ್ದಕ್ಕೆ ನಾರಾಯಣಮೂರ್ತಿಗೆ ಹೆಡ್ಮಾಸ್ಟರ್ ಬೈದಿದ್ದರು. ಇದು ಎಲ್ಲರಿಗೂ ಸೇರಿದ ವಸ್ತು, ಹಾಳು ಮಾಡಬಾರದು ಎಂದಿದ್ದರು.
Pic credit: PTI
ಹೆಡ್ಮಾಸ್ತರ್ ಅವರ ಆ ಮಾತು ನಾರಾಯಣಮೂರ್ತಿ ಅವರ ಜೀವನದ ಮೇಲೆ ಪ್ರಭಾವ ಬೀರಿತ್ತು. ಇನ್ಫೋಸಿಸ್ ಸ್ಥಾಪನೆ ಮತ್ತು ಅದರ ನಿರ್ವಹಣೆ ಹಿಂದೆ ಆ ಮಾತುಗಳು ಸ್ಫೂರ್ತಿಯಾಗಿದ್ದವು.
Pic credit: PTI