ಅತಿಹೆಚ್ಚು ಶ್ರೀಮಂತರಿರುವ ಭಾರತೀಯ ನಗರಗಳು

2 Sep 2024

Pic credit: Google

Vijayasarathy SN

2024ರಲ್ಲಿ ಭಾರತದಲ್ಲಿ ಶ್ರೀಮಂತರು ಎಷ್ಟಿದ್ದಾರೆ ಎನ್ನುವ ಪಟ್ಟಿಯನ್ನು ಹುರೂನ್ಸ್ ಬಿಡುಗಡೆ ಮಾಡಿದೆ. ಯಾವ ನಗರಗಳು ಹೆಚ್ಚು ಸಿರಿವಂತರನ್ನು ಹೊಂದಿವೆ ಎನ್ನುವ ವಿವರ ಇಲ್ಲಿದೆ ನೋಡಿ...

ಹುರುನ್ ಪಟ್ಟಿ

Pic credit: PTI

ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಶ್ರೀಮಂತರ ಸಂಖ್ಯೆ 328ರಿಂದ 386ಕ್ಕೆ ಏರಿದೆ. ಇಲ್ಲಿ 92 ಮಂದಿ ಬಿಲಿಯನೇರ್ಸ್ ಇದ್ದಾರೆ. ಚೀನಾ ರಾಜಧಾನಿ ಬೀಜಿಂಗ್​ಗಿಂತಲೂ ಹೆಚ್ಚು ಶ್ರೀಮಂತರು ಮುಂಬೈನಲ್ಲಿದ್ದಾರೆ.

ಮುಂಬೈ ನಂ. 1

Pic credit: Google

ರಾಷ್ಟ್ರ ರಾಜಧಾನಿ ನಗರಿ ದೆಹಲಿಯಲ್ಲಿ ಶ್ರೀಮಂತರ ಸಂಖ್ಯೆ ಒಂದು ವರ್ಷದಲ್ಲಿ ಹೈಜಂಪ್ ಆಗಿದೆ. 2023ರಲ್ಲಿ 119ಇದ್ದದ್ದು 2024ರಲ್ಲಿ 217ಕ್ಕೆ ಏರಿದೆ. ಬಿಲಿಯನೇರ್​ಗಳ ಸಂಖ್ಯೆ 68 ಇದೆ.

ದೆಹಲಿ ನಂ. 2

Pic credit: Getty

ತೆಲಂಗಾಣ ರಾಜಧಾನಿ ಹೈದರಾಬಾದ್​ನಲ್ಲಿ ಶ್ರೀಮಂತರ ಸಂಖ್ಯೆ 104 ಇದೆ. ಇಲ್ಲಿ 18 ಮಂದಿ ಬಿಲಿಯನೇರ್​ಗಳಿದ್ದಾರೆ. 2023ರಲ್ಲಿ ಇಲ್ಲಿ ಶ್ರೀಮಂತರ ಸಂಖ್ಯೆ 100 ಇತ್ತು. ಬೆಂಗಳೂರಿಗಿಂತ ಇವರ ಸಂಖ್ಯೆ ಹೆಚ್ಚಿದೆ.

ಹೈದರಾಬಾದ್ ನಂ. 3

Pic credit: Google

ಬೆಂಗಳೂರಿನಲ್ಲಿ ಶ್ರೀಮಂತರ ಸಂಖ್ಯೆ 100ಕ್ಕೆ ಏರಿದೆ. 2023ರಲ್ಲಿ 87 ಮಂದಿ ಶ್ರೀಮಂತರಿದ್ದರು. ಈ ಐಟಿ ನಗರಿಯು 27 ಬಿಲಿಯನೇರ್​ಗಳನ್ನು ಹೊಂದಿದ್ದು, ಆ ವಿಷಯದಲ್ಲಿ ಹೈದರಾಬಾದ್ ಅನ್ನು ಹಿಂದಿಕ್ಕಿದೆ.

ಬೆಂಗಳೂರು ನಂ. 4

Pic credit: Google

ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಶ್ರೀಮಂತರ ಸಂಖ್ಯೆ 67ರಿಂದ 82ಕ್ಕೆ ಏರಿದೆ. ಬಿಲಿಯನೇರ್​ಗಳ ಸಂಖ್ಯೆ 16ಕ್ಕೆ ಏರಿದೆ. ಇತ್ತೀಚಿನ ವರ್ಷಗಳಲ್ಲಿ ಈ ನಗರದಲ್ಲಿ ಶ್ರೀಮಂತರ ಸಂಖ್ಯೆ ಸತತವಾಗಿ ಹೆಚ್ಚುತ್ತಿದೆ.

ಚೆನ್ನೈ ನಂ. 5

Pic credit: Google

ಅತಿಹೆಚ್ಚು ಶ್ರೀಮಂತರಿರುವ ಟಾಪ್-10 ಪಟ್ಟಿಯಲ್ಲಿನ ಇತರ ನಗರಗಳೆಂದರೆ ಕೋಲ್ಕತಾ, ಅಹ್ಮದಾಬಾದ್, ಪುಣೆ, ಸೂರತ್ ಮತ್ತು ಗುರುಗ್ರಾಮ್. ಇಲ್ಲೆಲ್ಲಾ ಸಿರಿವಂತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ.

ಇತರ ನಗರಗಳು...

Pic credit: Google