ಕಾರ್ಪೊರೇಟ್ ಸಂಸ್ಥೆಗಳು, ಉದ್ಯಮಿಗಳು ಹೇರಳವಾಗಿ ಲಾಭ ಮಾಡಿಕೊಳ್ಳುವುದನ್ನು ನೋಡುತ್ತೇವೆ. ಆದರೆ, ಸರ್ಕಾರಕ್ಕೆ ಪ್ರಮುಖ ಆದಾಯ ಮೂಲಗಳಲ್ಲಿ ಕಾರ್ಪೊರೇಟ್ ತೆರಿಗೆಯೂ ಒಂದು.
ತೆರಿಗೆ ಆದಾಯ
Pic credit: PTI
ಕಂಪನಿಗಳು ವಿವಿಧ ರೀತಿಯ ತೆರಿಗೆಗಳು, ಸುಂಕಗಳ ಮೂಲಕ ದೇಶದ ಖಜಾನೆ ತುಂಬಿಸುತ್ತವೆ. ಜೊತೆಗೆ ಸಾಕಷ್ಟು ಉದ್ಯೋಗಗಳನ್ನೂ ಸೃಷ್ಟಿಸುತ್ತವೆ. ಈ ಮೂಲಕ ಆರ್ಥಿಕತೆಗೆ ಪುಷ್ಟಿ ನೀಡುತ್ತವೆ.
ತೆರಿಗೆ ಕೊಡುಗೆ
Pic credit: PTI
ಭಾರತದ ಕಾರ್ಪೊರೇಟ್ ಕಂಪನಿಗಳ ಪೈಕಿ ಭಾರತದ ಖಜಾನೆಗೆ ಅತಿಹೆಚ್ಚು ಕೊಡುಗೆ ನೀಡುವುದು ರಿಲಾಯನ್ಸ್ ಗ್ರೂಪ್. 2023-24ರಲ್ಲಿ ಈ ಸಂಸ್ಥೆಯಿಂದ ಸಂದಾಯವಾಗಿದ್ದು 1,86,440 ಕೋಟಿ ರೂ.
ರಿಲಾಯನ್ಸ್ ಕೊಡುಗೆ
Pic credit: PTI
ರಿಲಾಯನ್ಸ್ ಇಂಡಸ್ಟ್ರೀಸ್ನ 47ನೇ ವಾರ್ಷಿಕ ಮಹಾಸಭೆಯಲ್ಲಿ (ಆ. 29) ಮಾತನಾಡುತ್ತಿದ್ದ ಮುಕೇಶ್ ಅಂಬಾನಿ, ಕಳೆದ 3 ವರ್ಷದಲ್ಲಿ ತಮ್ಮ ಸಂಸ್ಥೆ ದೇಶದ ಖಜಾನೆಗೆ ಕೊಟ್ಟ ಕೊಡುಗೆ ಐದೂವರೆ ಲಕ್ಷ ಕೋಟಿ ರೂಗಿಂತ ಹೆಚ್ಚು ಎಂದಿದ್ದಾರೆ.
ವಾರ್ಷಿಕ ಮಹಾಸಭೆ
Pic credit: PTI
ಅಲ್ಪಾವಧಿಯಲ್ಲಿ ಲಾಭ ಬಾಚಿಕೊಳ್ಳಲು, ಸಂಪತ್ತು ಶೇಖರಿಸಲು ನಾವಿಲ್ಲಿ ಬಿಸಿನೆಸ್ ಮಾಡುತ್ತಿಲ್ಲ. ದೇಶಕ್ಕಾಗಿ ಸಂಪತ್ತು, ಇಂಧನ ಭದ್ರತೆ ಸೃಷ್ಟಿಸಲು ಬಿಸಿನೆಸ್ನಲ್ಲಿದ್ದೇವೆ ಎಂದು ಆರ್ಐಎಲ್ ಛೇರ್ಮನ್ ಹೇಳಿದ್ದಾರೆ.
ಹಣಕ್ಕಾಗಿ ಮಾಡುತ್ತಿಲ್ಲ
Pic credit: PTI
ದೇಶದ ಆರ್ಥಿಕತೆ ಇವತ್ತು ಆಶಾದಾಯಕವಾಗಿದೆ. ಜಾಗತಿಕ ಆರ್ಥಿಕ ವ್ಯವಹಾರದಲ್ಲಿ ಭಾರತ ಕೇವಲ ಪಾಲುದಾರ ಮಾತ್ರವಲ್ಲ, ಅತಿದೊಡ್ಡ ಅಭಿವೃದ್ಧಿ ಯಂತ್ರಗಳಲ್ಲಿ ಒಂದೆನಿಸಿದೆ ಎಂದಿದ್ದಾರೆ ಅಂಬಾನಿ.
ಆರ್ಥಿಕತೆ ಆಶಾದಾಯಕ
Pic credit: PTI
ರಿಲಾಯನ್ಸ್ 47ನೇ ಎಜಿಎಂ ಸಭೆಯಲ್ಲಿ ಅವರು ಉಚಿತ ಜಿಯೋ ಕ್ಲೌಡ್ ಸರ್ವಿಸ್, ಜಿಯೋ ಬ್ರೇನ್ ಇತ್ಯಾದಿ ಘೋಷಿಸಿದ್ದಾರೆ. ಆರ್ಐಎಲ್ನ 1:1 ಬೋನಸ್ ಷೇರು ಪ್ರಕಟಿಸಿದ್ದಾರೆ.