ಸೀಮೋಲಂಘನ... ನಾರಿಯರಿಗೆ ಕಾಯುತ್ತಿವೆ ಈ ಉದ್ಯೋಗಗಳು

29 Aug 2024

Pic credit: Google

Vijayasarathy SN

ಮಹಿಳೆಯರಿಗೆ ಅಸಾಂಪ್ರದಾಯಿಕ ಎನಿಸುವ ಕೆಲಸಗಳಿಗೆ ತರಬೇತಿ ಕೊಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮಹಿಳೆಯರು ಸೀಮೋಲಂಘನ ಮಾಡಬಲ್ಲಂತಹ ಕೆಲ ಪ್ರಮುಖ ಉದ್ಯೋಗಗಳು...

ಅಸಂಪ್ರದಾಯಿಕ ಕೆಲಸ

Pic credit: Google

ಮನೆಗಳ ಕಿಚನ್​ನಲ್ಲಿ ಮಹಿಳೆಯರದ್ದೇ ದರ್ಭಾರ್. ಹೋಟೆಲ್​ಗೆ ಬಂದರೆ ಪುರುಷ ಬಾಣಸಿಗರಿರುತ್ತಾರೆ. ಹೋಟೆಲ್​ನಲ್ಲಿ ಈಗೀಗ ಮುಖ್ಯ ಚೆಫ್ ಹುದ್ದೆಗೆ ಮಹಿಳೆಯರು ಸೇರುವುದು ಹೆಚ್ಚಾಗಿದೆ.

ಹೋಟೆಲ್​ನಲ್ಲಿ ಚೆಫ್

Pic credit: Google

ವಿಮಾನ ಹಾರಾಟ ಅಥವಾ ಪೈಲಟ್ ಸಾಂಪ್ರದಾಯಿಕವಾಗಿ ಪುರುಷರಿಗೆ ಸೀಮಿತವಾಗಿದ್ದ ಕೆಲಸ. ಪೈಲಟ್ ಆಗಲು ಬಾಹುಬಲವೇ ಆಗಬೇಕಿಲ್ಲ. ಸಾಕಷ್ಟು ಮಹಿಳೆಯರು ಪೈಲಟ್​ಗಳಾಗುತ್ತಿದ್ದಾರೆ.

ವಿಮಾನ ಪೈಲಟ್

Pic credit: Google

ಆರ್ಕಿಟೆಕ್ಟ್ ಅಥವಾ ಬಿಲ್ಡಿಂಗ್ ವಿನ್ಯಾಸಗಾರಿಕೆಯಲ್ಲಿ ಮಹಿಳೆಯರು ಸೈ ಎನಿಸುತ್ತಿದ್ದಾರೆ. ನಾರಿಯರ ಕ್ರಿಯಾತ್ಮಕ ಮನೋಭಾವ ಈ ಕ್ಷೇತ್ರಕ್ಕೆ ಹೇಳಿ ಮಾಡಿಸಿದ್ದಾಗಿದೆ.

ಆರ್ಕಿಟೆಕ್ಟ್

Pic credit: Google

ಜನರನ್ನು ಪ್ರಾಣಾಪಾಯದಿಂದ ಕಾಪಾಡುವಂತಹ ಗುರುತರ ಜವಾಬ್ದಾರಿ ಇರುವ ಫೈರ್ ಫೈಟಿಂಗ್ ಅಥವಾ ಅಗ್ನಿಶಾಮಕ ವೃತ್ತಿಯಲ್ಲಿ ಮಹಿಳೆಯರು ಹೆಚ್ಚು ಕ್ಷಮತೆ ತೋರುತ್ತಿದ್ದಾರೆ.

ಅಗ್ನಿಶಾಮಕ ವೃತ್ತಿ

Pic credit: Google

ಪುರುಷರ ಪ್ರಾಬಲ್ಯ ಬಹಳ ಹೆಚ್ಚಿರುವ ಎಲೆಕ್ಟ್ರಿಶಿಯನ್ ವೃತ್ತಿಯಲ್ಲಿ ಮಹಿಳೆಯರು ಗುರುತಿಸಿಕೊಳ್ಳುತ್ತಿದ್ದಾರೆ. ತಾಂತ್ರಿಕ ಪರಿಣಿತಿಯಲ್ಲಿ, ದೈಹಿಕ ಶ್ರಮದಲ್ಲಿ ಪುರುಷರಿಗಿಂತ ಮಹಿಳೆಯರು ಕಡಿಮೆ ಇಲ್ಲ ಎನ್ನುವುದು ಸಾಬೀತಾಗುತ್ತಿದೆ.

ಎಲೆಕ್ಟ್ರಿಶಿಯನ್ಸ್

Pic credit: Google

ಯಂತ್ರಗಳ ದುರಸ್ತಿ ಇತ್ಯಾದಿ ಮೆಕ್ಯಾನಿಕ್ ಕೆಲಸ ಕೂಡ ಅಪ್ಪಟವಾಗಿ ಪುರುಷರಿಗೆ ಸೀಮಿತವಾಗಿರುವ ಕ್ಷೇತ್ರವಾಗಿದೆ. ದೈಹಿಕ ಶ್ರಮ ಮತ್ತು ತಾಂತ್ರಿಕ ನೈಪುಣ್ಯತೆ ಬೇಡುವ ಈ ಕೆಲಸದಲ್ಲೂ ಮಹಿಳೆಯರು ಸೈ ಎನಿಸುತ್ತಿದ್ದಾರೆ.

ಮೆಕ್ಯಾನಿಕ್ಸ್

Pic credit: Google