ಮಕ್ಕಳಲ್ಲಿ ಉದ್ಯಮಶೀಲತೆ ಬೆಳೆಸುವುದು ಹೇಗೆ?

27 Aug 2024

Pic credit: Getty

Vijayasarathy SN

ಸೀಕ್ರೆಟ್ಸ್

Pic credit: Getty

ಯಶಸ್ವಿ ಆಂಟ್ರಪ್ರನ್ಯೂರ್​ಗಳು ಹಾಗೇ ಸುಮ್ಮನೆ ಬೆಳೆದವರಲ್ಲ. ಬಾಲ್ಯದಲ್ಲಿ ಅವರಿಗೆ ಇದ್ದ ವಾತಾವರಣ ಅವರ ವ್ಯಕ್ತಿತ್ವ ನಿರ್ಮಿಸಿದೆ. ಮಾರ್ಗಾಟ್ ಮಾಚೋಲ್ ಬಿಸ್ನೋ ಕೆಲ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.

1. ಛಲ

Pic credit: Getty

ಮಕ್ಕಳು ಯಶಸ್ಸಿಗೆ ಮಾತ್ರ ಮೆಚ್ಚುವುದು ತಪ್ಪು. ಪ್ರಯತ್ನ ಹಾಕಿ ವಿಫಲರಾದಾಗಲೂ ಮೆಚ್ಚಬೇಕು. ಮಕ್ಕಳ ಪ್ರತಿಭೆ, ಸೌಂದರ್ಯಕ್ಕಿಂತ ಹೆಚ್ಚಾಗಿ ಶ್ರಮ ಶ್ಲಾಘಿಸಬೇಕು. ಆಗ ಅವರಲ್ಲಿ ಛಲ ಮನೋಭಾವ ಬೆಳೆಯುತ್ತದೆ.

2. ಪ್ಯಾಶನ್

Pic credit: Getty

ಮನಸ್ಸಿಗೆ ಮುದ ನೀಡುವ, ಇಷ್ಟವಾಗುವ ಸಂಗತಿಯನ್ನು ಕಂಡುಕೊಳ್ಳಲು ಮಕ್ಕಳಿಗೆ ಅವಕಾಶವೇ ಇರುವುದಿಲ್ಲ. ಎಲ್ಲವನ್ನೂ ಪೋಷಕರೇ ಪ್ಲಾನ್ ಮಾಡಿಬಿಡುತ್ತಾರೆ. ಇದು ತಪ್ಪು. ಆಂಟ್ರಪ್ರನ್ಯೂರ್​ಗಳಿಗೆ ಪ್ಯಾಶನ್ ಬಹಳ ಮುಖ್ಯ.

3. ಕುತೂಹಲ

Pic credit: Getty

ಆ್ಯಂಟ್ರಪ್ರನ್ಯೂರ್​ಗಳು ಸದಾ ಕುತೂಹಲಿಗಳು. ಮಕ್ಕಳನ್ನು ಪ್ರಶ್ನೆ ಕೇಳಲು ಉತ್ತೇಜಿಸಬೇಕು. ಸಮಸ್ಯೆಗಳಿಗೆ ಅವರೇ ಪರಿಹಾರ ಹುಡುಕಲು ಉತ್ತೇಜಿಸಬೇಕು. ಆಗ ಸೃಜನಶೀಲತೆ ಬೆಳೆಯುತ್ತದೆ.

4. ಅಪಾಯ ಉಪಾಯ

Pic credit: Getty

ಅಪಾಯ ಇದೆ ಎನಿಸಿದರೂ ಉದ್ಯಮಿ ಪ್ರಯತ್ನ ಹಾಕಿಯೇ ತೀರುತ್ತಾನೆ. ತಪ್ಪು ಮಾಡೋದು ಸಹಜ ಕಣೋ, ತಿದ್ದಿ ನಡೆಯೋನು ಮನುಜಾ ಕಣೋ ಅನ್ನೋ ಪಾಠವನ್ನು ಚಿಕ್ಕಂದಿನಿಂದಲೇ ಅರಿತಿರುತ್ತಾರೆ.

5. ವೈಫಲ್ಯತೆ

Pic credit: Getty

ಸೋಲೇ ಗೆಲುವಿನ ಮೆಟ್ಟಿಲು ಎಂಬುದನ್ನು ಮಕ್ಕಳಿಗೆ ತಿಳಿಸಬೇಕು. ವೈಫಲ್ಯ ಎಂಬುದು ನಮ್ಮ ಕೆಲಸಕ್ಕೆ ಸಿಕ್ಕ ಪ್ರತಿಕ್ರಿಯೆ ಅಥವಾ ವಿಮರ್ಶೆ ಎಂದು ಭಾವಿಸಬೇಕು. ಯಶಸ್ಸಿಗಿಂತ ಪ್ರಯತ್ನ ಮುಖ್ಯ ಎಂಬುದನ್ನು ತಿಳಿಸಬೇಕು.

6. ಆತ್ಮವಿಶ್ವಾಸ

Pic credit: Getty

ಮಕ್ಕಳ ಮುಂದೆ ಯಾವುದಾದರೂ ಸಮಸ್ಯೆ ಬಂದರೆ ಪೋಷಕರು ಅದನ್ನು ಬಗೆಹರಿಸಬಾರದು. ಮಕ್ಕಳನ್ನೇ ಆ ಸಮಸ್ಯೆಯನ್ನು ಯಾವುದಾದರೂ ರೀತಿಯಲ್ಲಿ ನಿವಾರಣೆ ಮಾಡಲು ಬಿಡಬೇಕು.