ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಲಸಿಕೆ ನೆವದಲ್ಲಿ ಜನರ ದೇಹಕ್ಕೆ ಮೈಕ್ರೋಚಿಪ್ ಸೇರ್ಪಡಿಸಿ ಅವರನ್ನು ಟ್ರ್ಯಾಕ್ ಮಾಡಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿ ಹರಿದಾಡುತ್ತಿದೆ.
Pic credit: PTI
ಬಿಲ್ಗೆ ಅಚ್ಚರಿ
ಈ ಸುದ್ದಿ ಕೇಳಿ ಸ್ವತಃ ಬಿಲ್ ಗೇಟ್ಸ್ ಅವರೇ ತಮಾಷೆ ಮಾಡಿ ನಕ್ಕಿದ್ದಾರೆ. ಈ ರೀತಿ ಕೆಲವರು ಹೇಳುತ್ತಿರುವುದು ನಗು ತರಿಸುವ ಸಂಗತಿ ಎಂದು ಬಿಬಿಸಿ ರೇಡಿಯೋ4 ಸಂದರ್ಶನದಲ್ಲಿ ಗೇಟ್ಸ್ ಹೇಳಿದ್ದಾರೆ.
Pic credit: PTI
ಯಾಕೆ ಟ್ರ್ಯಾಕ್ ಮಾಡ್ಲಿ?
‘ನಾನು ಎಲ್ಲರನ್ನೂ ಟ್ರ್ಯಾಕ್ ಮಾಡಲು ಹೊರಟಿದ್ದೇನೆ ಎಂದು ಜನರು ಹೇಳುತ್ತಾರೆ. ನಾನ್ಯಾಕೆ ಎಲ್ಲರನ್ನೂ ಟ್ರ್ಯಾಕ್ ಮಾಡಲಿ?’ ಎಂದು ಬಿಲ್ ಗೇಟ್ಸ್ ಕೇಳಿದ್ದಾರೆ.
Pic credit: PTI
ಬೀದಿಯಲ್ಲಿ ಕೇಳಿದಾಗ...
ಬಿಲ್ ಗೇಟ್ಸ್ ಯಾವುದೋ ಬೀದಿಯಲ್ಲಿ ಹೋಗುತ್ತಿದ್ದಾಗ ಒಬ್ಬ ವ್ಯಕ್ತಿ ಇದೇ ವಿಚಾರ ಇಟ್ಟುಕೊಂಡು ಕಿರುಚಾಡಿದನಂತೆ. ಅದಕ್ಕೆ ಗೇಟ್ಸ್, ‘ನಿಮ್ಮ ಸ್ಥಳ ಕಟ್ಟಿಕೊಂಡು ನಾನೇನು ಮಾಡ್ಲಪ್ಪ’ ಎಂದರಂತೆ.
Pic credit: PTI
ಚಿಪ್ ಥಿಯರಿ
ಎರಡು ವರ್ಷದ ಹಿಂದೆ (2022) ಬಿಲ್ ಗೇಟ್ಸ್ ವಿರುದ್ಧ ಇಂಥದ್ದೇ ಚಿಪ್ ಥಿಯರಿ ಹರಿದಾಡಿತ್ತು. ಜನರ ಕೈಯೊಳಗೆ ಚಿಪ್ ಅನ್ನು ಸೇರಿಸಲಾಗುತ್ತದೆ ಎನ್ನುವ ವದಂತಿ ಹಬ್ಬಿತ್ತು.
Pic credit: PTI
ಕೋವಿಡ್ ಸಂಕಷ್ಟ
ಕೋವಿಡ್ ಬಂದ ಬಳಿಕ ಈ ರೀತಿಯ ಸಂಚಿನ ಕಥೆಗಳು ಹೇರಳವಾಗಿ ಹುಟ್ಟಿಕೊಂಡಿವೆ. ಕೋವಿಡ್ ಅನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸಿ ಜಗತ್ತಿನಾದ್ಯಂತ ಹರಿಡಸಲಾಗುತ್ತಿದೆ ಎಂದು ಹೇಳಲಾಗಿತ್ತು.
Pic credit: PTI
ನೋವಿನ ಕಾಲ
ಈ ರೀತಿಯ ಅಪಮಾಹಿತಿ ಬಗ್ಗೆ ಬಿಲ್ ಗೇಟ್ಸ್ ಖೇದ ವ್ಯಕ್ತಪಡಿಸುತ್ತಾರೆ. ಕೋವಿಡ್ ರೋಗ ಬಂದಾಗ ಸರಿಯಾದ ನಿರ್ವಹಣೆ ಆಗದೇ ಬಹಳಷ್ಟು ಸಾವು ನೋವು ಅನುಭವಿಸಿದ್ದೇವೆ. ಇಷ್ಟು ಸಾಕಪ್ಪ ಎನ್ನುತ್ತಾರೆ.