ನಡೆದಾಡೋದೇ ಕೆಲಸ; ಗಂಟೆಗೆ 4,000 ರೂ ಸಂಪಾದನೆ; ಟೆಸ್ಲಾ ಆಫರ್
21 Aug 2024
Pic credit: Google
Vijayasarathy SN
ಟೆಸ್ಲಾ ಸಂಸ್ಥೆ ಮಾನವ ರೀತಿಯ ರೋಬೋ ಅಭಿವೃದ್ಧಿಪಡಿಸುತ್ತಿದೆ. ಮನುಷ್ಯರು ಮಾಡುವ ಮೆಕ್ಯಾನಿಕಲ್ ಕೆಲಸಗಳನ್ನು ಈ ರೋಬೋ ಮಾಡುತ್ತದೆ. ಇದಕ್ಕೆ ಟ್ರೈನಿಂಗ್ ನೀಡುವ ಕೆಲಸ ಆಗುತ್ತಿದೆ.
Pic credit: Google
ಎಐ ಮಾಡಲ್ಗಳಿಗೆ ಎಷ್ಟು ಟ್ರೈನಿಂಗ್ ನೀಡುತ್ತೀರೋ ಅಷ್ಟು ನಿಖರತೆ ಅದಕ್ಕೆ ಸಿಗುತ್ತದೆ. ಅದಕ್ಕೆ ಬಹಳಷ್ಟು ಡಾಟಾ ಅವಶ್ಯಕತೆ ಇದೆ.
Pic credit: Google
ಇಲಾನ್ ಮಸ್ಕ್ ಅವರ ಟೆಸ್ಲಾ ಸಂಸ್ಥೆಯ ಆಪ್ಟಿಮಸ್ ರೋಬೋಗಳಿಗೆ ಟ್ರೈನಿಂಗ್ ಕೊಡಲಾಗುತ್ತಿದೆ. ಈ ನಿಟ್ಟಿನಲ್ಲಿ ನಿರ್ದಿಷ್ಟ ಎತ್ತರ ಇರುವ ಮತ್ತು ಡಾಟಾ ನಿರ್ವಹಣೆಯ ಕೌಶಲ್ಯ ಇರುವ ವ್ಯಕ್ತಿಗಳನ್ನು ಹೈರಿಂಗ್ ಮಾಡಿಕೊಳ್ಳುತ್ತಿದೆ.
Pic credit: Google
ಆಪ್ಟಮಸ್ ರೋಬೋ ಎತ್ತರ 5.8 ಅಡಿ ಇರಬಹುದು. ಹೀಗಾಗಿ, 5.7ರಿಂದ 5.11 ಅಡಿ ಎತ್ತರ ಇರುವ ವ್ಯಕ್ತಿಗಳನ್ನು ಕಳೆದ ವರ್ಷ ನೇಮಕ ಮಾಡಿಕೊಳ್ಳಲಾಗಿದೆ. ಇನ್ನಷ್ಟು ಜನರನ್ನು ರೆಕ್ರುಟ್ ಮಾಡಿಕೊಳ್ಳಬಹುದು.
Pic credit: Google
ಈ ಉದ್ಯೋಗಿಗಳಿಗೆ ಮೋಶನ್ ಕ್ಯಾಪ್ಚರ್ ಸ್ಯೂಟ್ ಮತ್ತು ವಿಆರ್ ಹೆಡ್ಸೆಟ್ಗಳನ್ನು ಧರಿಸಿ ನಡೆದಾಡುವುದು ಪ್ರಮುಖ ಕೆಲಸ. ರೋಬೋಗಳು ಅನುಕರಣೆ ಮಾಡಲು ಈ ನಡಿಗೆ ಅವಶ್ಯಕ. ಕಂಪನಿ ತಿಳಿಸಿದ ತಾಂತ್ರಿಕ ಅಂಶಗಳನ್ನು ಒಳಗೊಳ್ಳಬೇಕು.
Pic credit: Google
ಆಪ್ಟಿಮಸ್ ರೋಬೋಗೆ ಕೋಟ್ಯಂತರ ಗಂಟೆಗಳಷ್ಟು ಇಂಥ ಡಾಟಾ ಬೇಕಾಗುತ್ತದೆ. ಆಗ ಅದು ಮನುಷ್ಯರಂತೆ ಕೆಲಸ ಮಾಡಲು ಸಿದ್ಧವಾಗಬಹುದು. ಹೆಚ್ಚೆಚ್ಚು ಡಾಟಾ ಸಿಕ್ಕಷ್ಟೂ ಅದು ಪಕ್ವವಾಗುತ್ತದೆ.
Pic credit: Google
ಈ ರೀತಿಯ ರೋಬೋ ಟ್ರೈನರ್ಗಳಿಗೆ ಎಂಟೂವರೆ ಗಂಟೆ ಅವಧಿಯ ಮೂರು ಶಿಫ್ಟ್ಗಳಿರುತ್ತವೆ. ಗಂಟೆಗೆ 25.25 ಡಾಲರ್ನಿಂದ 48 ಡಾಲರ್ವರೆಗೆ, ಅಂದರೆ 4,028 ರೂವರೆಗೆ ಸಂಭಾವನೆ ಕೊಡಲಾಗುತ್ತದೆ.