ಸಿಂಗಾಪುರದಲ್ಲಿ ಭಾರತೀಯರಿಗೆ ಕನಿಷ್ಠ ಆರಂಭಿಕ ಸಂಬಳ 3.2 ಲಕ್ಷ ರೂ
20 Aug 2024
Pic credit: Google
Vijayasarathy SN
ಸಿಂಗಾಪುರ ಸರ್ಕಾರ ತನ್ನ ಫಾರೀನ್ ವರ್ಕರ್ ನೀತಿಯಲ್ಲಿ ಬದಲಾವಣೆ ಮಾಡಿದ್ದು, ಹೊಸ ಸಂಬಳ ಮಾನದಂಡವನ್ನು ಪ್ರಕಟಿಸಿದೆ. ವಿದೇಶಗಳಿಂದ ಪ್ರತಿಭಾನ್ವಿತರನ್ನು ಸೆಳೆಯಲು ಈ ಕ್ರಮ ಕೈಗೊಂಡಿದೆ.
Pic credit: Google
ಸಿಂಗಾಪುರದಲ್ಲಿ ವಿದೇಶೀ ಉದ್ಯೋಗಿಗಳು ಎಂಪ್ಲಾಯ್ಮೆಂಟ್ ಪಾಸ್ ಪಡೆಯಲು ಮತ್ತು ನವೀಕರಿಸಲು ನಿರ್ದಿಷ್ಟ ಅಂಕಗಳನ್ನು ಹೊಂದಿರಬೇಕು. ಸಂಬಳ ಸೇರಿದಂತೆ ಬೇರೆ ಬೇರೆ ಮೂಲಗಳಿಂದ ಅಂಕಗಳನ್ನು ಗಳಿಸಬಹುದು.
Pic credit: Google
ವಿದೇಶೀ ಉದ್ಯೋಗಿಗಳಿಗೆ ಅಲ್ಲಿನ ಮ್ಯಾನ್ಪವರ್ ಮಿನಿಸ್ಟ್ರಿ ಕನಿಷ್ಠ ಸಂಬಳದ ಮಾನದಂಡ ಪ್ರಕಟಿಸಿದೆ. ಇದಕ್ಕೆ ತಾಳೆಯಾಗುವ ಉದ್ಯೋಗಿಗಳಿಗೆ ಇಪಿ ಅಂಕಗಳು ಸಿಗುತ್ತವೆ.
Pic credit: Google
ಹಣಕಾಸು ಸೇವೆ ವಲಯದ ಉದ್ಯೋಗಿಗಳಿಗೆ ಕನಿಷ್ಠ ಸಂಬಳ 5,500 ಸಿಂಗಾಪುರ್ ಡಾಲರ್ ಇರಬೇಕು. 45 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಉದ್ಯೋಗಿಗಳಿಗೆ ಕನಿಷ್ಠ ಸಂಬಳ 11,500 ಡಾಲರ್ ಇರಬೇಕು ಎನ್ನುತ್ತದೆ ಈ ಕಾನೂನು.
Pic credit: Google
ಫೈನಾನ್ಸ್ ಸರ್ವಿಸಸ್ ಅಲ್ಲದ ಇತರ ವಲಯದಲ್ಲಿ ವಿದೇಶೀ ಉದ್ಯೋಗಿಗಳಿಗೆ ಕನಿಷ್ಠ ಸಂಬಳ 5,000 ದಿಂದ 10,500 ಸಿಂಗಾಪುರ್ ಡಾಲರ್ವರೆಗೂ ಇದೆ.
Pic credit: Google
ಇಲ್ಲಿ 5,000 ಸಿಂಗಾಪುರ ಡಾಲರ್ 3,20,000 ರೂಗೆ ಸಮ. 11,500 ಸಿಂಗಾಪುರ್ ಡಾಲರ್ ಎಂದರೆ 7.36 ಲಕ್ಷ ರೂ ಆಗುತ್ತದೆ. ಇದು ವಾರ್ಷಿಕ ಅಲ್ಲ, ಮಾಸಿಕ ಸಂಬಳ.
Pic credit: Google
ಕಾಂಪ್ಲಿಮೆಂಟಾರಿಟಿ ಅಸೆಸ್ಮೆಂಟ್ ಫ್ರೇಮ್ವರ್ಕ್ ಕೆಟಗರಿ ಸಿ1 ಅಡಿಯಲ್ಲಿ ಎಂಪ್ಲಾಯ್ಮೆಂಟ್ ಪಾಸ್ಗೆ ಅಗತ್ಯ ಇರುವ ಅಂಕಗಳನ್ನು ಪಡೆಯಬೇಕಾದರೆ ಈ ಮೇಲಿನ ಕನಿಷ್ಠ ಸಂಬಳ ಹೊಂದಿರಬೇಕು.