ನಮ್ಮ ಹಣಕಾಸು ಅಗತ್ಯವನ್ನು ಶಾರ್ಟ್ ಟರ್ಮ್, ಮೀಡಿಯಮ್ ಟರ್ಮ್, ಲಾಂಗ್ ಟರ್ಮ್ ಎಂದು ವಿಭಾಗಿಸಬಹುದು. ಶಾರ್ಟ್ ಟರ್ಮ್ ಎಂದರೆ 3 ತಿಂಗಳಿಂದ 3 ವರ್ಷದ ಅವಧಿಯಲ್ಲಿ ಬರಬಹುದಾದ ವೆಚ್ಚಗಳು.
Pic credit: Google
ಈ ಕಿರು ಅವಧಿಗೆ ಮಾಡಬೇಕಾದ ಎಲ್ಲಾ ಕೆಲಸಗಳ ಪಟ್ಟಿ ಮಾಡಿರಿ. ಪ್ರವಾಸ ಹೋಗುವುದು, ವಾಹನ ಖರೀದಿ, ಮನೆ ರಿಪೇರಿ, ಗ್ಯಾಜೆಟ್ ಖರೀದಿ ಇತ್ಯಾದಿ ಯಾವುದೇ ಇದ್ದರೂ ಒಂದು ಲಿಸ್ಟ್ ಮಾಡಿ. ಅವುಗಳ ಸಂಭಾವ್ಯ ವೆಚ್ಚವನ್ನೂ ಲೆಕ್ಕಮಾಡಿ.
Pic credit: Google
ಟರ್ಮ್ ಇನ್ಷೂರೆನ್ಸ್ ಪಾಲಿಸಿ ಮಾಡಿಸಬೇಕು. ಕುಟುಂಬದ ಪ್ರತಿಯೊಬ್ಬರಿಗೂ ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಮಾಡಿಸಬೇಕು. ಇವುಗಳ ಪ್ರೀಮಿಯಮ್ ಹಣ ನಿಮ್ಮ ಶಾರ್ಟ್ ಟರ್ಮ್ ವೆಚ್ಚದಲ್ಲಿ ಒಳಗೊಂಡಿರಲಿ.
Pic credit: Google
ಮನೆ ಕಟ್ಟುವ ಅಥವಾ ಮನೆ ಖರೀದಿಸುವ ಪ್ಲಾನ್ ಇದ್ದರೆ ಸಾಧ್ಯವಾದಷ್ಟೂ ಹಣವನ್ನು ಕೂಡಿಡಲು ಯತ್ನಿಸಿ. ಡೌನ್ಪೇಮೆಂಟ್ಗೆ ಸಹಾಯವಾಗುತ್ತದೆ. ತೀರಾ ಹೆಚ್ಚು ಮೊತ್ತದ ಸಾಲ ಆಗದ ರೀತಿಯಲ್ಲಿ ಹಣಕಾಸು ನಿರ್ವಹಣೆ ಮಾಡಿ.
Pic credit: Google
ಶಾರ್ಟ್ ಟರ್ಮ್ ಅಥವಾ ಕಿರು ಅವಧಿಗೆ ಇರುವ ಹಣಕಾಸು ಗುರಿಗಳು ನಿಮಗೆ ಮೊದಲ ಆದ್ಯತೆ ಆಗಬೇಕು. ಸಾಧ್ಯವಾದಷ್ಟೂ ಪಟ್ಟಿ ಮಾಡಿರಿ. ಅನಿರೀಕ್ಷಿತ ವೆಚ್ಚಕ್ಕೆಂದುಎಮರ್ಜೆನ್ಸಿ ಫಂಡ್ ನಿರ್ಮಿಸಿ.
Pic credit: Google
ಮಾಸಿಕ ವೆಚ್ಚ ಕೈಮೀರದಂತೆ ನೋಡಿಕೊಳ್ಳಲು ಒಂದು ಡೆಟ್ ಫಂಡ್ ನಿರ್ಮಿಸಿ. ಹೂಡಿಕೆ, ಖರ್ಚು ಎಲ್ಲವೂ ಕೈಮೀರಿದಲ್ಲಿ ಈ ಹಣ ಬಳಸಿ. ಸಂಬಳ ಬಂದ ಬಳಿಕ ಮತ್ತೆ ಫಂಡ್ನಲ್ಲಿ ಅಷ್ಟೇ ಹಣ ಹಾಕಿ. ಇದು ಸಹಾಯಕ್ಕೆ ಬರುತ್ತದೆ.
Pic credit: Google
ಶಾರ್ಟ್ ಟರ್ಮ್ ಹಣಕಾಸು ಗುರಿಗಳಿಗೆ ಕಡಿಮೆ ರಿಸ್ಕ್ನ ಹೂಡಿಕೆಯಂತ್ರ ಮುಖ್ಯ. ಎಫ್ಡಿ, ಆರ್ಡಿ, ಡೆಟ್ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಬಹುದು. ಈಕ್ವಿಟಿಗಳಲ್ಲಿನ ಹೂಡಿಕೆ ದೀರ್ಘಾವಧಿಗೆ ಸೂಕ್ತವಾಗಿರುತ್ತದೆ.