18 Aug 2024
Pic credit: Google
Vijayasarathy SN
ಸರ್ಕಾರದ ವತಿಯಿಂದ ಬ್ಯಾಂಕು ಮತ್ತು ಅಂಚೆ ಕಚೇರಿಗಳಲ್ಲಿ ಸ್ಮಾಲ್ ಸೇವಿಂಗ್ಸ್ ಸ್ಕೀಮ್ಗಳನ್ನು ನಡೆಸಲಾಗುತ್ತಿದೆ. ಕಾಲಕಾಲಕ್ಕೆ ಬಡ್ಡಿದರ ಪರಿಷ್ಕರಿಸಲಾಗುತ್ತದೆ. ಈಗ ಇರುವ ದರಗಳು ಇಲ್ಲಿವೆ...
Pic credit: Google
ಅಂಚೆ ಕಚೇರಿಯಲ್ಲಿ 1, 2, 3 ಮತ್ತು 5 ವರ್ಷದ ಟೈಮ್ ಡೆಪಾಸಿಟ್ ಪ್ಲಾನ್ಗಳಿವೆ. ಇವುಗಳಿಗೆ ವಾರ್ಷಿಕ ಬಡ್ಡಿದರ ಕ್ರಮವಾಗಿ ಶೇ. 6.9, ಶೇ 7, ಶೇ 7.1, ಶೇ 7.5 ಬಡ್ಡಿ ನೀಡಲಾಗುತ್ತದೆ.
Pic credit: Google
ಪೋಸ್ಟ್ ಆಫೀಸ್ನ ಆರ್ಡಿ ಅಥವಾ ಆವತ್ತಿತ ಠೇವಣಿ ಯೋಜನೆಯಲ್ಲಿ ವರ್ಷಕ್ಕೆ ಶೇ. 6.7 ಬಡ್ಡಿ ಸಿಗುತ್ತದೆ. ಸೇವಿಂಗ್ಸ್ ಅಕೌಂಟ್ನಲ್ಲಿ ಹಾಗೇ ಹಣ ಬಿಟ್ಟರೂ ಶೇ 4 ಬಡ್ಡಿ ಸಿಗುತ್ತದೆ.
Pic credit: Google
ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ಶೇ 7.5 ಬಡ್ಡಿ ಸಿಗುತ್ತದೆ. ಒಮ್ಮೆ ಡೆಪಾಸಿಟ್ ಮಾಡಿದರೆ 115 ತಿಂಗಳಿಗೆ ಮೆಚ್ಯೂರ್ ಆಗುತ್ತದೆ. ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್ನಲ್ಲಿ ಶೇ. 7.7 ಬಡ್ಡಿ ಸಿಗುತ್ತದೆ.
Pic credit: Google
10 ವರ್ಷದೊಳಗಿನ ಹೆಣ್ಮಕ್ಕಳ ಹೆಸರಿನಲ್ಲಿ ಆರಂಭಿಸಬಹುದಾದ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಶೇ 8.2ರಷ್ಟು ಬಡ್ಡಿ ಸಿಗುತ್ತದೆ. 21 ವರ್ಷಕ್ಕೆ ಮೆಚ್ಯೂರ್ ಆಗುವ ಈ ಸ್ಕೀಮ್ನಲ್ಲಿ ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗೆ ಹೂಡಿಕೆ ಮಾಡಬಹುದು.
Pic credit: Google
ಪಬ್ಲಿಕ್ ಪ್ರಾವಿಡೆಂಟ್ ಫಂಡ್ಗೆ ಶೇ. 7.1 ಬಡ್ಡಿ ಸಿಗುತ್ತದೆ. 15 ವರ್ಷದ ಈ ಸ್ಕೀಮ್ನಲ್ಲಿ ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗೆ ಹೂಡಿಕೆ ಮಾಡಬಹುದು. ಅವಶ್ಯಕತೆ ಇದ್ದರೆ ಸ್ಕೀಮ್ ಅವಧಿ ಐದು ವರ್ಷಕ್ಕೊಮ್ಮೆ ವಿಸ್ತರಿಸಬಹುದು.
Pic credit: Google
ಹಿರಿಯ ನಾಗರಿಕರ ಸೇವಿಂಗ್ಸ್ ಸ್ಕೀಮ್ಗೆ ಶೇ 8.2 ಬಡ್ಡಿ ಸಿಗುತ್ತದೆ. ಅಂಚೆ ಕಚೇರಿಯಲ್ಲಿ ಮಾಸಿಕ ಆದಾಯ ಯೋಜನೆಯೂ ಇದ್ದು ಅದರಲ್ಲಿ ಶೇ. 7.4ರಷ್ಟು ಬಡ್ಡಿ ಸಿಗುತ್ತದೆ. ಸುಕನ್ಯಾ ಸಮೃದ್ಧಿ ಮತ್ತು ಸೀನಿಯರ್ ಸಿಟಿಜನ್ಸ್ ಪ್ಲಾನ್ಗಳಿಗೆ ಗರಿಷ್ಠ ಬಡ್ಡಿ ಸಿಗುತ್ತದೆ.
Pic credit: Google