ಶ್ರೀಮಂತಿಕೆಗೆ 8-3-4 ಸೂತ್ರ ತಿಳಿದಿರಿ...

20 Nov 2024

Pic: Getty images

Vijayasarathy SN

ದೀರ್ಘಕಾಲದ ಹೂಡಿಕೆಯಿಂದ ಅಚ್ಚರಿ ಎನಿಸುವಷ್ಟು ಲಾಭಗಳಿವೆ. ಹೂಡಿಕೆ ಅವಧಿ ಹೆಚ್ಚುತ್ತಾ ಹೋದಷ್ಟೂ ನಿಮ್ಮ ಸಂಪತ್ತು ಬೆಳೆಯುವ ವೇಗ ಹೆಚ್ಚುತ್ತಾ ಹೋಗುತ್ತದೆ.

Pic: Getty images

ದೀರ್ಘಕಾಲೀನ ಹೂಡಿಕೆ ಅಚ್ಚರಿ ರೀತಿಯಲ್ಲಿ ರಿಟರ್ನ್ ತರಲು ಕಾರಣ ಕಾಂಪೌಂಡಿಂಗ್ ಗುಣ. ಹೂಡಿಕೆ ತರುವ ಪ್ರತಿಯೊಂದು ರಿಟರ್ನ್ ಕೂಡ ಕೂಡಿಕೊಳ್ಳುತ್ತಾ ಹೋಗುತ್ತದೆ.

Pic: Getty images

ಕಾಂಪೌಂಡಿಂಗ್ ಎಫೆಕ್ಟ್ ಹೇಗೆ ಎನ್ನುವುದನ್ನು ವಿವರಿಸುತ್ತದೆ 8-4-3 ಸೂತ್ರ. ಮೊದಲ 8 ವರ್ಷದಲ್ಲಿ ಗಳಿಸಿದ ರಿಟರ್ನ್ ಅನ್ನು ನೀವು ಮುಂದಿನ 4 ವರ್ಷದಲ್ಲಿ ಪಡೆಯಬಹುದು.

Pic: Getty images

ಉದಾಹರಣೆಗೆ, ನೀವು ತಿಂಗಳಿಗೆ 20,000 ರೂ ಹೂಡಿಕೆ ಮಾಡುತ್ತೀರಿ ಎನ್ನೋಣ. ಅದು ವರ್ಷಕ್ಕೆ ಶೇ. 12ರಂತೆ ರಿಟರ್ನ್ ನೀಡುತ್ತದೆ ಎಂದಿಟ್ಟುಕೊಳ್ಳಿ. ಆಗ 8 ವರ್ಷಕ್ಕೆ 32 ಲಕ್ಷ ರೂ ಆಗಿರುತ್ತೆ ನಿಮ್ಮ ಹೂಡಿಕೆ.

Pic: Getty images

8 ವರ್ಷ ಬಳಿಕ ಇನ್ನೂ 4 ವರ್ಷ ಹೂಡಿಕೆ ಮುಂದುವರಿಸಿಕೊಂಡರೆ ಒಟ್ಟು ರಿಟರ್ನ್ಸ್ 64 ಲಕ್ಷ ಆಗುತ್ತದೆ. ಈ ಬಾರಿ 32 ಲಕ್ಷ ರೂ ಗಳಿಸಲು ತೆಗೆದುಕೊಂಡ ಅವಧಿ ಕಡಿಮೆ ಆಯಿತು.

Pic: Getty images

ಅಷ್ಟೇ ಅಲ್ಲ, ನೀವು 20,000 ರೂ ಮಾಸಿಕ ಹೂಡಿಕೆಯನ್ನು ಮುಂದುವರಿಸಿಕೊಂಡು ಹೋದಲ್ಲಿ ಮತ್ತಷ್ಟು 32 ಲಕ್ಷ ಸೇರಲು ಬೇಕಾಗುವ ಅವಧಿ 3 ವರ್ಷ ಮಾತ್ರ. ಅಂದರೆ 15 ವರ್ಷದಲ್ಲಿ 1 ಕೋಟಿ ರೂ ಆಗುತ್ತದೆ.

Pic: Getty images

ಹೂಡಿಕೆ ಮುಂದುವರಿಸಿದರೆ 20 ವರ್ಷಕ್ಕೆ 1 ಕೋಟಿ, 25 ವರ್ಷಕ್ಕೆ 3.8 ಕೋಟಿ, 30 ವರ್ಷಕ್ಕೆ 7 ಕೋಟಿ, 35 ವರ್ಷಕ್ಕೆ 13 ಕೋಟಿ ಆಗಿರುತ್ತದೆ. 35 ವರ್ಷದಲ್ಲಿ ನೀವು ಕಟ್ಟುವುದು 84 ಲಕ್ಷ, ರಿಟರ್ನ್ ಪಡೆಯುವುದು 13 ಕೋಟಿ.

Pic: Getty images