ಸೆನಗಲ್ ದೇಶದ ಫುಟ್ಭಾಲ್ ಆಟಗಾರ ಸಾದಿಯೋ ಮಾನೇ ಎಂಬಾತ ತನ್ನೂರಿನ ಜನರಿಗೆ ಧಾರಾಳ ರೀತಿಯಲ್ಲಿ ಧನಸಹಾಯ ಮಾಡುತ್ತಾರಂತೆ. ಬಹಳ ಹಿಂದುಳಿದ ದೇಶದ ತನ್ನ ಹಳ್ಳಿಯ ಜನರಿಗೆ ಈತ ದೈವಸ್ವರೂಪಿ.
Pic: Google
ಸಾದಿಯೋ ಮಾನೆ ಅವರು ಲಿವರ್ಪೂಲ್, ಬಾಯರ್ನ್ ಮ್ಯೂನಿಕ್ನಂತಹ ಟಾಪ್ ಫುಟ್ಬಾಲ್ ಕ್ಲಬ್ಗಳಲ್ಲಿ ಆಡಿದ್ದಾರೆ. ಸದ್ಯ ಸೌದಿ ಅರೇಬಿಯಾದ ಅಲ್ ನಸರ್ ಕ್ಲಬ್ ಪರ ಆಡುತ್ತಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೋ ಕೂಡ ಇದೇ ಕ್ಲಬ್ನಲ್ಲಿ ಆಡುತ್ತಾರೆ.
Pic: Google
ಸಾದಿಯೋ ಮಾನೇ ತನ್ನೂರಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ತಿಂಗಳಿಗೆ 76 ಡಾಲರ್ ಹಣ ನೀಡುತ್ತಾರೆ. ಸುಮಾರು 6,000 - 6,500 ರೂ ಆಗುತ್ತದೆ. ಇದು 2019ರಲ್ಲಿ ಕೇಳಿ ಬಂದ ಮಾಹಿತಿ. ಈಗ ಅವರು ಇನ್ನೂ ಹೆಚ್ಚು ಕೊಡುತ್ತಿರಬಹುದು.
Pic: Google
ಸಾದಿಯೋ ಮಾನೇ ಅವರು ಸೆನೆಗಲ್ ದೇಶದ ಬಂಬಾಲಿ ಎಂಬ ಊರಿನಲ್ಲಿ ಹುಟ್ಟಿ ಬೆಳೆದವರು. ಇಲ್ಲಿ 2,000 ಜನಸಂಖ್ಯೆ ಇದೆ. ಪ್ರತಿಯೊಬ್ಬರಿ ತಿಂಗಳಿಗೆ 76 ಡಾಲರ್ ಎಂದರೆ ವರ್ಷಕ್ಕೆ 1.8 ಮಿಲಿಯನ್ ಡಾಲರ್ ಆಗುತ್ತದೆ.
Pic: Google
ಕುತೂಹಲ ಎಂದರೆ ಸೆನೆಗಲ್ ದೇಶದ ಮಾಸಿಕ ಕನಿಷ್ಠ ವೇತನ 88 ಡಾಲರ್ ಇದೆ. ಸಾದಿಯೋ ಮಾನೇ ತನ್ನೂರಿನ ಎಲ್ಲಾ ಜನರಿಗೂ ಹೆಚ್ಚೂಕಡಿಮೆ ಇದಕ್ಕೆ ಬೇಸಿಕ್ ಇನ್ಕಮ್ಗೆ ಸಮವಾದ ಹಣದ ಸಹಾಯ ಒದಗಿಸುತ್ತಾರೆ.
Pic: Google
ಹಸಿವು, ಬಡತನದಲ್ಲಿ ಬೆಳೆದವನು. ಕೂಲಿ ಮಾಡಿದ್ದೇನೆ. ಓದಲು ಆಗಲಿಲ್ಲ. ಬರಿಗಾರಲ್ಲಿ ಫುಟ್ಬಾಲ್ ಆಡುತ್ತಿದ್ದೆ. ಇವತ್ತು ನಾನೇನಾಗಿದ್ದೇನೋ ಅದು ಫುಟ್ಬಾಲ್ನಿಂದ ಆದದ್ದು. ನನ್ನ ಜನರಿಗೆ ಸಹಾಯ ಮಾಡುವ ಶಕ್ತಿ ನನಗಿದೆ ಎನ್ನುತ್ತಾರೆ ಸಾದಿಯೋ.
Pic: Google
ಫೆರಾರಿ ಕಾರು, ಡೈಮಂಡ್ ವಾಚು ಅಥವಾ ವಿಮಾನ ಯಾಕೆ ಬೇಕು ಹೇಳಿ ಎಂದು ಕೇಳುವ ಈ ಸೆನೆಗಲ್ ಆಟಗಾರ, ತನ್ನೂರಿನಲ್ಲಿ ಆಸ್ಪತ್ರೆ, ಪೋಸ್ಟ್ ಆಫೀಸ್, ಗ್ಯಾಸ್ ಸ್ಟೇಷನ್ ಇತ್ಯಾದಿ ಹಲವು ಸೌಕರ್ಯಗಳ ವ್ಯವಸ್ಥೆ ಮಾಡಿದ್ದಾರೆ.