ಭಾರತದ ಮೊದಲ ಹೈಡ್ರೋಜನ್ ಶಕ್ತ ಟ್ರೈನು ಸಿದ್ಧವಾಗಿದೆ. ಡಿಸೆಂಬರ್ನಲ್ಲಿ ಇದರ ಟ್ರಯಲ್ ನಡೆಯಲಿದೆ. ಹರ್ಯಾಣದ ಜಿಂದ್ ಮತ್ತು ಸೋನಿಪತ್ ನಡುವೆ 90 ಕಿಮೀ ಮಾರ್ಗದಲ್ಲಿ ಇದು ಸಂಚರಿಸಲಿದೆ.
ಮೊದಲ ರೈಲು
Pic: Google
ಜಲಜನಕ (ಹೈಡ್ರೋಜನ್) ಮತ್ತು ಆಮ್ಲಜನಕ (ಆಕ್ಸಿಜನ್) ಸಂಯೋಜನೆಯ ಫುಯಲ್ ಸೆಲ್ಗಳನ್ನು ಈ ಟ್ರೈನುಗಳಿಗೆ ಬಳಸಲಾಗಿದೆ. ಗಂಟೆಗೆ 140 ಕಿಮೀ ವೇಗದಲ್ಲಿ ಇದು ಓಡಬಲ್ಲುದು.
140 ಕಿಮೀ ವೇಗ
Pic: Google
ತಮಿಳುನಾಡಿನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಹೈಡ್ರೋಜನ್ ಟ್ರೈನು ತಯಾರಿಸಲಾಗಿದೆ. ಈ ರೈಲು ಮಾಲಿನ್ಯ ಹೊರಸೂಸುವುದಿಲ್ಲ. ಇದರ ಎಂಜಿನ್ನಿಂದ ನೀರಿನ ಆವಿ ಮಾತ್ರವೇ ಹೊರಬರುತ್ತದೆ.
ಮಾಲಿನ್ಯರಹಿತ
Pic: Google
2030ರೊಳಗೆ ಶೂನ್ಯ ಇಂಗಾಲ ಹೊರಸೂಸುವಿಕೆಯ ಸ್ಥಿತಿಯನ್ನು ಸಾಧಿಸುವ ಗುರಿ ಭಾರತೀಯ ರೈಲ್ವೆಯದ್ದು. ಈ ಗುರಿ ಸಾಧನೆ ನಿಟ್ಟಿನಲ್ಲಿ ಹೈಡ್ರೋಜನ್ ಟ್ರೈನು ಪ್ರಧಾನ ಪಾತ್ರ ಹೊಂದಿದೆ.
ಕಾರ್ಬನ್ ಝೀರೋ
Pic: Google
ಡಿಸೆಂಬರ್ನ ಟ್ರಯಲ್ ಯಶಸ್ವಿಯಾದಲ್ಲಿ 2025ರೊಳಗೆ 35ಕ್ಕೂ ಹೆಚ್ಚು ಹೈಡ್ರೋಜನ್ ಶಕ್ತ ಟ್ರೈನುಗಳನ್ನು ವಿವಿಧ ಮಾರ್ಗಗಳಿಗೆ ನಿಯೋಜಿಸುವ ಉದ್ದೇಶ ರೈಲ್ವೆ ಇಲಾಖೆಯದ್ದಾಗಿದೆ.
ಮತ್ತಷ್ಟು 35 ಟ್ರೈನು
Pic: Google
ಒಂದು ಹೈಡ್ರೋಜನ್ ಟ್ರೈನು ನಿರ್ಮಿಸಲು 80 ಕೋಟಿ ರೂ ವೆಚ್ಚವಾಗುತ್ತದೆ. ಇದರ ಆರಂಭಿಕ ನಿರ್ವಹಣಾ ವೆಚ್ಚ ಸಾಂಪ್ರದಾಯಿಕ ರೈಲಿಗಿಂತ ತುಸು ಹೆಚ್ಚಿರುತ್ತದೆ. ಆದರೆ, ಅನುಕೂಲಗಳು ಹಲವು.
ತುಸು ದುಬಾರಿ
Pic: Google
ಜರ್ಮನಿಯಲ್ಲಿ 2018ರಲ್ಲಿ ಹೈಡ್ರೋಜನ್ ರೈಲು ಪರಿಚಯಿಸಲಾಯಿತು. ಇದು ವಿಶ್ವದ ಮೊದಲ ಹೈಡ್ರೋಜನ್ ಶಕ್ತ ಟ್ರೈನು. ಚೀನಾ, ಸ್ವಿಟ್ಜರ್ಲ್ಯಾಂಡ್, ಸ್ವೀಡನ್ ಮೊದಲಾದ ಕೆಲವೇ ದೇಶಗಳು ಈ ಟ್ರೈನು ಹೊಂದಿವೆ.