15 Nov 2024

Pic credit: Google

ಟ್ರೈನುಗಳಲ್ಲಿ ವೃದ್ಧರಿಗೆ ಇರುವ ಸೌಲಭ್ಯಗಳು

Vijayasarathy SN

ವಯೋವೃದ್ಧರು ರಿಸರ್ವ್ಡ್ ಟಿಕೆಟ್ ಖರೀದಿಸಿದಾಗ ಲೋಯರ್ ಬರ್ತ್​ಗಳ (ಕೆಳಗಿನ ಸೀಟು) ಲಭ್ಯ ಇದ್ದರೆ, ಅವರಿಗೆ ಆದ್ಯತೆ ಕೊಡಲಾಗುತ್ತದೆ.

Pic credit: Google

ಕೆಳಗಿನ ಬರ್ತ್​ನಲ್ಲಿ ಆದ್ಯತೆ

ವೃದ್ಧರು ಮಾತ್ರವಲ್ಲ, 45 ವರ್ಷ ದಾಟಿದ ಮಹಿಳೆಯರಿಗೂ ಕೆಳಗಿನ ಬರ್ತ್​ಗಳಲ್ಲಿ ಆದ್ಯತೆ ಸಿಗುತ್ತದೆ. ಇವೆಲ್ಲವೂ ಆ ಸೀಟುಗಳ ಲಭ್ಯತೆ ಮೇಲೆ ಅವಲಂಬಿತವಾಗಿರುತ್ತದೆ.

Pic credit: Google

45 ವರ್ಷ ಮಹಿಳೆಯರಿಗೂ

ಟಿಕೆಟ್ ರಿಸರ್ವ್ ಮಾಡುವಾಗ ವೃದ್ಧರಿಗೆ ಕೆಳಗಿನ ಬರ್ತ್ ಸಿಗದಿದ್ದಾಗ, ಪ್ರಯಾಣದ ಅವಧಿಯಲ್ಲಿ ಲೋಯರ್ ಬರ್ತ್ ತೆರವುಗೊಂಡಿದ್ದು ಕಂಡುಬಂದಲ್ಲಿ, ಆಗ ಟಿಟಿಇಗೆ ಮನವಿ ಮಾಡಿ ಆ ಸೀಟು ಪಡೆಯಲು ಅವಕಾಶ ಇರುತ್ತದೆ.

Pic credit: Google

ಪ್ರಯಾಣದ ಅವಧಿಯಲ್ಲಿ...

ಪ್ರತಿಯೊಂದು ಸ್ಲೀಪರ್ ಕೋಚ್​ನಲ್ಲೂ 6 ಕೆಳಗಿನ ಸೀಟುಗಳು ಹಿರಿಯ ನಾಗರಿಕರಿಗೆ ಮೀಸಲಾಗಿರುತ್ತದೆ. ಎಸಿ 2 ಮತ್ತು 3ನೇ ಟಯರ್ ಕೋಚ್​ಗಳಲ್ಲಿ ಕೆಳಗಿನ 3 ಬರ್ತ್​ಗಳು ವೃದ್ಧರಿಗೆ ರಿಸರ್ವ್ ಆಗಿರುತ್ತವೆ.

Pic credit: Google

ಸ್ಲೀಪರ್ ಕೋಚ್​ನಲ್ಲಿ...

ರಾಜಧಾನಿ ಎಕ್ಸ್​ಪ್ರೆಸ್, ದುರಂತೋ ಎಕ್ಸ್​ಪ್ರೆಸ್​ನಂತಹ ಪೂರ್ಣ ಎಸಿ ಟ್ರೈನುಗಳಲ್ಲಿ ಹೆಚ್ಚಿನ ಕೆಳ ಬರ್ತ್​ಗಳು ಹಿರಿಯ ನಾಗರಿಕರಿಗೆ ಮೀಸಲಾಗಿರುತ್ತವೆ.

Pic credit: Google

ಎಕ್ಸ್​ಪ್ರೆಸ್ ರೈಲುಗಳಲ್ಲಿ...

ಬಸ್ಸುಗಳಲ್ಲಿರುವಂತೆ ನಮ್ಮ ಮೆಟ್ರೋ, ಲೋಕಲ್ ಟ್ರೈನ್​ಗಳಲ್ಲೂ ಹಿರಿಯ ನಾಗರಿಕರಿಗೆ ಕೆಲ ಸೀಟುಗಳು ರಿಸರ್ವ್ಡ್ ಆಗಿರುತ್ತವೆ. ಯಾರು ಬೇಕಾದರೂ ಕೂರಬಹುದಾದರೂ ವೃದ್ಧರು ಇದ್ದರೆ ಅವರಿಗೆ ಸೀಟು ಬಿಟ್ಟುಕೊಡಬೇಕು.

Pic credit: Google

ನಮ್ಮ ಮೆಟ್ರೋದಲ್ಲಿ...

ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ವ್ಹೀಲ್​ಚೇರ್​ಗಳ ವ್ಯವಸ್ಥೆ ಇರುತ್ತದೆ. ನಡೆಯಲು ಆಗದ ಅಶಕ್ತರು, ಹಿರಿಯ ನಾಗರಿಕರು ಮೊದಲಾದವರು ಇದನ್ನು ಬಳಸಬಹುದು. ನೆರವಿಗೆಂದು ಪೋರ್ಟರ್ ಇರುತ್ತಾರೆ.

Pic credit: Google

ನಿಲ್ದಾಣದಲ್ಲಿ ವ್ಹೀಲ್​ಚೇರ್