ಟಾಟಾ ಮತ್ತು ಏರ್​ಲೈನ್ಸ್: 1932-2024; ಟೈಮ್​ಲೈನ್

11 Nov 2024

Pic credit: Google

Vijayasarathy SN

1932ರಲ್ಲಿ ಜೆಆರ್​ಡಿ ಟಾಟಾ ಅವರಿಂದ ಟಾಟಾ ಏರ್ಲೈನ್ಸ್ ಸ್ಥಾಪನೆ. ಇದು ಭಾರತದ ಮೊತ್ತಮೊದಲ ಏರ್ಲೈನ್ ಎಂಬುದು ವಿಶೇಷ. ಕರಾಚಿಯಿಂದ ಬಾಂಬೆಗೆ ಫ್ಲೈಟ್ ಸೇವೆ.

ಟಾಟಾ ಏರ್ಲೈನ್ಸ್ ಸ್ಥಾಪನೆ

Pic credit: Google

1946ರಲ್ಲಿ ಟಾಟಾ ಏರ್ಲೈನ್ಸ್ ಸಂಸ್ಥೆಯ ಹೆಸರನ್ನು ಏರ್ ಇಂಡಿಯಾ ಎಂದು ಬದಲಿಸಲಾಯಿತು. ಏರ್ ಇಂಡಿಯಾ ಬ್ರ್ಯಾಂಡ್​ಗೆ 78 ವರ್ಷದ ಇತಿಹಾಸ ಇದ್ದಂತಾಯಿತು.

ಏರ್ ಇಂಡಿಯಾ ಬ್ರ್ಯಾಂಡ್

Pic credit: Google

1953ರಲ್ಲಿ ಭಾರತ ಸರ್ಕಾರ ಏರ್ ಇಂಡಿಯಾದಲ್ಲಿ ಶೇ. 49ರಷ್ಟು ಪಾಲು ಪಡೆಯಿತು. ನಂತರ ವರ್ಷಗಳಲ್ಲಿ ಈ ವಿಮಾನ ಸಂಸ್ಥೆಯನ್ನು ಪೂರ್ಣವಾಗಿ ರಾಷ್ಟ್ರೀಕರಣಗೊಳಿಸಲಾಯಿತು.

ಏರ್ ಇಂಡಿಯಾ ರಾಷ್ಟ್ರೀಕರಣ

Pic credit: Google

ರಾಷ್ಟ್ರೀಕರಣದಿಂದಾಗಿ ಏರ್ ಇಂಡಿಯಾವನ್ನು ಕಳೆದುಕೊಂಡಿದ್ದ ಟಾಟಾ ಗ್ರೂಪ್ ಸಿಂಗಾಪುರ್ ಏರ್ಲೈನ್ಸ್ ಜೊತೆ ಸೇರಿ ಮತ್ತೆ ಅದನ್ನು ಪಡೆಯಲು 2001ರಲ್ಲಿ ಪ್ರಯತ್ನಿಸಿತು. ಅದು ಸಾಧ್ಯವಾಗಲಿಲ್ಲ.

ಮರಳಿ ಗಳಿಸಲು ಯತ್ನ

Pic credit: Google

2013ರಲ್ಲಿ ಬೇರೆ ಬೇರೆ ವಿಮಾನ ಸಂಸ್ಥೆಗಳ ಜೊತೆಗೂಡಿ ಟಾಟಾ ಗ್ರೂಪ್ ಏರ್ ಏಷ್ಯಾ ಇಂಡಿಯಾ ಮತ್ತು ವಿಸ್ತಾರಾ ಏರ್ಲೈನ್ಸ್ ಅನ್ನು ಸ್ಥಾಪಿಸಿತು. ಏರ್​ಏಷ್ಯಾ ಬೆರ್ಹಾದ್ ಮತ್ತು ಸಿಂಗಾಪುರ್ ಏರ್ಲೈನ್ಸ್ ಒಂದಷ್ಟು ಬಂಡವಾಳ ಹಾಕಿದವು.

ಬೇರೆ ಏರ್ಲೈನ್ಸ್

Pic credit: Google

2020ರಲ್ಲಿ ನಷ್ಟಪೀಡಿತ ಏರ್ ಇಂಡಿಯಾವನ್ನು ಸರ್ಕಾರ ಖಾಸಗೀಕರಣಗೊಳಿಸಲು ನಿರ್ಧರಿಸಿತು. 2021ರಲ್ಲಿ ಟಾಟಾ ಯಶಸ್ವಿ ಬಿಡ್ ಸಲ್ಲಿಸಿ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್​ಪ್ರೆಸ್ ಅನ್ನು ಖರೀದಿಸಿತು.

ಏರ್ ಇಂಡಿಯಾ ಪಾಲು

Pic credit: Google

ಟಾಟಾ ಗ್ರೂಪ್ ತೆಕ್ಕೆಯಲ್ಲಿ ಏರ್ ಇಂಡಿಯಾ, ಎಪ್ಸ್​​ಪ್ರೆಸ್, ಏರ್ ಏಷ್ಯಾ, ವಿಸ್ತಾರ ಏರ್ಲೈನ್ಸ್ ಬಂದಾಗಿತ್ತು. 2022ರಿಂದ ಹಂತ ಹಂತವಾಗಿ ಏರ್ ಏಷ್ಯಾ ಮತ್ತು ವಿಸ್ತಾರವನ್ನು ಏರ್ ಇಂಡಿಯಾಗೆ ವಿಲೀನ ಮಾಡಿದೆ.

ಎಲ್ಲ ವಿಲೀನ

Pic credit: Google