ಆ್ಯಪಲ್ ಕಟ್ಟುವ ಮುನ್ನ ಭಾರತದಲ್ಲಿ ಬೀದಿಬೀದಿ ಅಲೆದಿದ್ದ ಸ್ಟೀವ್ ಜಾಬ್ಸ್
10 Nov 2024
Pic credit: Google
Vijayasarathy SN
ಆ್ಯಪಲ್ ಈ ವಿಶ್ವದ ಅತ್ಯಂತ ದೊಡ್ಡ ಕಂಪನಿಗಳಲ್ಲಿ ಒಂದು. ಐಫೋನ್, ಐಪ್ಯಾಡ್, ಮ್ಯಾಕ್ ಇತ್ಯಾದಿ ಬಹಳ ಜನಪ್ರಿಯ ಉತ್ಪನ್ನಗಳಿವೆ. ಸ್ಟೀವ್ ಜಾಬ್ಸ್ ಇದರ ಸಂಸ್ಥಾಪಕ.
Pic credit: Google
ಸ್ಟೀವ್ ಜಾಬ್ಸ್ ಆ್ಯಪಲ್ ಕಂಪನಿ ಕಟ್ಟುವ ಮುನ್ನ ಭಾರತಕ್ಕೆ ಬಂದಿದ್ದರು. ಏನೋ ಕಂಡುಕೊಳ್ಳಲು ಅಲೆಮಾರಿಯಂತೆ ಅಲೆದಾಡಿದ್ದರು. ಅದೇನು ಜ್ಞಾನೋದಯವಾಯಿತೋ, ಅಮೆರಿಕಕ್ಕೆ ಮರಳಿ ಸರ್ವಶ್ರೇಷ್ಠ ಕಂಪನಿ ಕಟ್ಟಿದರು.
Pic credit: Google
19ನೇ ವಯಸ್ಸಿನಲ್ಲಿ ಕಾಲೇಜ್ನಿಂದ ಡ್ರಾಪೌಟ್ ಆಗಿದ್ದ ಸ್ಟೀವ್ ಜಾಬ್ಸ್ಗೆ ಜೀವನ ಅಯೋಮಯ ಅನಿಸಿತ್ತು. ಆ ಸಂದರ್ಭದಲ್ಲಿ ಭಾರತದ ನೀಮ್ ಕರೋಲಿ ಬಾಬಾ ಚಮತ್ಕಾರದ ಬಗ್ಗೆ ಸ್ಟೀವ್ಗೆ ಗೊತ್ತಾಯಿತು. ಇದು ಟರ್ನಿಂಗ್ ಪಾಯಿಂಟ್.
Pic credit: Google
ಸ್ಟೀವ್ ಜಾಬ್ಸ್ 1974ರಲ್ಲಿ ನೀಮ್ ಕರೋಲಿ ಬಾಬಾರನ್ನು ಕಾಣಲು ಭಾರತಕ್ಕೆ ಬಂದಿದ್ದರು. ಆದರೆ, ಅವರು ಬರುವ ಕೆಲ ಕಾಲದ ಮುನ್ನ ಬಾಬಾ ಇಹಲೋಹ ತ್ಯಜಿಸಿದ್ದರು. ಆದರೆ, ಜಾಬ್ಸ್ ತತ್ಕ್ಷಣವೇ ಮರಳಲಿಲ್ಲ.
Pic credit: Google
ಭಾರತದ ಬೀದಿಬೀದಿಗಳನ್ನು ಸುತ್ತಿದರು. ಗುಹೆಗಳಲ್ಲಿ ಧ್ಯಾನ ಮಾಡಿದರು. ಸಿಕ್ಕ ಆಹಾರ ತಿಂದರು. ಪಾಳುಬಿದ್ದ ಕಟ್ಟಡಗಳಲ್ಲಿ ಮಲಗಿದರು. ಒಂದೊಮ್ಮೆ ಅವರಿಗೆ ಜೀವನದ ಸತ್ಯ ತಿಳಿಯಿತು. ತರ್ಕವಲ್ಲ, ಆತ್ಮಪ್ರಜ್ಞೆ ಮುಖ್ಯ ಅನಿಸಿತು.
Pic credit: Google
ಸ್ಟೀವ್ ಜಾಬ್ಸ್ಗೆ ಭಾರತದಲ್ಲಿ ಒಂದು ಸ್ಪಷ್ಟತೆ ಸಿಕ್ಕಿತು. ಏಳು ತಿಂಗಳು ಭಾರತದಲ್ಲಿದ್ದು ಅಮೆರಿಕಕ್ಕೆ ಹೋದ ಅವರು ಮನಸು ಹೇಳಿದ ಮಾತು ಕೇಳುತ್ತಾ ಹೋದರು. ಆ್ಯಪಲ್ ಕಂಪನಿ ಕಟ್ಟಲು ಇದು ನೆರವಾಯಿತು.
Pic credit: Google
ಜೀವನ ಸರಳವಾಗಿರಬೇಕು. ಉತ್ಪನ್ನ ಸರಳವಾಗಿರಬೇಕು. ಗೋಜಲುಗಳು ಇರಬಾರದು ಎನ್ನುವ ಧೋರಣೆಯಲ್ಲಿ ಆ್ಯಪಲ್ ಕಂಪನಿಯ ಉತ್ಪನ್ನಗಳು ತಯಾರಾದವು. ಬಹಳ ಬೇಗ ಜನಪ್ರಿಯ ಎನಿಸಿದವು.