ಟ್ರಂಪ್ ಕಂಬ್ಯಾಕ್: ಭಾರತಕ್ಕೇನು ಪರಿಣಾಮ?

06 Nov 2024

Pic: AP, PTI images

Vijayasarathy SN

ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ, ಎರಡನೇ ಬಾರಿ ಯುಎಸ್ ಪ್ರೆಸಿಡೆಂಟ್ ಆಗಿದ್ದಾರೆ. ಈಗ ಟ್ರಂಪ್ ಪುನರಾಗಮನದಿಂದ ಭಾರತದ ಮೇಲೆ ಪರಿಣಾಮ ಏನಾಗಬಹುದು?

Pic: AP, PTI images

ಟ್ರಂಪ್ ಅವರು ನ್ಯಾಷನಲಿಸ್ಟ್ ಧೋರಣೆಯವರು. ಯುಎಸ್ ಡಾಲರ್ ಕರೆನ್ಸಿ ಬಲಿಷ್ಠಗೊಳ್ಳಬಹುದು. ಪರಿಣಾಮವಾಗಿ ರುಪಾಯಿ ಕರೆನ್ಸಿ ಮೌಲ್ಯ ಮತ್ತಷ್ಟು ಕುಸಿಯಬಹುದು.

Pic: AP, PTI images

ಚೀನಾದ ಸರಕುಗಳಿಗೆ ಅಮೆರಿಕ ಹೆಚ್ಚು ಆಮದು ಸುಂಕ ವಿಧಿಸಬಹುದು. ಇದರಿಂದ ಚೀನಾದಲ್ಲಿರುವ ಅಮೆರಿಕನ್ ಕಂಪನಿಗಳು ಭಾರತದಂತಹ ದೇಶಗಳಿಗೆ ವಲಸೆ ಬರುವ ವೇಗ ಹೆಚ್ಚಬಹುದು.

Pic: AP, PTI images

ಭಾರತದ ಫಾರ್ಮಾ ಮತ್ತು ಐಟಿ ಕ್ಷೇತ್ರದ ಕಂಪನಿಗಳ ಬಿಸಿನೆಸ್ ಅಮೆರಿಕದ ಮೇಲೆ ಹೆಚ್ಚಾಗಿ ಅವಲಂಬಿತವಾಗಿವೆ. ಅಮೆರಿಕ ಆಮದು ಸುಂಕ ಹೆಚ್ಚಿಸುವುದರಿಂದ ಈ ಸೆಕ್ಟರ್​ನ ಕಂಪನಿಗಳಿಗೆ ಹಿನ್ನಡೆಯಾಗಬಹುದು.

Pic: AP, PTI images

ಹೆಚ್ಚು ಭಾರತೀಯ ಉದ್ಯೋಗಿಗಳನ್ನು ಹೊಂದಿರುವ ಅಮೆರಿಕದ ಕಂಪನಿಗಳ ಮೇಲೆ ಸುಂಕ ವಿಧಿಸಬಹುದು. ಇದರಿಂದ ಭಾರತೀಯರಿಗೆ ಐಟಿ ಉದ್ಯೋಗಾವಕಾಶ ಕಡಿಮೆ ಆಗಬಹುದು.

Pic: AP, PTI images

ಟ್ರಂಪ್ ಅವರ ವ್ಯಾಪಾರ ನೀತಿಯಿಂದ ಅಂತಿಮವಾಗಿ ಭಾರತಕ್ಕೆ ಅನುಕೂಲವಾಗುವ ನಿರೀಕ್ಷೆ ಇದೆ. ಅಮೆರಿಕಕ್ಕೆ ಹರಿದುಹೋಗುವ ಚೀನೀ ವಸ್ತುಗಳ ಬದಲು ಭಾರತೀಯ ಸರಕುಗಳು ಕಾಣುವ ದಿನ ದೂರ ಇಲ್ಲ.

Pic: AP, PTI images

ಟ್ರಂಪ್ ನೇತೃತ್ವದಲ್ಲಿ ಕ್ವಾಡ್ ಗುಂಪು ಬಲಗೊಳ್ಳಬಹುದು. ಇದರಿಂದ ರಕ್ಷಣಾ ಕ್ಷೇತ್ರದಲ್ಲಿ ಉತ್ತಮ ತಂತ್ರಜ್ಞಾನ ಮತ್ತು ಹಾರ್ಡ್​ವೇರ್ ಸರಬರಾಜು ಭಾರತಕ್ಕೆ ಬರಬಹುದು.

Pic: AP, PTI images