ಮುಕೇಶ್ ಅಂಬಾನಿ ಹಲವು ಪ್ರಮುಖ ಉದ್ಯಮಗಳನ್ನು ನಡೆಸುತ್ತಾರೆ. ಟೆಲಿಕಾಂ, ರೀಟೇಲ್, ಪೆಟ್ರೋಲಿಯಂ, ಫ್ಯಾಷನ್ ಹೀಗೆ ಹಲವು ಕ್ಷೇತ್ರಗಳಲ್ಲಿ ಇವರ ಉದ್ಯಮ ಸಾಮ್ರಾಜ್ಯವಿದೆ.
Pic: Getty, PTI images
ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ. ಫೋರ್ಬ್ಸ್ ಬಿಲಿಯನೇರ್ ಪಟ್ಟಿಯಲ್ಲಿ 15ನೇ ಸ್ಥಾನದಲ್ಲಿದ್ದಾರೆ. ಬ್ಲೂಮ್ಬರ್ಗ್ ಇಂಡೆಕ್ಸ್ನಲ್ಲಿ ವಿಶ್ವದ 17ನೇ ಶ್ರೀಮಂತ ವ್ಯಕ್ತಿ ಅವರು.
Pic: Getty, PTI images
ಫೋರ್ಬ್ಸ್ ಪಟ್ಟಿ ಪ್ರಕಾರ ಮುಕೇಶ್ ಅಂಬಾನಿ ಆಸ್ತಿ ಮೌಲ್ಯ ಇವತ್ತಿಗೆ 102.5 ಬಿಲಿಯನ್ ಡಾಲರ್ ಇದೆ. 8.58 ಲಕ್ಷ ಕೋಟಿ ಡಾಲರ್ ಮೌಲ್ಯದ ಸಂಪತ್ತು ಅವರಲ್ಲಿದೆ.
Pic: Getty, PTI images
ಬ್ಲೂಮ್ಬರ್ಗ್ ಇಂಡೆಕ್ಸ್ ಪ್ರಕಾರ ಅವರ ನಿವ್ವಳ ಆಸ್ತಿಮೌಲ್ಯ 98.8 ಬಿಲಿಯನ್ ಡಾಲರ್. ಅಂದರೆ, ಸುಮಾರು 8.31 ಲಕ್ಷ ಕೋಟಿ ರೂ ಆಸ್ತಿ ಇರುವ ಕುಬೇರ ಅವರು.
Pic: Getty, PTI images
ಮುಕೇಶ್ ಅಂಬಾನಿ ಸಂಬಳ ಪಡೆಯುವುದಿಲ್ಲವಾದರೂ ಅವರಿಗೆ ಷೇರು ಡಿವಿಡೆಂಡ್ ಇತ್ಯಾದಿ ಮೂಲಕ ಸಾಕಷ್ಟು ಹಣ ಸಿಗುತ್ತದೆ. ಅವರು ವರ್ಷಕ್ಕೆ 2.8 ಬಿಲಿಯನ್ ಡಾಲರ್ ಹಣ ಸಂಪಾದಿಸುತ್ತಾರೆ.
Pic: Getty, PTI images
ಒಂದು ವರ್ಷದಲ್ಲಿ ಅವರಿಗೆ 235,39,44,07,640 (ಸುಮಾರು 23 ಸಾವಿರ ಕೋಟಿ) ಕೋಟಿ ರೂ ಆದಾಯ ಇದೆ. ಅಂದರೆ, ಚಿಟಿಕೆ ಹೊಡೆಯೋದ್ರಲ್ಲಿ (ಪ್ರತೀ ಸೆಕೆಂಡ್) ಅವರು 51,250 ರೂ ಗಳಿಸುತ್ತಾರೆ.
Pic: Getty, PTI images
ರಿಲಾಯನ್ಸ್ ರೀಟೇಲ್, ರಿಲಾಯನ್ಸ್ ಫೌಂಡೇಶನ್, ಜಿಯೋ ಇತ್ಯಾದಿ ಹಲವು ಸಂಸ್ಥೆಗಳು ರಿಲಾಯನ್ಸ್ ಗ್ರೂಪ್ನಲ್ಲಿವೆ. ಸ್ವತಂತ್ರ ಭಾರತದಲ್ಲಿ ಬಂದ ಅತ್ಯಂತ ಯಶಸ್ವಿ ಉದ್ಯಮಿಗಳಲ್ಲಿ ಅವರಿದ್ದಾರೆ.