04 Nov 2024
Pic credit: Google
Vijayasarathy SN
ಆಯುಷ್ಮಾನ್ ಭಾರತ್ ಪಿಎಂ ಜನ್ ಆರೋಗ್ಯ ಯೋಜನೆ (AB PMJAY) ಸರ್ಕಾರದಿಂದ ನಡೆಸಲಾಗುವ ಉಚಿತ ಹೆಲ್ತ್ ಇನ್ಷೂರೆನ್ಸ್ ಸ್ಕೀಮ್. ಈಗ 70 ವರ್ಷ ಮೇಲ್ಪಟ್ಟವರೆಲ್ಲರೂ ಈ ಯೋಜನೆಗೆ ಅರ್ಹರು.
Pic credit: Google
ಒಂದು ಕುಟುಂಬಕ್ಕೆ 5 ಲಕ್ಷ ರೂ ಆರೋಗ್ಯ ವಿಮೆಯನ್ನು ಸರ್ಕಾರ ಉಚಿತವಾಗಿ ನೀಡುತ್ತದೆ. 6 ಕೋಟಿ ಹಿರಿಯ ನಾಗರಿಕರಿಗೆ ಹೆಲ್ತ್ ಇನ್ಷೂರೆನ್ಸ್ ಸೌಲಭ್ಯ ಹೊಂದಲು ಅವಕಾಶ ಕೊಡುತ್ತದೆ.
Pic credit: Google
ನ್ಯಾಷನಲ್ ಹೆಲ್ತ್ ಅಥಾರಿಟಿಯ ಪೋರ್ಟಲ್ ಅಥವಾ ಆಯುಷ್ಮಾನ್ ಆ್ಯಪ್ನಲ್ಲಿ ಯೋಜನೆಗೆ ನೊಂದಾಯಿಸಿಕೊಳ್ಳಬಹುದು. ಪೋರ್ಟಲ್ ವಿಳಾಸ: https://beneficiary.nha.gov.in/search
Pic credit: Google
ಎನ್ಎಚ್ಎನ ಬೆನಿಫಿಶಿಯರಿ ಪೋರ್ಟಲ್ಗೆ ಹೋಗಿ ಮುಖ್ಯಪುಟದಲ್ಲಿ ಹಿರಿಯ ನಾಗರಿಕರಿಗೆ ಇರುವ ಸೆಕ್ಷನ್ನಲ್ಲಿ Click here to Enroll ಅನ್ನು ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ಆಧಾರ್ ನಂಬರ್ ಹಾಕಿರಿ.
Pic credit: Google
ಆಧಾರ್ ಒಟಿಪಿ ಮೂಲಕ ಕೆವೈಸಿ ವೆರಿಫೈ ಮಾಡಿ. ಇತ್ತೀಚಿನ ಫೋಟೋ ಅಪ್ಲೋಡ್ ಮಾಡಿ. ನಂತರ 15 ನಿಮಿಷದೊಳಗೆ ಆಯುಷ್ಮಾನ್ ವಯ ವಂದನ ಕಾರ್ಡ್ ಡೌನ್ಲೋಡ್ ಮಾಡಬಹುದು.
Pic credit: Google
ಪ್ಲೇಸ್ಟೋರ್ನಿಂದ ಆಯುಷ್ಮಾನ್ ಆ್ಯಪ್ ಅನ್ನು ನಿಮ್ಮ ಮೊಬೈಲ್ಗೆ ಡೌನ್ಲೋಡ್ ಮಾಡಿ. ಮೊಬೈಲ್ ನಂಬರ್ ಮೂಲಕ ಸಾಗಿನ್ ಆಗಿ. ಆಧಾರ್ ಮಾಹಿತಿ ಒದಗಿಸಿ ಫೋಟೋ ಅಪ್ಲೋಡ್ ಮಾಡಿ.
Pic credit: Google
ತಮ್ಮ ಹೆಸರು, ಕುಟುಂಬದ ಇತರ ಸದಸ್ಯರ ಹೆಸರನ್ನು ಹಾಕಿ, ಕೆವೈಸಿ ಪೂರ್ಣಗೊಳಿಸಿ. ನೊಂದಣಿ ಆದ ಬಳಿಕ ಆಯುಷ್ಮಾನ್ ವಯ ವಂದನ ಕಾರ್ಡ್ ಅನ್ನು ಡೌನ್ಲೋಡ್ ಮಾಡಬಹುದು
Pic credit: Google