ದುಷ್ಟರ ಟ್ರಿಕ್ಸ್..! ಯಾಮಾರದಿರಿ ಹುಷಾರ್..!

23 Oct 2024

Pic: Getty images

Vijayasarathy SN

ವಂಚಕ ಬಲೆ

ಎಲ್ಲರ ಕೈಗೆ ಮೊಬೈಲ್, ಡಾಟಾ ಬಂದ ಮೇಲೆ ಆನ್ಲೈನ್ ಜಗತ್ತು ಬಹಳ ವ್ಯಾಪಿಸಿದೆ. ಅಂತೆಯೇ ದುಷ್ಟರು, ವಂಚಕರಿಗೆ ಹೊಸ ಹೊಸ ವಂಚನೆಯ ಮಾರ್ಗಗಳು ಹುಟ್ಟಿವೆ. ನೀವು ಜಾಗ್ರತೆ..!

Pic: Getty images

ಪಾರ್ಸಲ್ ಬಂದಿದೆ...

ಹೊರದೇಶದಿಂದ ನಿಮ್ಮ ಹೆಸರಿಗೆ ಪಾರ್ಸಲ್ ಬಂದಿದೆ. ಅದನ್ನು ಕಸ್ಟಮ್ಸ್​ನಲ್ಲಿ ತಡೆಯಲಾಗಿದೆ. ರಿಲೀಸ್ ಮಾಡಲು ಹಣ ಕೊಡಿ ಎಂದು ವಂಚಕರು ಫೋನ್ ಮಾಡಬಹುದು. ಆ ಮಾತನ್ನು ನಂಬಬೇಡಿ.

Pic: Getty images

ಅರೆಸ್ಟ್ ಆಗ್ತಾರೆ...

ನಿಮ್ಮ ಮನೆಯ ಸದಸ್ಯರೊಬ್ಬರು ಯಾವುದೋ ಕಾರಣಕ್ಕೆ ಅರೆಸ್ಟ್ ಆಗಲಿದ್ದಾರೆ. ಹಣ ಕೊಟ್ಟರೆ ಬಂಧಿಸುವುದಿಲ್ಲ ಎಂದು ಪೊಲೀಸ್ ಅಥವಾ ಯಾವುದಾದರೂ ಅಧಿಕಾರಿಯ ಹೆಸರಿನಲ್ಲಿ ಫೋನ್ ಮಾಡಬಹುದು.

Pic: Getty images

ಶ್ರೀಮಂತರಾಗಿ...

ಷೇರು ಮಾರುಕಟ್ಟೆಯಲ್ಲೋ, ಕ್ರಿಪ್ಟೋದಲ್ಲೋ ತಾವು ಹೇಳಿದಂತೆ ಹೂಡಿಕೆ ಮಾಡಿ ಕಡಿಮೆ ಸಮಯದಲ್ಲ ಶ್ರೀಮಂತರಾಗಿ ಎಂದು ಹಲವರು ಪ್ರಲೋಬನೆ ಒಡ್ಡುವುದುಂಟು. ಅವನ್ನು ನಂಬಬೇಡಿ.

Pic: Getty images

ಸಿಂಪಲ್ ಕೆಲಸ

ಮೊದಲಿಗೆ ಯೂಟ್ಯೂಬ್ ವಿಡಿಯೋ, ಇನ್ಸ್​​ಟಾ ಪೋಸ್ಟ್ ಲೈಕ್ ಮಾಡುವುದು ಹೀಗೆ ಸಿಂಪಲ್ ಕೆಲಸ ಮಾಡಿಸಿ ಹಣ ಕೊಡುತ್ತಾರೆ. ಬಳಿಕ ಹೂಡಿಕೆ ಮಾಡುವಂತೆ ನಂಬಿಸಿ ಯಾಮಾರಿಸುತ್ತಾರೆ ಹುಷಾರ್..!

Pic: Getty images

ಕೆವೈಸಿ ಅಪ್​ಡೇಟ್

ನಿಮ್ಮ ಬ್ಯಾಂಕ್ ಅಥವಾ ಇನ್ಯಾವುದರದ್ದಾದರೂ ಕೆವೈಸಿ ಎಕ್ಸ್​ಪೈರಿ ಆಗಿದೆ. ಅದನ್ನು ಅಪ್​ಡೇಟ್ ಮಾಡಿ ಎಂದು ಮೆಸೇಜ್ ಮೂಲಕ ಲಿಂಕ್ ಕಳುಹಿಸಬಹುದು. ಕ್ಲಿಕ್ ಮಾಡಿದರೆ ಫೋನ್ ಹ್ಯಾಕ್ ಆಗಬಹುದು ಹುಷಾರ್.

Pic: Getty images

ರಿಪೋರ್ಟ್ ಮಾಡಿ

ನಿಮ್ಮನ್ನು ವಂಚಿಸಲು ಯಾರಾದರೂ ಯತ್ನಿಸುತ್ತಿದ್ದಾರೆ ಎನಿಸಿದರೆ ಕನ್ಸೂಮರ್ ಹೆಲ್ಪ್​ಲೈನ್ (1800 - 11- 4000), cybercrime.gov.in, ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ.

Pic: Getty images