ಕ್ರೆಡಿಟ್ ಕಾರ್ಡ್ ಕಳೆದರೆ ಏನು ಮಾಡಬೇಕು? ಇಲ್ಲಿದೆ ಟಿಪ್ಸ್
21 Oct 2024
Pic: Getty images
Vijayasarathy SN
ಕ್ರೆಡಿಟ್ ಕಾರ್ಡ್ ಕಳೆದುಹೋಗಿ ಅದು ವಂಚಕರ ಕೈಗೆ ಸಿಕ್ಕರೆ ದುರುಪಯೋಗವಾಗುವ ಸಾಧ್ಯತೆ ಇರುತ್ತದೆ. ಕಾರ್ಡ್ ಕಳುವಾದ ತತ್ಕ್ಷಣ ಏನೇನು ಮಾಡಬೇಕು ಎನ್ನುವ ವಿವರ ಮುಂದಿನ ಸ್ಲೈಡ್ಗಳಲ್ಲಿ ಇದೆ.
ಈ ಕೆಲಸ ಮಾಡಿ...
Pic: Getty images
ಕಾರ್ಡ್ ಕಳುವಾದ ಕೂಡಲೇ ಮೊದಲು ಮಾಡಬೇಕಾದ್ದು ಆ ಬ್ಯಾಂಕ್ಗೆ ಮಾಹಿತಿ ನೀಡುವುದು. ಆನ್ಲೈನ್ ಬ್ಯಾಂಕಿಂಗ್ನಲ್ಲೇ ಮಾಡಬಹುದು. ಅಥವಾ ಬ್ಯಾಂಕ್ನ ಕಸ್ಟಮರ್ ಸರ್ವಿಸ್ ನಂಬರ್ಗೆ ಕರೆ ಮಾಡಿ ತಿಳಿಸಬಹುದು.
ಬ್ಯಾಂಕ್ಗೆ ಮಾಹಿತಿ
Pic: Getty images
ಎರಡನೇ ಸ್ಟೆಪ್ನಲ್ಲಿ ನೀವು ಆ ಕ್ರೆಡಿಟ್ ಕಾರ್ಡ್ಗೆ ಲಿಂಕ್ ಆಗಿರುವ ಆನ್ಲೈನ್ ಶಾಪಿಂಗ್, ಸಬ್ಸ್ಕ್ರಿಪ್ಷನ್ ಇತ್ಯಾದಿ ಎಲ್ಲಾ ಖಾತೆಗಳ ಪಾಸ್ವರ್ಡ್ಗಳನ್ನು ಬದಲಿಸುವುದು ಉತ್ತಮ.
ಪಾಸ್ವರ್ಡ್ ಬದಲಿಸಿ
Pic: Getty images
ನಿಮ್ಮ ಸಮೀಪದ ಪೊಲೀಸ್ ಸ್ಟೇಷನ್ಗೆ ಹೋಗಿ, ಕಾರ್ಡ್ ಕಳುವಾಗಿದೆ ಎಂದು ಎಫ್ಐಆರ್ ಸಲ್ಲಿಸಿರಿ. ಬದಲೀ ಕಾರ್ಡ್ ಪಡೆಯಲು ಇದರಿಂದ ಸುಲಭವಾಗುತ್ತದೆ. ಜೊತೆಗೆ ಕಾನೂನಿನ ಬಲ ನಿಮಗೆ ಸಿಗುತ್ತದೆ.
ಪೊಲೀಸ್ ದೂರು
Pic: Getty images
ನೀವು ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಪರಿಶೀಲಿಸಿ. ನಿಮ್ಮಿಂದಲ್ಲದ ಟ್ರಾನ್ಸಾಕ್ಷನ್ ಯಾವುದಾದರೂ ನಡೆದಿದ್ದು ಗೊತ್ತಾದ ಕೂಡಲೇ ಬ್ಯಾಂಕ್ ಗಮನಕ್ಕೆ ತನ್ನಿ. ಇದರಿಂದ ಬ್ಯಾಂಕ್ನವರು ತ್ವರಿತ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
ಸ್ಟೇಟ್ಮೆಂಟ್ ಪರಿಶೀಲಿಸಿ
Pic: Getty images
ಕ್ರೆಡಿಟ್ ಕಾರ್ಡ್ ಕಳುವಾಗಿದೆ ಎಂದು ಬ್ಯಾಂಕ್ಗೆ ದೂರು ನೀಡಿದ ಬಳಿಕ ಕ್ರೆಡಿಟ್ ಬ್ಯೂರೋವನ್ನು ಅಲರ್ಟ್ ಮಾಡಿ. ವಂಚಕರು ನಿಮ್ಮ ಹೆಸರಿನಲ್ಲಿ ಅಕೌಂಟ್ ತೆರೆಯುವುದನ್ನು ತಪ್ಪಿಸಬಹುದು. ಕ್ರೆಡಿಟ್ ಸ್ಕೋರ್ ಕಡಿಮೆ ಆಗದಂತೆ ನೋಡಿಕೊಳ್ಳಬಹುದು.
ಕ್ರೆಡಿಟ್ ಬ್ಯೂರೋ
Pic: Getty images
ನಿಮ್ಮ ಖಾತೆಗಳನ್ನು ಭದ್ರಪಡಿಸಿಕೊಂಡ ಬಳಿಕ ನೀವು ಹೊಸ ಕ್ರೆಡಿಟ್ ಕಾರ್ಡ್ಗೆ ಅಪ್ಲೈ ಮಾಡಬಹುದು. ನಿಮ್ಮ ಹಳೆಯ ಕಾರ್ಡ್ ಅನ್ನು ಬ್ಲಾಕ್ ಮಾಡಲಾಗುತ್ತದೆ. ಅದರ ಬದಲು ಹೊಸ ಕಾರ್ಡ್ ಅನ್ನು ನಿಮಗೆ ಕಳುಹಿಸಲಾಗುತ್ತದೆ.