ಆಧಾರ್ಗೆ ಮೊಬೈಲ್ ನಂಬರ್ ಲಿಂಕ್ ಮಾಡಿದರೆ ಹಲವು ರೀತಿಯಲ್ಲಿ ಅನುಕೂಲಗಳಿರುತ್ತವೆ. ಅಂತೆಯೇ, ಹೆಚ್ಚಿನ ಜನರು ತಮ್ಮ ಆಧಾರ್ ಕಾರ್ಡ್ಗೆ ಮೊಬೈಲ್ ನಂಬರ್ ಲಿಂಕ್ ಮಾಡಿರುತ್ತಾರೆ.
Pic: Getty images
ಒಂದು ವೇಳೆ ಆಧಾರ್ಗೆ ಜೋಡಿತವಾದ ಮೊಬೈಲ್ ನಂಬರ್ ಕಳೆದುಹೋದಲ್ಲಿ, ಅಥವಾ ಆ ನಂಬರ್ನ ಬಳಕೆ ನಿಲ್ಲಿಸಿದಲ್ಲಿ ಏನು ಮಾಡುವುದು? ನಂಬರ್ ಅಪ್ಡೇಟ್ ಹೇಗೆ ಮಾಡಿಸುವುದು?
Pic: Getty images
ಮೊಬೈಲ್ ನಂಬರ್ ಅನ್ನು ಸೇರಿಸಲು ಅಥವಾ ಬದಲಾಯಿಸಲು ಆಧಾರ್ ಸೆಂಟರ್ಗೆ ಹೋಗಬೇಕಾಗುತ್ತದೆ. ಅಲ್ಲಿ ನಿಮ್ಮ ಬೆರಳಚ್ಚು ಅಥವಾ ಐರಿಸ್ ಸ್ಕ್ಯಾನ್ ಮೂಲಕ ಆಧಾರ್ ಮಾಹಿತಿಯನ್ನು ಅಪ್ಡೇಟ್ ಮಾಡಲಾಗುತ್ತದೆ.
Pic: Getty images
ನೀವು ಮೊಬೈಲ್ ನಂಬರ್ ಬದಲಾಯಿಸಿದರೆ ಆಧಾರ್ ನಂಬರ್ ಬದಲಾಗುವುದಿಲ್ಲ. ನಿಮ್ಮ ಆಧಾರ್ ನಂಬರ್ ಖಾಯಂ ಆಗಿ ಉಳಿಯುತ್ತದೆ.
Pic: Getty images
ಆಧಾರ್ ಕಾರ್ಡ್ ಅನ್ನು ಆನ್ಲೈನ್ನಲ್ಲಿ ಬಳಸಬಹುದು. ಮೈ ಆಧಾರ್ನ ಪೋರ್ಟಲ್ ಮತ್ತು ಆ್ಯಪ್ ಎರಡೂ ಕೂಡ ಆನ್ಲೈನ್ನಲ್ಲಿ ಲಭ್ಯ ಇದೆ. ಇಲ್ಲಿ ಆಧಾರ್ನ ವಿಳಾಸ ಮತ್ತು ಡಾಕ್ಯುಮೆಂಟ್ ಅಪ್ಡೇಟ್ ಮಾಡಬಹುದು.
Pic: Getty images
ಆಧಾರ್ನಲ್ಲಿರುವ ಮಾಹಿತಿಯನ್ನು ಪದೇ ಪದೇ ಬದಲಾಯಿಸಲು ಆಗುವುದಿಲ್ಲ. ಹೆಸರನ್ನು ಎರಡು ಬಾರಿ, ಲಿಂಗವನ್ನು ಒಮ್ಮೆ, ಜನ್ಮದಿನಾಂಕವನ್ನೂ ಒಮ್ಮೆ ಮಾತ್ರ ಬದಲಿಸಲು ಸಾಧ್ಯ. ಹೀಗಾಗಿ, ಯೋಚಿಸಿ ಆಧಾರ್ ಅಪ್ಡೇಟ್ ಮಾಡಿ.
Pic: Getty images
ಅಕಸ್ಮಾತ್ ನೀವು ಅಪ್ಡೇಟ್ ರಿಕ್ವೆಸ್ಟ್ ಅನ್ನು ರದ್ದುಗೊಳಿಸಬೇಕೆಂದರೆ ಆನ್ಲೈನ್ನಲ್ಲಿ ಅದು ಸಾಧ್ಯ. ಮೈ ಆಧಾರ್ ಆ್ಯಪ್ ಅಥವಾ ಪೋರ್ಟಲ್ನಲ್ಲಿ ‘ರಿಕ್ವೆಸ್ಟ್’ ಅಡಿ ಅದನ್ನು ರದ್ದುಗೊಳಿಸಬಹುದು.