ನೀವು ಒಂದು ಬಿಸಿನೆಸ್ ಶುರು ಮಾಡಿದ್ರೆ ಕೊನೆಯವರೆಗೂ ಅದಕ್ಕೆ ಜೋತುಕೊಂಡಿರಬೇಕಿಲ್ಲ. ನಿಮಗೆ ಆಸಕ್ತಿ ಮೂಡಿಸುವ ಬೇರೆ ಬಿಸಿನೆಸ್ ಐಡಿಯಾ ಸಿಕ್ರೆ ಇದನ್ನು ಮಾರಿ ಅದನ್ನು ಶುರು ಮಾಡಿ.
ಗೂಟ ಹೊಡೆದುಕೊಳ್ಳಬೇಕಿಲ್ಲ
Pic: Getty images
ಸ್ವಂತ ಬಿಸಿನೆಸ್ ಎಂದು 24 ಗಂಟೆಯೂ ಕೆಲಸ ಮಾಡುವ ಅವಶ್ಯಕತೆ ಇಲ್ಲ. ಇದರಿಂದ ಆರೋಗ್ಯ ಸಮಸ್ಯೆ ಆಗುತ್ತದೆ. ಬರ್ನೌಟ್ ಆಗುತ್ತೀರಿ. ಬಿಸಿನೆಸ್ಗೆ ಅಗತ್ಯ ಇದ್ದಷ್ಟು ಕೆಲಸ ಮಾಡಿ. ಕೆಲಸ ಮಾಡಬೇಕೆಂದು ಕೆಲಸ ಬೇಡ.
ಕತ್ತೆ ಥರ ಕೆಲಸ ಬೇಡ
Pic: Getty images
ಬಿಸಿನೆಸ್ನಲ್ಲಿ ನಿಮ್ಮೊಂದಿಗೆ ಉದ್ಯೋಗಿಗಳಿದ್ದರೆ ಜಾಬ್ ಡೆಲಿಗೇಶನ್ ಸಮರ್ಪಕವಾಗಿ ಮಾಡಿ. ಇದರಿಂದ ನೀವು ಬಿಸಿನೆಸ್ ಡೆವಲಪ್ಮೆಂಟ್ಗೆ ಹೊಸ ಐಡಿಯಾ ಹುಡುಕುವಷ್ಟು ಸಮಯಾವಕಾಶ ಪಡೆಯಬಹುದು.
ಕೆಲಸ ನಿಯೋಜನೆ
Pic: Getty images
ಕ್ಲೈಂಟ್ಗಳೇ ಒಂದು ಬಿಸಿನೆಸ್ನ ಜೀವಾಳ ಎಂಬುದು ನಿಜ. ಹಾಗಂತ ಸಾಕಷ್ಟು ಕಿರಿಕಿರಿ ಉಂಟು ಮಾಡುವ ಗಿರಾಕಿಗಳನ್ನು ದೂರ ಇಡುವುದು ಲೇಸು. ಸ್ವಲ್ಪ ಆದಾಯ ಕುಂಠಿತವಾದರೂ ಮಾನಸಿಕವಾಗಿ ನಿರಾಳರಾಗಿರಬಹುದು.
ಕ್ಲೈಂಟ್ಗಳೇ ದೇವರಲ್ಲ
Pic: Getty images
ಹೊಸ ತಲೆಮಾರಿನ ಉದ್ಯಮಿಗಳು ಹೊಸ ಐಡಿಯಾಗಳೊಂದಿಗೆ ರಂಗಕ್ಕೆ ಧುಮುಕಿ ಯಶಸ್ವಿಯಾಗುವುದನ್ನು ನೋಡುತ್ತಿರುತ್ತೇವೆ. ನೀವು ಎಷ್ಟೇ ಅನುಭವಿಯಾಗಿದ್ದರೂ ಕಲಿಯುವುದು ಇದ್ದೇ ಇರುತ್ತದೆ. ಹೊಸ ಐಡಿಯಾಗಳಿಗೆ ಮನಸು ತೆರೆದಿಟ್ಟುಕೊಂಡಿರಿ.
ಕಲಿಕೆ ನಿರಂತರ
Pic: Getty images
ನಿಮ್ಮ ಬಿಸಿನೆಸ್ನಲ್ಲಿ ನಿಮಗೆಲ್ಲಾ ತಿಳಿದಿದೆ ಎನ್ನುವ ಕಾನ್ಫಿಡೆನ್ಸ್ ಇರಬಹುದು. ಆದರೂ ಕೂಡ ಬೇರೆ ವ್ಯಕ್ತಿಗಳ ಸಲಹೆಗಳನ್ನು ಕೇಳಿ ಪಡೆಯಿರಿ. ಬಿಸಿನೆಸ್ ಪಾರ್ಟ್ನರ್, ಉದ್ಯೋಗಿ, ಸ್ನೇಹಿತ, ಸಂಗಾತಿ ಯಾರೇ ಆಗಿರಬಹುದು. ಕೆಲವೊಮ್ಮೆ ನಿಮಗೆ ಹೊಸ ಐಡಿಯಾ ಸಿಗಬಹುದು.
ಇತರರಿಗೆ ಕಿವಿಗೊಡಿ
Pic: Getty images
ನಿಮ್ಮ ಬಿಸಿನೆಸ್ನ ಒಳಗಿನ ಸೂಕ್ಷ್ಮತೆಗಳು ಹೊರಗಿನವರಿಗೆ ಗೊತ್ತಿರುವುದಿಲ್ಲ. ಆದರೂ ಕೂಡ ಅವರ ಮಾತುಗಳನ್ನು ಕೇಳುವುದರಲ್ಲಿ ನಷ್ಟವೇನಿಲ್ಲ. ಅವರ ಸಲಹೆ ಅಳವಡಿಸಿಕೊಳ್ಳಬೇಕು ಎನ್ನುವ ಅನಿವಾರ್ಯತೆಗೆ ಮಾತ್ರ ಬೀಳಬೇಡಿ.