14 Oct 2024

Pic credit: Google

ಹೆಣ್ಮಕ್ಕಳಿಗೆ ಸರ್ಕಾರೀ ಯೋಜನೆಗಳು

Vijayasarathy SN

ಅಡುಗೆ ಮನೆಗೆ ಸೀಮಿತವಾಗಿದ್ದ ಹೆಣ್ಮಕ್ಕಳನ್ನು ಆರ್ಥಿಕತೆಯ ಮುಖ್ಯವಾಹಿನಿಗೆ ತರಲು ಸರ್ಕಾರ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಕೆಲ ಯೋಜನೆಗಳನ್ನು ಜಾರಿಗೊಳಿಸಿದೆ. ಅದರ ವಿವರ ಮುಂದಿನ ಸ್ಲೈಡ್​ಗಳಲ್ಲಿ...

Pic credit: Google

ಹೆಣ್ಮಕ್ಕಳಿಗೆ ಉತ್ತೇಜನ

10 ವರ್ಷದೊಳಗಿನ ವಯಸ್ಸಿನ ಹೆಣ್ಮಕ್ಕಳ ಹೆಸರಿನಲ್ಲಿ ಸುಕನ್ಯಾ ಸಮೃದ್ದಿ ಯೋಜನೆ ಆರಂಭಿಸಬಹುದು. ವರ್ಷಕ್ಕೆ 250 ರೂನಿಂದ 1,50,000 ರೂವರೆಗೆ 15 ವರ್ಷ ಹೂಡಿಕೆ ಸಾಧ್ಯ. ಶೇ. 8.2 ಬಡ್ಡಿ ಸಿಗುತ್ತದೆ.

Pic credit: Google

ಸುಕನ್ಯಾ ಸಮೃದ್ಧಿ

ಕೆಲ ಸಮಾಜಗಳಲ್ಲಿ ಹೆಣ್ಮಕ್ಕಳ ಬಗ್ಗೆ ಇರುವ ತಾತ್ಸಾರ ಮನೋಭಾವವನ್ನು ಹೋಗಲಾಡಿಸಿ ಸಮಾನತೆಯ ಭಾವ ತರುವ ಸಲುವಾಗಿ ಸರ್ಕಾರ ಬೇಟಿ ಬಚಾವೊ, ಬೇಟಿ ಪಢಾವೋ ಅಭಿಯಾನ 2015ರಲ್ಲಿ ಆರಂಭಿಸಿತು.

Pic credit: Google

ಬೇಟಿ ಪಢಾವೊ

ಹದಿಹರೆಯ ವಯಸ್ಸಾದ 14ರಿಂದ 18 ವರ್ಷ ವಯೋಮಾನದ ಹೆಣ್ಮಕ್ಕಳಿಗೆ ಪೌಷ್ಟಿಕಾಂಶ ಮತ್ತು ಆರೋಗ್ಯಪಾಲನೆಯ ನೆರವು ಒದಗಿಸುತ್ತದೆ ಈ ಸ್ಕೀಮ್.

Pic credit: Google

ಹದಿಹರೆಯದವರು

ಅಂಗನವಾಡಿ ಮತ್ತು ಶಾಲೆಗಳ ಮೂಲಕ ಹದಿಹರೆಯದ ಹುಡುಗಿಯರಲ್ಲಿ ಮುಟ್ಟಿನ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಜನೌಷಧಿ ಕೇಂದ್ರಗಳಲ್ಲಿ ಒಂದು ರುಪಾಯಿಗೆ ಸ್ಯಾನಿಟರಿ ಪ್ಯಾಡ್ ಮಾರಲಾಗುತ್ತಿದೆ.

Pic credit: Google

ಋತುಸ್ರಾವ ಸಂದರ್ಭ...

ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಹೆಣ್ಮಕ್ಕಳ ದಾಖಲಾತಿ ಹೆಚ್ಚಿಸಲು ಈ ಸ್ಕೀಮ್ ತರಲಾಗಿದೆ. ಈ ಯೋಜನೆ ಅಡಿ, 11 ಮತ್ತು 12ನೇ ತರಗತಿ ವಿದ್ಯಾರ್ಥಿನಿಯರಿಗೆ ವಿವಿಧ ಉತ್ತೇಜನಗಳನ್ನು ನೀಡಲಾಗುತ್ತದೆ.

Pic credit: Google

ಉಡಾನ್ ಸ್ಕೀಮ್

ಹೆಣ್ಮಕ್ಕಳು ಓದನ್ನು ಅರ್ಧಕ್ಕೆ ಬಿಟ್ಟು ಹೋಗದಂತೆ ತಡೆಯಲು ಸರ್ಕಾರ ಪ್ರಯತ್ನ ಮಾಡುತ್ತದೆ. ಎಂಟನೇ ತರಗತಿ ಪಾಸ್ ಆಗಿ 9ನೇ ತರಗತಿಗೆ ಹೋಗುವ ಅವಿವಾಹಿತ ಹೆಣ್ಮಕ್ಕಳ ಖಾತೆಗೆ ಹಣ ಹಾಕಿ ಉತ್ತೇಜಿಸಲಾಗುತ್ತದೆ.

Pic credit: Google

ಎನ್​ಎಸ್​ಪಿ