ಹಿಂಡಾಲ್ಕೋ ಇಂಡಸ್ಟ್ರೀಸ್ ಮುಖ್ಯಸ್ಥ ಸತೀಶ್ ಪೈ ಸಂಬಳ ವರ್ಷಕ್ಕೆ 37.1 ಕೋಟಿ ರೂ. ಭಾರತದಲ್ಲಿ ಅಲೂಮಿನಿಯಮ್ ಬಿಸಿನೆಸ್ನಲ್ಲಿ ಹಿಂಡಾಲ್ಕೋ ಮುಂಚೂಣಿಯಲ್ಲಿದೆ.
6. ಶ್ರೀನಿವಾಸ್ ಪಾಲಿಯಾ
Pic credit: Google
ವಿಪ್ರೋದ ಸಿಇಒ ಮತ್ತು ಎಂಡಿ ಶ್ರೀನಿವಾಸ್ ಪಾಲಿಯಾ ಸಂಬಳ 50 ಕೋಟಿ ರೂ. ಮೂರು ದಶಕಗಳಿಂದ ಇವರು ವಿಪ್ರೋ ಸಂಸ್ಥೆಯಲ್ಲಿ ವಿವಿಧ ಸ್ತರಗಳ ಹುದ್ದೆಗಳನ್ನು ನಿಭಾಯಿಸಿದ್ದಾರೆ.
5. ರಾಜೀವ್ ಬಜಾಜ್
Pic credit: Google
ಪ್ರಖ್ಯಾತ ಬಜಾಜ್ ಫ್ಯಾಮಿಲಿಗೆ ಸೇರಿದ ರಾಜೀವ್ ಬಜಾಜ್ ಅವರು ಬಜಾಜ್ ಆಟೊ ಸಂಸ್ಥೆಯ ಮುಖ್ಯಸ್ಥರಾಗಿ 53.8 ಕೋಟಿ ರೂ ಸಂಭಾವನೆ ಪಡೆಯುತ್ತಾರೆ. ಪಲ್ಸರ್ ಬೈಕ್ ಇತ್ಯಾದಿ ಪ್ರಖ್ಯಾತ ಮಾಡಲ್ಗಳನ್ನು ಬಿಡಉಗಡೆ ಮಾಡಿದ್ದಾರೆ.
4. ನಿತಿನ್ ರಾಕೇಶ್
Pic credit: Google
ಎಂಫೇಸಿಸ್ ಸಿಇಒ ಆಗಿರುವ ನಿತಿನ್ ರಾಕೇಶ್ ಸಂಬಳ 59.2 ಕೋಟಿ ರೂ. ಐಟಿ ಸರ್ವಿಸ್ ಉದ್ಯಮದಲ್ಲಿ ಇನ್ಫೋಸಿಸ್, ಟಿಸಿಎಸ್, ಕಾಗ್ನೈಜೆಂಟ್ಗಳ ಪೈಪೋಟಿ ಮಧ್ಯೆ ಎಂಫೇಸಿಸ್ ಬೆಳೆಯಲು ಇವರ ನಾಯಕತ್ವ ಕಾರಣ.
3. ಸಂದೀಪ್ ಕಲ್ರಾ
Pic credit: Google
ಪರ್ಸಿಸ್ಟೆಂಟ್ ಸಿಸ್ಟಮ್ಸ್ ಎನ್ನುವ ಐಟಿ ಕಂಪನಿಯ ಮುಖ್ಯಸ್ಥರಾದ ಸಂದೀಪ್ ಕಲ್ರಾ ಅವರ ಸಂಭಾವನೆ 61.7 ಕೋಟಿ ರೂ ಇದೆ. ಇವರ ನಾಯಕತ್ವದಲ್ಲಿ ಕಂಪನಿ ಸಾಕಷ್ಟು ವಿಸ್ತರಣೆ ಕಂಡಿದೆ.
2. ಸಲೀಲ್ ಪರೇಖ್
Pic credit: Google
ಇನ್ಫೋಸಿಸ್ ಸಿಇಒ ಆಗಿರುವ ಸಲೀಲ್ ಪರೇಖ್ ಅವರಿಗೆ ಸಿಗುತ್ತಿರುವ ಸಂಬಳ, ಬೋನಸ್ ಎಲ್ಲವೂ ಸೇರಿಸಿದರೆ 66.24 ರೂ ಪ್ಯಾಕೇಜ್ ಆಗುತ್ತದೆ. ಭಾರತದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ಸಿಇಒಗಳಲ್ಲಿ ಇವರೂ ಒಬ್ಬರು.
1. ಸಿ ವಿಜಯಕುಮಾರ್
Pic credit: Google
ಐಟಿ ಕಂಪನಿಯಾದ ಎಚ್ಸಿಎಲ್ ಟೆಕ್ನಾಲಜೀಸ್ನ ಸಿಇಒ ಸಿ ವಿಜಯ್ ಕುಮಾರ್ ಸಂಬಳ ಬರೋಬ್ಬರಿ 84.16 ಕೋಟಿ ರೂ. ಅತಿಹೆಚ್ಚು ಸಂಭಾವನೆ ಪಡೆಯುವ ಸಿಇಒ ಪಟ್ಟಿಯಲ್ಲಿ ಇವರು ಮೊದಲಿಗರು.