ಎಟಿಎಂನಲ್ಲಿ ಹಣ ಬರದಿದ್ದರೆ ಹೀಗೆ ಮಾಡಿ...

06 Oct 2024

Pic credit: Google

Vijayasarathy SN

ಹಲವು ಪ್ರಕರಣಗಳು...

ಎಟಿಎಂನಲ್ಲಿ ಕಾರ್ಡ್ ಬಳಸಿ ಕ್ಯಾಷ್ ವಿತ್​ಡ್ರಾ ಮಾಡಲು ಯತ್ನಿಸಿದಾಗ ಕೆಲವೊಮ್ಮೆ ಹಣ ಬರುವುದಿಲ್ಲ. ಆದರೆ, ಅಕೌಂಟ್​ನಿಂದ ಹಣ ಡೆಬಿಟ್ ಆಗಬಹುದು. ಅಂಥ ಘಟನೆಗಳು ಸಾಕಷ್ಟು ಬಾರಿ ವರದಿಯಾಗಿವೆ.

Pic credit: Google

ಕಾರಣಗಳು ಕೆಲವು

ಎಟಿಎಂನಲ್ಲಿ ತಾಂತ್ರಿಕ ದೋಷ ಇದ್ದರೆ, ಕ್ಯಾಷ್ ಸಂಗ್ರಹ ಮುಗಿದಿದ್ದರೆ ಹೀಗೆ ಕೆಲ ಪ್ರಮುಖ ಕಾರಣಗಳಿಗೆ ಕ್ಯಾಷ್ ಬರದೇ ಹೋಗಬಹುದು. ಆದರೆ, ಬ್ಯಾಂಕ್ ಅಕೌಂಟ್​ನಿಂದ ಹಣ ಕಡಿತವಾಗಿದ್ದರೆ ಏನು ಮಾಡಬೇಕು?

Pic credit: Google

ಎಟಿಎಂನಲ್ಲಿ ಹೀಗೆ ಮಾಡಿ

ಎಟಿಎಂನಿಂದ ಬರುವ ಟ್ರಾನ್ಸಾಕ್ಷನ್ ಸ್ಲಿಪ್ ಅನ್ನು ಜಾಗ್ರತೆಯಿಂದ ಎತ್ತಿಟ್ಟುಕೊಳ್ಳಿ. ಎಟಿಎಂ ರೂಮ್​ನಲ್ಲಿರುವ ಕ್ಯಾಮೆರಾ ಮುಂದೆ ಹಣ ಬಂದಿಲ್ಲವೆಂದು ಕೈಸನ್ನೆ ಮೂಲಕ ತಿಳಿಸಲು ಯತ್ನಿಸಿ.

Pic credit: Google

ಹೆಲ್ಪ್​ಲೈನ್ ಸಂಪರ್ಕ

ಎಟಿಎಂ ವಹಿವಾಟು ವೇಳೆ ಅಕೌಂಟ್​ನಿಂದ ಹಣ ಡೆಬಿಟ್ ಆಗಿಬಿಟ್ಟರೆ ಸಾಮಾನ್ಯವಾಗಿ ಬೇಗನೇ ರಿವರ್ಸ್ ಆಗುತ್ತದೆ. ಇಲ್ಲವಾದಲ್ಲಿ ಬ್ಯಾಂಕ್​ನ ಕಸ್ಟಮರ್ ಸರ್ವಿಸ್ ಹೆಲ್ಪ್​ಲೈನ್ ಸಂಪರ್ಕಿಸಿ ಅಗತ್ಯ ಮಾಹಿತಿ ನೀಡಿ.

Pic credit: Google

ಬ್ಯಾಂಕ್ ಸಂಪರ್ಕ

ಇದು ನೆರವಿಗೆ ಬರದಿದ್ದಲ್ಲಿ ನೀವು ಆ ಬ್ಯಾಂಕ್​ನ ಸಮೀಪದ ಶಾಖೆಗೆ ಹೋಗಿ ದೂರು ಕೊಡಬಹುದು. ಅದರಿಂದಲೂ ಪ್ರಯೋಜನವಾಗದಿದ್ದರೆ ಬ್ರ್ಯಾಂಚ್ ಮ್ಯಾನೇಜರ್ ಭೇಟಿ ಮಾಡಿ ಮಾತನಾಡಿ.

Pic credit: Google

ಆರ್​ಬಿಐ ಸಂಪರ್ಕ

ಇದರಿಂದಲೂ ನಿಮ್ಮ ಸಮಸ್ಯೆ ತೀರಲಿಲ್ಲವೆಂದರೆ, ದೂರು ಸಲ್ಲಿಕೆಯಾಗಿ 30 ದಿನಗಳ ನಂತರ ಆರ್​ಬಿಐ ಅಥವಾ ಬ್ಯಾಂಕಿಂಗ್ ಓಂಬುಡ್ಸ್​ಮನ್ ಬಳಿ ನೀವು ಪೋಸ್ಟ್ ಅಥವಾ ಆನ್​ಲೈನ್ ಮುಖಾಂತರ ದೂರು ಸಲ್ಲಿಸಬೇಕು.

Pic credit: Google

ಕಾನೂನು ಸುರಕ್ಷತೆ

ಎಟಿಎಂನಲ್ಲಿ ಹಣ ಬರದೇ ಹೋಗಿದ್ದಕ್ಕೆ ಬ್ಯಾಂಕೇ ಜವಾಬ್ದಾರಿಯಾಗಿರುತ್ತದೆ. ಕಾನೂನು ಪ್ರಕಾರ ಬ್ಯಾಂಕು ದಿನಕ್ಕೆ 100 ರೂನಂತೆ ನಿಮಗೆ ದಂಡ ಕಟ್ಟಿಕೊಡಬೇಕಾಗುತ್ತದೆ. ಅಲ್ಲಿಯವರೆಗೆ ನೀವು ಸತತ ಯತ್ನ ಮತ್ತು ಸಂಯಮ ಕೈಬಿಡಬಾರದು.

Pic credit: Google