ಮ್ಯೂಚುವಲ್ ಫಂಡ್ಗಳ ರೀತಿಯಲ್ಲಿ ಇಟಿಎಫ್ಗಳ ಮೇಲೆ ಹೂಡಿಕೆ ಮಾಡುವ ಟ್ರೆಂಡ್ ಹೆಚ್ಚುತ್ತಿದೆ. ಇಟಿಎಫ್ಗಳು ಜನಪ್ರಿಯತೆ ಪಡೆಯುತ್ತಿವೆ. ಇವೆರಡಕ್ಕೂ ಕೆಲ ವ್ಯತ್ಯಾಸಗಳಿವೆ.
ಇಟಿಎಫ್ ಟ್ರೆಂಡ್
Pic credit: Google
ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆದಾರರ ಹಣವನ್ನು ವಿವಿಧ ಷೇರು, ಬಾಂಡ್, ಚಿನ್ನ ಇತ್ಯಾದಿಗಳ ಮೇಲೆ ಹೂಡಿಕೆ ಮಾಡಲಾಗುತ್ತದೆ. ಅದಕ್ಕೆ ಅನುಗುಣವಾಗಿ ಲಾಭ ತರುತ್ತದೆ.
ಮ್ಯುಚುವಲ್ ಫಂಡ್ ಏನು?
Pic credit: Google
ಇಟಿಎಫ್ ಎಂದರೆ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್. ಮ್ಯೂಚುವಲ್ ಫಂಡ್ನಂತೆ ಇದರಲ್ಲೂ ಕೂಡ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುತ್ತದೆ. ಇದನ್ನು ಬಿಟ್ಟರೆ ಎರಡಕ್ಕೂ ವ್ಯತ್ಯಾಸಗಳಿವೆ.
ಇಟಿಎಫ್ ಏನು?
Pic credit: Google
ಇಟಿಎಫ್ನಲ್ಲಿ ನಿರ್ದಿಷ್ಟ ಇಂಡೆಕ್ಸ್ ಸ್ಟಾಕ್ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಇದಕ್ಕೆ ಪಾಸಿವ್ ಇನ್ವೆಸ್ಟ್ಮೆಂಟ್ ಎನ್ನುತ್ತಾರೆ. ನಿಫ್ಟಿ50 ಇಟಿಎಫ್ನಲ್ಲಿ ಆ ನಿಫ್ಟಿಯ 50 ಷೇರುಗಳಲ್ಲಿ ಹಣ ಹೂಡಿಕೆ ಆಗುತ್ತದೆ.
ಪಾಸಿವ್ ಹೂಡಿಕೆ
Pic credit: Google
ಈಕ್ವಿಟಿಯ ವಿವಿಧ ಇಂಡೆಕ್ಸ್ಗಳಲ್ಲಿ ಮಾತ್ರವಲ್ಲದೇ, ಡೆಟ್ ಸೆಕ್ಯೂರಿಟಿಗಳು, ಚಿನ್ನ, ಬೆಳ್ಳಿ ಇತ್ಯಾದಿ ಕಮಾಡಿಟಿಗಳ ಮೇಲೆ ಪ್ರತ್ಯೇಕವಾದ ಇಟಿಎಫ್ಗಳಿರುತ್ತವೆ.
ಬೇರೆ ಬೇರೆ ಇಟಿಎಫ್
Pic credit: Google
ಮ್ಯೂಚುವಲ್ ಫಂಡ್ನಲ್ಲೂ ಇಟಿಎಫ್ ರೀತಿಯಲ್ಲಿ ಇಂಡೆಕ್ಸ್ ಫಂಡ್ಗಳಿವೆ. ಅದನ್ನು ಬಿಟ್ಟು ಮ್ಯಾನೇಜರ್ಗಳು ನಿರ್ವಹಿಸುವ ಆ್ಯಕ್ಟಿವ್ ಫಂಡ್ಗಳಿರುತ್ತವೆ. ಇವಕ್ಕೆ ಹೂಡಿಕೆದಾರರು ನಿರ್ದಿಷ್ಟ ಶುಲ್ಕ ತೆರಬೇಕು.
ಆ್ಯಕ್ಟಿವ್ ಫಂಡ್ಸ್
Pic credit: Google
ಇಟಿಎಫ್ ಪಾಸಿವ್ ಇನ್ವೆಸ್ಟ್ಮೆಂಟ್ ಆಗಿರುವುದರಿಂದ ಮತ್ತು ಮ್ಯಾನೇಜರ್ ನಿರ್ವಹಣೆಯ ಹೆಚ್ಚಿನ ಅವಶ್ಯಕತೆ ಇಲ್ಲದೇ ಇರುವುದರಿಂದ ಎಕ್ಸ್ಪೆನ್ಸ್ ರೇಶಿಯೋ ಬಹಳ ಕಡಿಮೆ ಇರುತ್ತದೆ.