ಎನ್ಪಿಎಸ್ ವಾತ್ಸಲ್ಯ ಯೋಜನೆ 2024ರ ಸೆ. 18ರಂದು ಚಾಲನೆಗೊಂಡಿದೆ. ನ್ಯಾಷನಲ್ ಪೆನ್ಷನ್ ಸಿಸ್ಟಂನ ಮುಂದುವರಿದ ಭಾಗವಾಗಿರುವ ಇದು ಮಕ್ಕಳ ಹಣಕಾಸು ಭದ್ರತೆಗೆ ಸಹಾಯವಾಗುತ್ತದೆ.
ಸೆ. 18ಕ್ಕೆ ಚಾಲನೆ
Pic: Getty, PTI images
18 ವರ್ಷದೊಳಗೆ ಯಾವುದೇ ವಯಸ್ಸಿನ ಮಗುವಿನ ಹೆಸರಿನಲ್ಲಿ ಪಾಲಕರು ಎನ್ಪಿಎಸ್ ವಾತ್ಸಲ್ಯ ಯೋಜನೆ ಅಡಿ ಖಾತೆ ಆರಂಭಿಸಬಹುದು. ಬ್ಯಾಂಕು, ಅಂಚೆ ಕಚೇರಿ, ಪೆನ್ಷನ್ ಫಂಡ್ಗಳಲ್ಲಿ ಖಾತೆ ತೆರೆಯಬಹುದು.
ಮಕ್ಕಳ ಹೆಸರಲ್ಲಿ...
Pic: Getty, PTI images
ಎನ್ಪಿಎಸ್ ವಾತ್ಸಲ್ಯ ಯೋಜನೆಯ ಖಾತೆಯಲ್ಲಿ ಕನಿಷ್ಠ ಹೂಡಿಕೆ 1,000 ರೂ ಇದೆ. ಇದು ಒಂದು ವರ್ಷದ ಹೂಡಿಕೆ. ಇದಕ್ಕೂ ಹೆಚ್ಚು ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು.
ಕನಿಷ್ಠ 1,000 ರೂ
Pic: Getty, PTI images
ಎನ್ಪಿಎಸ್ನಲ್ಲಿ ಠೇವಣಿ ಇರಿಸಲಾಗುವ ಹಣವನ್ನು ಈಕ್ವಿಟಿ, ಡೆಟ್ ಮತ್ತು ಗವರ್ನ್ಮೆಂಟ್ ಸೆಕ್ಯೂಟರಿಟೀಸ್ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಯಾವುದಕ್ಕೆ ಎಷ್ಟು ಹೂಡಿಕೆ ಮಾಡಬಹುದು ಎನ್ನುವ ಆಯ್ಕೆಗಳಿರುತ್ತವೆ.
ಮಾರುಕಟ್ಟೆಯಲ್ಲಿ ಹೂಡಿಕೆ
Pic: Getty, PTI images
ಈಕ್ವಿಟಿಗಳಿಂದ ಶೇ. 14, ಡೆಟ್ ಮತ್ತು ಸೆಕ್ಯೂರಿಟೀಸ್ನಿಂದ ಶೇ. 8.8-9.1ರಷ್ಟು ರಿಟರ್ನ್ ಸಿಕ್ಕಿದೆ. ವಾಸ್ತವವೆನಿಸುವ ಅಂದಾಜಿನ ಪ್ರಕಾರ ಎನ್ಪಿಎಸ್ ವಾತ್ಸಲ್ಯ ವಾರ್ಷಿಕವಾಗಿ ಶೇ. 10-12ರಷ್ಟು ರಿಟರ್ನ್ ತಂದುಕೊಡಬಲ್ಲುದು.
ಶೇ. 10-12 ರಿಟರ್ನ್ಸ್
Pic: Getty, PTI images
ಮಗು ಹೆಸರಲ್ಲಿ ವರ್ಷಕ್ಕೆ 10,000 ರೂ ಹೂಡಿಕೆ ಮಾಡುತ್ತೀರಿ ಎಂದಾದಲ್ಲಿ, ಮತ್ತು ಎನ್ಪಿಎಸ್ ಫಂಡ್ ಶೇ. 10ರಷ್ಟು ಬೆಳೆದರೆ 18 ವರ್ಷಕ್ಕೆ ನಿಮ್ಮ 1.8 ಲಕ್ಷ ರೂ ಹೂಡಿಕೆ 5 ಲಕ್ಷ ರೂ ಆಗುತ್ತದೆ. ಹೂಡಿಕೆ ಮೊತ್ತ ಹೆಚ್ಚಿಸಿದಲ್ಲಿ ಇನ್ನೂ ಹೆಚ್ಚು ಲಾಭ ಮಾಡಬಹುದು.
ಎಷ್ಟು ಬೆಳೆಯುತ್ತೆ?
Pic: Getty, PTI images
ಒಂದು ವೇಳೆ ನಿಮ್ಮ ಮಗು 18 ವರ್ಷ ವಯಸ್ಸಿನ ಬಳಿಕ ಹೂಡಿಕೆಯನ್ನು ನಿವೃತ್ತಿ ಆಗುವವರೆಗೂ ಮುಂದುವರಿಸಿದರೆ ಅದೇ ದರ ಲೆಕ್ಕಾಚಾರದ ಪ್ರಕಾರ ಹೂಡಿಕೆಯು 2.75 ಕೋಟಿ ರೂ ಆಗುತ್ತದೆ.