By: Vijayasarathy SN

ಅಮಿತಾಭ್ ಬಚ್ಚನ್​ಗೆ ಸಂಪತ್ತು ತಂದ ಈ ಷೇರು ನಿಮ್ಮಲ್ಲಿದೆಯಾ?

22 Dec 2023

ಬಾಲಿವುಡ್ ಬಿಗ್ ಬಿ ಎಂದು ಹೆಸರಾಗಿರುವ ಅಮಿತಾಭ್ ಬಚ್ಚನ್ ಸಿನಿಮಾ ಕ್ಷೇತ್ರದಲ್ಲಿ ಅಕ್ಷರಶಃ ಲೆಜೆಂಡ್. ಎವರ್​ಗ್ರೀನ್ ನಟ.

ಲೆಜೆಂಡ್

(Pic credit: Google)

ಸಿನಿಮಾ ಬಿಟ್ಟು ಬೇರೆ ಕ್ಷೇತ್ರಗಳಲ್ಲಿ ಅಮಿಬಾಭ್ ಬಚ್ಚನ್​ರದ್ದು ಮಿಶ್ರ ಅನುಭವ. ಷೇರು ಹೂಡಿಕೆಯಲ್ಲಿ ಲಕ್ ಹೊಂದಿದ್ದಾರೆ.

ಲಕ್ ಷೇರು

(Pic credit: Google)

ಅಮಿತಾಭ್ ಬಚ್ಚನ್ ಅವರ ಹೂಡಿಕೆ ಬಹಳಷ್ಟು ಇರುವ ಒಂದು ಷೇರು ಈಗ ಮಲ್ಟಿಬ್ಯಾಗರ್ ಸ್ಟಾಕ್ ಎನಿಸಿದೆ.

ಮಲ್ಟಿಬ್ಯಾಗರ್

(Pic credit: Google)

ಬಚ್ಚನ್​ಗೆ ಅದೃಷ್ಟ ತಂದುಕೊಟ್ಟಿರುವ ಷೇರು ಡಿಪಿ ವೈರ್ಸ್​ನದ್ದು. ಮಧ್ಯಪ್ರದೇಶ ಮೂಲದ ಕಂಪನಿ ಇದು.

ಡಿಪಿ ವೈರ್ಸ್

(Pic credit: Google)

ಷೇರುಮಾರುಕಟ್ಟೆ ಬಹಳ ವಿಸ್ಮಯಕಾರಿ ಜಗತ್ತು. ಸಾಕಷ್ಟು ಜನರು ನಷ್ಟ ಮಾಡಿಕೊಂಡಿದ್ದಾರೆ. ಇನ್ನೂ ಹಲವರು ಭರ್ಜರಿ ಲಾಭ ಮಾಡಿದ್ದಾರೆ.

ಷೇರು ಮ್ಯಾಜಿಕ್

(Pic credit: Google)

ಡಿಪಿ ವೈರ್ಸ್ ಉಕ್ಕಿನ ತಂತಿಗಳನ್ನು ತಯಾರಿಸುವ ಕಂಪನಿ. ಮೂರು ವರ್ಷಗಳಿಂದ ಡಿಪಿ ವೈರ್ಸ್ ಷೇರು ಮಲ್ಟಿ ಬ್ಯಾಗರ್ ಎನಿಸಿದೆ.

ಉಕ್ಕು ಕಂಪನಿ

(Pic credit: Google)

ಅಮಿತಾಭ್ ಬಚ್ಚನ್ ಡಿಪಿ ವೈರ್ಸ್ ಸಂಸ್ಥೆಯ 2 ಲಕ್ಷಕ್ಕೂ ಹೆಚ್ಚು ಷೇರುಗಳನ್ನು ಹೊಂದಿದ್ದಾರೆ. ಅವರ ಷೇರುಸಂಪತ್ತು 14 ಕೋಟಿಗಿಂತ ಹೆಚ್ಚು.

ಬಚ್ಚನ್ ಪಾಲು

(Pic credit: Google)

ಡಿಪಿ ವೈರ್ಸ್​ನಲ್ಲಿ ಬಚ್ಚನ್ ಈ ಹಿಂದೆ 3,32,800 ಷೇರುಗಳನ್ನು (ಶೇ. 2.45) ಹೊಂದಿದ್ದರು. ಕೆಲ ತಿಂಗಳ ಹಿಂದೆ ಒಂದಷ್ಟು ಷೇರು ಮಾರಿದರು.

ಮಾರಿದ್ದರು...

(Pic credit: Google)

ಸದ್ಯ ಡಿಪಿ ವೈರ್ಸ್ ಸಂಸ್ಥೆಯಲ್ಲಿ ಅಮಿತಾಭ್ ಬಚ್ಚನ್ ಷೇರುಪಾಲು ಶೇ. 1.47ರಷ್ಟು ಇರುವುದು ಗೊತ್ತಾಗಿದೆ.

ಸದ್ಯದ ಷೇರು

(Pic credit: Google)

ಮೂರು ವರ್ಷದ ಹಿಂದೆ 70 ರೂ ಇದ್ದ ಅದರ ಷೇರುಬೆಲೆ ಇದೀಗ 590 ರೂ ಆಗಿದೆ. ಅಂದರೆ 1 ಲಕ್ಷ ರೂ ಹೂಡಿಕೆ 3 ವರ್ಷದಲ್ಲಿ 59 ಲಕ್ಷ ಆದಂತೆ.

ಭರ್ಜರಿ ಲಾಭ

(Pic credit: Google)