2024ರಲ್ಲಿ ಸಾಧ್ಯವಾದರೆ ಈ ಬಿಸಿನೆಸ್ ಟ್ರೈ ಮಾಡಿ

By: Vijayasarathy SN

21 Dec 2023

ಟ್ಯೂಷನ್

ಕೋಚಿಂಗ್ ಸೆಂಟರ್ ಅಥವಾ ಟ್ಯೂಷನ್​ಗಳಿಗೆ ಯಾವತ್ತೂ ಬೇಡಿಕೆ ಇದೆ. ಪ್ರೀಸ್ಕೂಲ್ ಮಕ್ಕಳಿಂದ ಹಿಡಿದು ಐಎಎಸ್ ತಯಾರಿಯವರೆಗೂ ಕೋಚಿಂಗ್ ಇನ್ಸ್​ಟಿಟ್ಯೂಟ್​ಗಳಿವೆ.

(Pic credit: Google)

ಫುಡ್ ಟ್ರಕ್

ನಿಮಗೆ ಹೋಟೆಲ್ ಆರಂಭಿಸುವುದು ರಿಸ್ಕ್ ಎನಿಸಿದರೆ ಫುಡ್ ಟ್ರಕ್ ಆರಂಭಿಸಬಹುದು. ವಾಹನಗಳಲ್ಲಿ ಮಾರಲಾಗುವ ಆಹಾರ ಬಹಳ ಬೇಗ ಜನರನ್ನು ಆಕರ್ಷಿಸುತ್ತದೆ.

(Pic credit: Google)

ಬೇಕರಿ

ಬೇಕರಿ ವಸ್ತುಗಳಿಗೆ ಬಹಳ ಬೇಡಿಕೆ ಇದೆ. ಬಿಸ್ಕತ್, ಚೌಚೌ, ಬ್ರೆಡ್, ಕೇಕ್ ಇತ್ಯಾದಿಯನ್ನು ಮನೆಯಲ್ಲೇ ತಯಾರಿಸಿ, ಬೇಕರಿ ಇತ್ಯಾದಿ ಅಂಗಡಿಗಳಿಗೆ ಮಾರಬಹುದು.

(Pic credit: Google)

ಆರ್ಗ್ಯಾನಿಕ್ ಫಾರ್ಮಿಂಗ್

ಸಾವಯವ ವಸ್ತುಗಳಿಗೆ ಒಳ್ಳೆಯ ಮಾರುಕಟ್ಟೆ ಇದೆ. ನಿಮ್ಮಲ್ಲಿ ಕೃಷಿ ಭೂಮಿ ಇದ್ದಲ್ಲಿ ಸಾವಯವ ಬೇಸಾಯ ಮಾಡಿರಿ. ಸುಧಾರಿತ ತಂತ್ರಜ್ಞಾನದಿಂದ ಈಗ ಕೃಷಿ ಸುಲಭ.

(Pic credit: Google)

ಕರಕುಶಲ ವಸ್ತು

ಕ್ಯಾಂಡಲ್, ಸೋಪು ಇತ್ಯಾದಿಯನ್ನು ತಯಾರಿಸಿ ಮಾರುವ ಬಿಸಿನೆಸ್ ಒಳ್ಳೆಯ ಲಾಭ ತರುತ್ತದೆ. ಶಾಪಿಫೈ ಇತ್ಯಾದಿ ಕಡೆ ನಿಮ್ಮ ಉತ್ಪನ್ನಗಳನ್ನು ಮಾರ್ಕೆಟ್ ಮಾಡಬಹುದು.

(Pic credit: Google)

ಪ್ರಾಣಿ ಸಾಕುವಿಕೆ

ಪೆಟ್ ಗ್ರೂಮಿಂಗ್ ಮತ್ತು ಡಾಗ್ ವಾಕಿಂಗ್ ಬಿಸಿನೆಸ್ ಹೆಚ್ಚೆಚ್ಚು ಬೆಳೆಯುತ್ತಿದೆ. ಸಾಕುಪ್ರಾಣಿಗಳನ್ನು ಮಕ್ಕಳಂತೆ ಆರೈಕೆ ಮಾಡಬೇಕು. ಹೀಗಾಗಿ, ಪ್ರಾಣಿ ಆರೈಕೆ ಕೇಂದ್ರಗಳಿಗೆ ಬೇಡಿಕೆ ಇದೆ.

(Pic credit: Google)

ಚೈಲ್ಡ್ ಕೇರ್

ಇವತ್ತು ನ್ಯೂಕ್ಲಿಯಾರ್ ಫ್ಯಾಮಿಲಿಗಳೇ ಹೆಚ್ಚಿದ್ದು, ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ. ಮಗು ನೋಡಿಕೊಳ್ಳುವ ಡೇ ಕೇರ್ ಸೆಂಟರ್​ಗಳಿಗೆ ಬೇಡಿಕೆ ಇದೆ.

(Pic credit: Google)

ಇವೆಂಟ್ ಪ್ಲಾನಿಂಗ್

ಸಭೆ, ಸಮಾರಂಭಗಳನ್ನು ಆಯೋಜಿಸಲು, ಡೆಕೋರೇಶನ್ ಮಾಡಲು ಇವೇ ಮುಂತಾದ ಕೆಲಸಗಳಿಗೆ ಬೇಡಿಕೆ ಇದೆ. ಇದು ನೀವು ಮಾಡಬಲ್ಲಿರಾದರೆ ಒಳ್ಳೆಯ ಬಿಸಿನೆಸ್.

(Pic credit: Google)