ಆ್ಯಪಲ್ ಕಂಪನಿಗೆ ಭಾರತ ಅತಿ ಮುಖ್ಯ ಮಾರುಕಟ್ಟೆ; ಇದು ಯಾಕೆ?
06 Nov 2023
By: Vijayasarathy SN
ಆ್ಯಪಲ್ ವಿಶ್ವದ ಅತ್ಯಂತ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದು. ಐಫೋನ್, ಐಪ್ಯಾಡ್ ಇತ್ಯಾದಿ ಉತ್ಪನ್ನಗಳನ್ನು ಮಾರಾಟ ಮಾಡುತ್ತವೆ. ಸ್ಮಾರ್ಟ್ಫೋನ್ ಪ್ರಿಯರ ಫೇವರಿಟ್.
ನೆಚ್ಚಿನ ಆ್ಯಪಲ್
Pic credit: Google
ಆ್ಯಪಲ್ ಕಂಪನಿ ಸೆಪ್ಟೆಂಬರ್ ಕ್ವಾರ್ಟರ್ನಲ್ಲಿ ದಾಖಲೆಯ ಆದಾಯ ಮಾಡಿದೆ. ಭಾರತದಲ್ಲಿ ಮಾರಾಟವಾದ ಸ್ಮಾರ್ಟ್ಫೋನ್ಗಳಲ್ಲಿ ಆ್ಯಪಲ್ ಪಾಲು 6% ಇದೆ.
ದಾಖಲೆ ಆದಾಯ
Pic credit: Google
2019ರಲ್ಲಿ ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಆ್ಯಪಲ್ ಪಾಲು ಶೇ. 1ರಷ್ಟಿತ್ತು. ಈಗ ಶೇ. 6ಕ್ಕೆ ಬೆಳೆದಿರುವುದು ಗಮನಾರ್ಹ.
ಶೇ. 6 ಪಾಲು
Pic credit: Google
ಈ ವರ್ಷದಲ್ಲಿ ಭಾರತದಲ್ಲಿ ಆ್ಯಪಲ್ ಸಂಸ್ಥೆ 10 ಬಿಲಿಯನ್ ಡಾಲರ್ (ಸುಮಾರು 83,000 ಕೋಟಿ ರೂ) ಆದಾಯ ಗಳಿಸುವ ನಿರೀಕ್ಷೆಯಲ್ಲಿದೆ.
10 ಬಿಲಿಯನ್ ಡಾಲರ್
Pic credit: Google
ಈ ವರ್ಷದ ಅಂತ್ಯಕ್ಕೆ 90 ಲಕ್ಷ ಐಫೋನ್ಗಳು ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದರ ಸಂಖ್ಯೆ ಶೇ. 10ರಷ್ಟು ಹೆಚ್ಚಿದೆ.
90 ಲಕ್ಷ ಐಫೋನ್
Pic credit: Google
ಭಾರತ ಸಾಂಪ್ರದಾಯಿಕವಾಗಿ ಆಂಡ್ರಾಯ್ಡ್ ಮಾರುಕಟ್ಟೆಯಾಗಿದೆ. ಹೀಗಾಗಿ, ಐಫೋನ್ಗಳ ಮಾರಾಟಕ್ಕೆ ಭರ್ಜರಿ ಅವಕಾಶ ಇದೆ ಎಂದು ಆ್ಯಪಲ್ ಸಿಇಒ ಟಿಮ್ ಕುಕ್ ಹೇಳುತ್ತಾರೆ.
ಟಿಮ್ ಕುಕ್ ಹೇಳಿಕೆ
Pic credit: Google
ಭಾರತದಲ್ಲಿ ಸಾಕಷ್ಟು ಸಂಖ್ಯೆಯ ಜನರು ಮಧ್ಯಮವರ್ಗ ಸೇರುತ್ತಿದ್ದಾರೆ. ಹೀಗಾಗಿ ಅದು ಅಸಾಧಾರಣ ಮಾರುಕಟ್ಟೆಯಾಗಿದೆ. ಇದು ಆ್ಯಪಲ್ಗೆ ಸಕಾಲ ಎಂಬುದು ಕುಕ್ ಅನಿಸಿಕೆ.
ಅಸಾಧಾರಣ
Pic credit: Google
ಭಾರತದಲ್ಲಿ ಕೆಲವೆಡೆ ಆ್ಯಪಲ್ ಐಫೋನ್ಗಳ ಅಸೆಂಬ್ಲಿಂಗ್ ನಡೆಯುತ್ತಿದೆ. ಎರಡು ಕಡೆ ಆ್ಯಪಲ್ ಸ್ಟೋರ್ಗಳು ತೆರೆಯಲಾಗಿದೆ. ಒಟ್ಟಾರೆ ಭಾರತದಲ್ಲಿ ಆ್ಯಪಲ್ ಕಾಲ ಶುರುವಾಗಿದೆ.
ಆ್ಯಪಲ್ ಬಿಸಿನೆಸ್
Pic credit: Google
Next: ಸಮಾಜ ಪರಿವರ್ತಿಸಬಲ್ಲ ಮಹಾದಾನಿಗಳು...
ಇನ್ನಷ್ಟು ನೋಡಿ