ಸಮಾಜ ಪರಿವರ್ತಿಸಬಲ್ಲ ಮಹಾದಾನಿಗಳು..! ಕನ್ನಡಿಗರಿದ್ದಾರೆ ಗಮನಿಸಿ..!

By: Vijayasarathy SN

03 Nov 2023

ದಾನಿಗಳ ಪಟ್ಟಿ

EdelGive Hurun India Philanthropy Index 2023 ಪಟ್ಟಿ ಪ್ರಕಟವಾಗಿದ್ದು 2022-23ರಲ್ಲಿ ಭಾರತದ ಮಹಾದಾನಿಗಳನ್ನು ಹೆಸರಿಸಲಾಗಿದೆ. ಶಿವ್ ನಾದರ್ ನಂ. 1 ಎನಿಸಿದ್ದಾರೆ.

Pic Credit: Google

ಕರ್ನಾಟಕದವರು

ಮುಕೇಶ್ ಅಂಬಾನಿ, ಗೌತಮ್ ಅದಾನಿ ಮೊದಲಾದವರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 100 ಕೋಟಿಗೂ ಹೆಚ್ಚು ದಾನ ಮಾಡಿದ 14 ಮಹಾದಾನಿಗಳಲ್ಲಿ ಕನ್ನಡಿಗರಿದ್ದಾರೆ.

Pic Credit: Google

ಅಜೀಂ ಪ್ರೇಮ್​ಜಿ

ಐಟಿ ಕಂಪನಿ ವಿಪ್ರೋದ ಸಂಸ್ಥಾಪಕ ಅಜೀಮ್ ಪ್ರೇಮ್​ಜಿ 2022-23ರಲ್ಲಿ 1,774 ಕೋಟಿ ರೂ ದಾನ ಮಾಡಿದ್ದಾರೆ. ಶಿವ ನಾದರ್ ಬಿಟ್ಟರೆ ಅತಿಹೆಚ್ಚು ದಾನ ಮಾಡಿದ್ದು ಇವರೆಯೇ.

Pic Credit: Google

ನಂದನ್ ನಿಲೇಕಣಿ

ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಒಂದು ವರ್ಷದಲ್ಲಿ 189 ಕೋಟಿ ರೂ ದಾನ ಮಾಡಿದ್ದಾರೆ. ವಿವಿಧ ಸಂಘ ಸಂಸ್ಥೆಗಳಿಗೆ ಇವರು ಸಹಾಯ ಮಾಡಿದ್ದಾರೆ.

Pic Credit: Google

ರೋಹಿಣಿ

ನಂದನ್ ನಿಲೇಕಣಿ ಪತ್ನಿಯಾದ ರೋಹಿಣಿ ನಿಲೇಕಣಿ ಕಳೆದ ಹಣಕಾಸು ವರ್ಷದಲ್ಲಿ ಮಾಡಿದ ದಾನ 170 ಕೋಟಿ ರೂ. ಅತಿಹೆಚ್ಚು ದಾನ ಮಾಡಿದ ಮಹಿಳೆಯರಲ್ಲಿ ಅವರು ಅಗ್ರ.

Pic Credit: Google

ನಿಖಿಲ್ ಕಾಮತ್

ಝೀರೋಧ ಕಂಪನಿಯ ಸಹ-ಸಂಸ್ಥಾಪಕ ನಿಖಿಲ್ ಕಾಮತ್ 110 ಕೋಟಿ ರೂ ದಾನ ಮಾಡಿ ಸೈ ಎನಿಸಿದ್ದಾರೆ. 100 ಕೋಟಿ ರೂ ದಾನ ಮಾಡಿದ ಅತಿಕಿರಿಯ ಭಾರತೀಯ ಎನಿಸಿದ್ದಾರೆ.

Pic Credit: Google

ನಿತಿನ್ ಕಾಮತ್

ಝೀರೋಧ ಸಹ-ಸಂಸ್ಥಾಪಕ ಮತ್ತು ಹಾಲಿ ಸಿಇಒ ಆಗಿರುವ ನಿತಿನ್ ಕಾಮತ್ ಕೂಡ ದೊಡ್ಡ ಮಟ್ಟದಲ್ಲಿ ದಾನ ಮಾಡಿದ್ದಾರೆ. ಹವಾಮಾನ ಸಂಬಂಧಿತ ಚಟುವಟಿಕೆಗಳನ್ನು ಇವರು ಬೆಂಬಲಿಸುತ್ತಾರೆ.

Pic Credit: Google

ಕಿರಣ್ ಷಾ

ಬೆಂಗಳೂರಿನ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಷಾ ಕೂಡ ಫಿಲಾಂತ್ರೋಪಿಗೆ ಹೆಸರುವಾಸಿಯಾದವರು. ಮೊದಲಿಂದಲೂ ಸಾಮಾಜಿಕ ಕಾರ್ಯಗಳಿಗೆ ನೆರವಾಗುತ್ತಾ ಬಂದಿದ್ದಾರೆ.

Pic Credit: Google