By: Vijayasarathy SN
30 Oct 2023
ಜಾಗತಿಕವಾಗಿ ಇರುವ ಸ್ಥಿತಿಯಂತೆ ಭಾರತದಲ್ಲೂ ಪ್ರಮುಖ ಟೆಕ್ ಕಂಪನಿಗಳು ಲೇ ಆಫ್ ಮಾಡುತ್ತಿವೆ. ಟಾಪ್ 10 ಐಟಿ ಕಂಪನಿಗಳಲ್ಲಿ ಒಂಬತ್ತು ಕಂಪನಿಗಳಲ್ಲಿ ಉದ್ಯೋಗನಷ್ಟವಾಗಿದೆ.
ಉದ್ಯೋಗನಷ್ಟ
Pic credit: Google
2023ರ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ ಈ ಐಟಿ ಕಂಪನಿಗಳಲ್ಲಿ ಉದ್ಯೋಗಿಗಳ ಸಂಖ್ಯೆ 51,776ಯಷ್ಟು ಇಳಿದಿದೆ. ಕಳೆದ 25 ವರ್ಷದಲ್ಲಿ ಈ ರೀತಿ ಕಡಿಮೆ ಆಗಿದ್ದು ಇದೇ ಮೊದಲು.
ಇದೇ ಮೊದಲು
Pic credit: Google
ಭಾರತದ ಎರಡನೇ ಅತಿದೊಡ್ಡ ಐಟಿ ಕಂಪನಿ ಇನ್ಫೋಸಿಸ್ನಲ್ಲಿ ಅತಿಹೆಚ್ಚು ಉದ್ಯೋಗನಷ್ಟವಾಗಿದೆ. 14,470 ಮಂದಿ ಈ ಅರ್ಧವರ್ಷದಲ್ಲಿ ಕೆಲಸ ಕಳೆದುಕೊಂಡಿದ್ದಾರೆ.
ಇನ್ಫೋಸಿಸ್
Pic credit: Google
ಅಜೀಮ್ ಪ್ರೇಮ್ಜಿ ಮಾಲಕತ್ವದ ವಿಪ್ರೋ ಸಂಸ್ಥೆಯಲ್ಲಿ ಉದ್ಯೋಗಿಗಳ ಸಂಖ್ಯೆ 13,863ನಷ್ಟು ಇಳಿದಿದೆ. ಈಗ ಇಲ್ಲಿ 2,44,707 ಉದ್ಯೋಗಿಗಳು ಇದ್ದಾರೆ.
ವಿಪ್ರೋ
Pic credit: Google
ಕಾಗ್ನೈಜೆಂಟ್ ಟೆಕ್ನಾಲಜೀಸ್ ಸಂಸ್ಥೆಯಲ್ಲಿ ಈ ಅರ್ಧವರ್ಷದ ಅವಧಿಯಲ್ಲಿ ಉದ್ಯೋಗಿಗಳ ಸಂಖ್ಯೆ 9,700ಯಷ್ಟು ಕಡಿಮೆ ಆಗಿದೆ. ಇಲ್ಲಿ ಒಟ್ಟು 3.45 ಲಕ್ಷ ಉದ್ಯೋಗಿಗಳಿದ್ದಾರೆ.
ಕಾಗ್ನೈಜೆಂಟ್
Pic credit: Google
ಭಾರತದ ಅತಿದೊಡ್ಡ ಐಟಿ ಸಂಸ್ಥೆ ಮತ್ತು ಅತಿಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಟಿಸಿಎಸ್ನಲ್ಲಿ ಒಟ್ಟು ಉದ್ಯೋಗಿಗಳ ಸಂಖ್ಯೆ 5,810ನಷ್ಟು ಕಡಿಮೆ ಆಗಿ 6,08,985 ತಲುಪಿದೆ.
ಟಿಸಿಎಸ್
Pic credit: Google
ಎಚ್ಸಿಎಲ್ ಟೆಕ್ನಾಲಜೀಸ್ ಸಂಸ್ಥೆಯಲ್ಲಿ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ ಉದ್ಯೋಗಿಗಳ ಸಂಖ್ಯೆ 4,805ಯಷ್ಟು ಕಡಿಮೆ ಆಗಿದೆ. 2,21,139 ಮಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ.
ಎಚ್ಸಿಎಲ್
Pic credit: Google
ಟೆಕ್ ಮಹೀಂದ್ರ, ಎಲ್ಟಿಐ ಮೈಂಡ್ ಟ್ರೀ, ಎಂಫೆಸಿಸ್, ಪರ್ಸಿಸ್ಟೆಂಟ್ ಕಂಪನಿಗಳಲ್ಲೂ ಉದ್ಯೋಗಿಗಳ ಸಂಖ್ಯೆ ಕಡಿಮೆ ಆಗಿದೆ. ಎಲ್ ಅಂಡ್ ಟಿಯಲ್ಲಿ ಮಾತ್ರವೇ ಸಂಖ್ಯೆ ಏರಿದೆ.
ಇತರೆಡೆ
Pic credit: Google
ಧನ್ಯವಾದಗಳು